Betaala.Film News

Saturday, September 12, 2020

174

ದೆವ್ವದ ಆಸೆ ಪೂರೈಸುವ ಟೆಕ್ಕಿ

       ಜನರು ಯಾವಾಗಲೂ ಹೊಸತನವನ್ನು ಕೇಳುತ್ತಾರೆ. ಅದಕ್ಕಾಗಿ ವಿಭಿನ್ನ ಅಂಶಗಳು  ಇರುವ ಚಿತ್ರಗಳು ಬರುತ್ತಿವೆ. ಆ ಸಾಲಿಗೆ ‘ಬೇತಾಳ’ ಸಿನಿಮಾವು ಸೇರ್ಪಡೆಯಾಗಿದೆ. ಕತೆಯ  ಕುರಿತು ಹೇಳುವುದಾದರೆ ಮನೆಯಲ್ಲಿ ವಾಸವಿರುವ ಟೆಕ್ಕಿಗೆ ಆಗಾಗ ಕೆಟ್ಟ ಕನಸುಗಳು ಬೀಳುತ್ತಿದ್ದವೆಂದು, ಮನೆ ಬದಲಿಸಲು ನಿರ್ಣಯ ತೆಗೆದುಕೊಳ್ಳುತ್ತಾನೆ. ಆ ಹುಡುಕಾಟದಲ್ಲಿ  ಅಂತಿಮವಾಗಿ ಮನೆ ಸಿಗುತ್ತದೆ. ಅಲ್ಲಿಗೆ ಬಂದ ಮೇಲೆ ದೆವ್ವ ಇರುವುದು ಗೊತ್ತಾಗುತ್ತದೆ.  ಅಲ್ಲಿ ದೆವ್ವಕ್ಕೆ ಒಂದು ಆಸೆ ಇರುತ್ತದೆ. ಅದನ್ನು ಪೂರೈಸುವುದಾದರೆ ತಾನು ಇಲ್ಲಿಂದ ಹೋಗುವೆನೆಂದು ಷರತ್ತು ಹಾಕುತ್ತದೆ. ಆಗ ಆತನು ಅದರ ಆಸೆಯನ್ನು ಪೂರೈಸಿದನೇ ಇಲ್ಲವೆ ಎನ್ನುವುದನ್ನು  ಕಾಮಿಡಿ ಮೂಲಕ ತೋರಿಸಲಾಗಿದೆ. ಕಸ್ತೂರಿಜಗನ್ನಾಥ್ ಕಥನ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಮೂರನೇ  ಅನುಭವ.

      ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸ್ಮೈಲ್‌ಶಿವು ನಾಯಕ ಮತ್ತು ನಿರ್ಮಾಪಕ. ಇವರಿಗೆ ಜೋಡಿಯಾಗಿ ಬಿಗ್‌ಬಾಸ್ ಖ್ಯಾತಿಯ ಸೋನುಪಾಟೀಲ್ ನಾಯಕಿ. ಲವರ್‌ಬಾಯ್, ದೆವ್ವ ಆಗಿ ಕ್ಯಾಟ್ಲೆ ಕೊಡುವ ಅನಿಕ್ ಉಪನಾಯಕ. ಕಾವ್ಯಗೌಡ ಉಪನಾಯಕಿ. ಮಾತಿನ ಭಾಗದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಮುಗಿದಿದ್ದು, ಹಾಡುಗಳನ್ನು ಚಿಕ್ಕಮಗಳೂರು, ಸಕಲೇಶಪುರ ಸುಂದರ ತಾಣಗಳಲ್ಲಿ ಸೆರೆ ಹಿಡಿಯಲು ಯೋಜನೆ ಹಾಕಿಕೊಂಡಿದೆ. ಶಿವುಬೆರ್ಗಿ ಸಾಹಿತ್ಯದ ಮೂರು ಹಾಡುಗಳಿಗೆ ರಾಜ್‌ಕಿಶೋರ್ ಸಂಗೀತವಿದೆ. ಮಲೆಯಾಳಂ ಸಿನಿಮಾಕ್ಕೆ ಬಂಡವಾಳ ಹೂಡಿರುವ ಸ್ಟೀಬರ್ಡ್ ಕುಮಾರ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಭೂಮಿಕ ಸಿನಿ ಕ್ರಿಯೇಶನ್ಸ್ ಮೂಲಕ ಸಿದ್ದಗೊಳ್ಳುತ್ತಿದ್ದು, ಬೇತಾಳ ಸದ್ಯ ಪೋಸ್ಟ್ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,