December 24.News

Wednesday, October 14, 2020

65

ಡಿಸೆಂಬರ್ ೨೪ಕ್ಕೆ ಭೂಮಿಕಾ ಆಗಮನ

ನೈಜ ಘಟನೆ ಆಧರಿಸಿದ " ಡಿಸೆಂಬರ್-೨೪" ಚಿತ್ರಕ್ಕೆ ಎರಡನೇ ಹಂತದ ಚಿತ್ರೀಕರಣ ಸದ್ಯದಲ್ಲಿಯೇ ಆರಂಭವಾಗಲಿದೆ.  ನಾಗರಾಜ್ ಎಂಜಿ ಗೌಡ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರಕ್ಕೆ ಎ.ದೇವು ಹಾಸನ್, ವಿ.ಬೆಟ್ಟೇಗೌಡ ಬಂಡವಾಳ ಹಾಕಿದ್ದಾರೆ. ಉಸಿರಾಟದ ಸಾಯುತ್ತಿರುವ ಮಕ್ಕಳನ್ನು ಉಳಿಸಿಕೊಳ್ಳಲು ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವ ಘಟನೆಯನ್ನು ಮುಂದಿಟ್ಟುಕೊಂಡು ಅದಕ್ಕೆ ಸಿನಿಮಾ ರೂಪ ನೀಡಲಾಗುತ್ತದೆ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಗೌಡ.

ದೇಶದಲ್ಲಿ ಪ್ರತಿದಿನ ಹುಟ್ಟುವ ನೂರರಲ್ಲಿ ಮಕ್ಕಳು ಮೂರು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಸಾಯುತ್ತಿವೆ. ಇದಕ್ಕೆ ಯಾವುದೇ ಔಷಧಿ ಕಂಡು ಹಿಡಿದಿಲ್ಲ ಇಂತಹದೊಂದು ಸಮಸ್ಯೆಯನ್ನು ಮುಂದಿಟ್ಟು ಕೊಂಡು ಸಿನಿಮಾ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ

೨೦೧೫ರಿಂದ ೨೦೧೯ ರ ಒಳಗೆ ಕೆಲವೊಂದು ನೈಜ ಘಟನೆಗಳನ್ನಿಟ್ಟುಕೊಂಡು ಮಾಡಿಕೊಂಡಿರುವ ಅಂತಹ ಕಥೆ ಪಕ್ಕಾ ಫ್ಯಾಮಿಲಿ ಲವ್ ಫ್ರೆಂಡ್ಸ್ ಹಾರಾರ್ ಥ್ರಿಲ್ಲರ್, ಎಲಿಮೆಂಟ್ಸ್ ಗಳು ಇರುವ ಕಥೆ ಎನ್ನುತ್ತಾರೆ ನಿರ್ದೇಶಕರು

ನಾಯಕರಾಗಿ ಅಪ್ಪು ಬಡಿಗೇರ ,ರವಿ ಕೆ ಆರ್ ಪೇಟೆ ,ರಘು ಶೆಟ್ಟಿ,.ಜಗದೀಶ್ ಹೆಚ್ ಜಿ ದೊಡ್ಡಿ, ಹಾಗೂ ಪ್ರಮುಖ ಪಾತ್ರದಲ್ಲಿ ಪೂಜಾ ,ಜಿ.ಸಂಹಿತಾ ಅರಣ್ಯ ,ಭೂಮಿಕಾ ರಮೇಶ್ ಅಭಿನಯಿಸುತ್ತಿದ್ದಾರೆ.ಸ್ಟಾರ್ ನಟರೊಬ್ಬರು ಅತಿಥಿ ಪಾತ್ರದಲ್ಲಿ ಮಾಡುವ ಸಾದ್ಯತೆಗಳಿವೆ. ಈ ಚಿತ್ರದಲ್ಲಿ ೪ ಹಾಡುಗಳಿವೆ.ಪ್ರವೀಣ್ ನಿಕೇತನ್ ಸಂಗೀತ,ವಿನಯ್ ಗೌಡ ಛಾಯಾಗ್ರಹಣವಿದೆ. ಆನಂದ್ ಪಟೇಲ್ ಹುಲಿಕಟ್ಟೆ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

 

Copyright@2018 Chitralahari | All Rights Reserved. Photo Journalist K.S. Mokshendra,