S.P.Balsubramanyam.News

Thursday, September 03, 2020

31

ಎಸ್ಪಿಬಿ ಚೇತರಿಕೆಗೆ ಚಂದನವನದ ಪ್ರಾರ್ಥನೆ

        ಕೊರೋನಾ ಸೊಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಶೀಘ್ರ ಗುಣಮುಖರಾಗಲೆಂದು ಕನ್ನಡ ಚಿತ್ರರಂಗವು ವಿಶೇಷ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ನಡೆಯಿತು. ನಾದಬ್ರಹ್ಮ ಹಂಸಲೇಖಾ ಮಾತನಾಡಿ ಎಸ್‌ಪಿಬಿ ೪೦ ಸಾವಿರ ಗೀತೆ ಹಾಡಿದರೂ ಇಂದಿಗೂ ದಣಿಯದ ದನಿ. ಶತಮಾನದ ಅವತಾರ ಪುರುಷ ಎಂಬ ಮಾತು ಅವರ ಸಾಧನೆಗೆ ತುಂಬಾ ಚಿಕ್ಕದು. ಅವರೇನಿದ್ದರೂ ೫ ಶತಮಾನಗಳ ಅವತಾರ ಪುರುಷ ಎಂದು ಹೇಳಿದರು.

      ಮೃತ್ಯುಂಜಯ ಮಂತ್ರ ಪಠಣ ಮಾಡುವ ಮೂಲಕ ಎಸ್‌ಬಿಪಿ ಜೊತೆಗೆ  ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು ಗಾಯಕ ವಿಜಯಪ್ರಕಾಶ್. ಅಂಬರೀಷ್ ಮತ್ತು ಎಸ್‌ಪಿಬಿ ಒಡನಾಟ ಹೇಗಿತ್ತು ಎಂಬುದನ್ನು ಸುಮಲತಾ ನೆನಪು ಮಾಡಿಕೊಂಡರು. ‘ರಾಖಿ’ ಚಿತ್ರದಲ್ಲಿ ಒಂದು ಹಾಡಿಗೆ ಎಸ್‌ಪಿಬಿ ಧ್ವನಿ ನೀಡಿದ್ದರು ಅಂತ ದಶಕದ ಹಿಂದಿನ ಕತೆಯನ್ನು ಯಶ್ ನೆನಪಿಸಿಕೊಂಡು ಮತ್ತೆ ಅವರ ಹಾಡನ್ನು ಕೇಳವಂತಾಗಲಿ ಎಂದರು.

      ಸಮಾರಂಭದಲ್ಲಿ ರಾಜೇಂದ್ರಸಿಂಗ್‌ಬಾಬು, ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಅಕಾಡಮಿ ಅಧ್ಯಕ್ಷ ಸುನಿಲ್‌ಪುರಾಣಿಕ್, ದೊಡ್ಡಣ್ಣ, ನಟ ಶ್ರೀನಿವಾಸಮೂರ್ತಿ, ನಿರ್ಮಾಪಕ ಸೂರಪ್ಪಬಾಬು ಮುಂತಾದವರು ಉಪಸ್ತಿತರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,