Roopika In Tea Junction.News

Wednesday, September 02, 2020

90

ತನಿಖಾಧಿಕಾರಿ ಪಾತ್ರದಲ್ಲಿ ರೂಪಿಕಾ

       ಭರತನಾಟ್ಯ ಪ್ರವೀಣೆ, ನಟಿ ರೂಪಿಕ ಸಂಪ್ರದಾಯಸ್ಥ ಹುಡುಗಿ, ಲವ್ಲಿ ಪಾತ್ರಗಳಲ್ಲಿ ಅಭಿನಯಿಸಿದ್ದು, ಈಗ ಮೊದಲಬಾರಿ ‘ಟೀ ಜಂಕ್ಷನ್’ ಎನ್ನುವ ಹೊಸ ಚಿತ್ರದಲ್ಲಿ ಖಾಕಿ ಖದರ್ ತೋರಿಸುತ್ತಿದ್ದಾರೆ. ಬದಲಾದ ಗೆಟಪ್ ಬಗ್ಗೆ ಮಾತನಾಡುವ ಇವರು ಚಿತ್ರರಂಗಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಹೋಮ್ಲಿ ಮತ್ತು ಟ್ರಡಿಷನಲ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದೆ. ಅದರಿಂದ ಪ್ರೇಕ್ಷಕರು ನನ್ನನ್ನು ಅಂಥದೇ ಪಾತ್ರಗಳಲ್ಲಿ ಗುರುತಿಸಿದ್ದರು. ಆದರೆ ಈ ಸಿನಿಮಾದಲ್ಲಿ ಹೊಸದಾದ ಕ್ಯಾರೆಕ್ಟರ್ ಪ್ಲೇ ಮಾಡಿದ್ದು ಸಂತಸ ತಂದಿದೆ. ಸ್ಪೆಷಲ್ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಗಂಭೀರವಾಗಿರುತ್ತೇನೆ. ಇಂತಹ ಪಾತ್ರ ಮಾಡಿರುವುದಿಲ್ಲ. ಇದೊಂಥರ ಹೊಸ ಅನುಭವ ಕೊಟ್ಟಿದೆ ಎನ್ನುತ್ತಾರೆ.

       ಇಡೀ ಸಿನಿಮಾವು ಮೂರು ಪಾತ್ರಗಳ ಸುತ್ತ ಹೋಗಲಿದ್ದು, ಹೆಚ್ಚು ಕುತೂಹಲ ಅಂಶಗಳು ಇರುವುದು ವಿಶೇಷ. ತಾರಾಗಣದಲ್ಲಿ ಅಜಯ್‌ರಾಜ್, ನಾಸೀರ್, ರೇಣುಕ್ ಅಭಿನಯಿಸಿದ್ದಾರೆ. ಆರ್ಯಪುತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ರೋಶನ್‌ಬಾಬು ಕತೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರೋಶ್ ಛಾಯಾಗ್ರಹಣ, ಜೀವನ್‌ಪ್ರಕಾಶ್ ಸಂಕಲನವಿದೆ. ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಸಲಾಗಿದ್ದು, ಕೊನೆಯ ಹಂತದ ಶೂಟಿಂಗ್ ಬಾಕಿಇದೆ. ಗೌರಿ-ಗಣೇಶ ಕ್ರಿಯೇಶನ್ಸ್ ಬ್ಯಾನರ್ ಅಡಿಯಲಿ ಚಿತ್ರವು ನಿರ್ಮಾಣವಾಗುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,