Prashant Sambaragi.Press Meet

Thursday, September 03, 2020

52

ವಾಣಿಜ್ಯ  ಮಂಡಳಿ  ಪ್ರಶ್ನೆಗೆ ಪ್ರಶಾಂತ್ಸಾಂಬರಗಿ  ಉತ್ತರ

       ಮಂಗಳವಾರದಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಡ್ರಗ್ಸ್ ಕುರಿತಂತೆ ಮಾತನಾಡುವ ಸಂದರ್ಭದಲ್ಲಿ ಉದ್ಯಮಿ ಪ್ರಶಾಂತ್‌ಸಾಂಬರಗಿ ವಿಷಯವು ಪ್ರಸ್ತಾಪವಾಗಿತ್ತು. ಇದಕ್ಕೆ ಸಾರಾಗೋವಿಂದು ಮಾತನಾಡಿ ಇವರಿಂದ ಕನ್ನಡ ಚಿತ್ರರಂಗಕ್ಕೆ ಕಿಂಚಿತ್ತು ಕೊಡುಗೆ ಬಂದಿಲ್ಲ. ಇಂತಹವರು ಚಿತ್ರರಂಗದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲವೆಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದರನ್ವಯ ಪ್ರಶಾಂತ್‌ಸಾಂಬರಗಿ ಮಾದ್ಯಮದವರನ್ನು ಭೇಟಿ ಮಾಡಿ ಚಂದನನಕ್ಕೆ ನೀಡಿರುವ ಕೊಡೆಗೆಯನ್ನು ವಿವರಿಸಿದರು. ಕಾರ್ಪೋರೇಟ್ ಹಂತದಲ್ಲಿ ಸೆಲಬ್ರಿಟಿ ಮ್ಯಾನೇಜೆಮಂಟ್ ಕಾರ್ಯಕ್ರಮ, ಬಿಗ್ ಎಫ್‌ಎಂಗೆ ಬ್ರಾಂಡ್ ಅಂಬಾಸಿಡರ್ ಆಗಿ ಉಪೇಂದ್ರ, ರಿಲಿಯನ್ಸ್ ಇನ್‌ಫೋಕಾಂಗೆ ಬ್ರಾಂಡ್ ಅಂಬಾಸಿಡರ್ ಆಗಿ ಸುದೀಪ್, ಅಶೋಕ್‌ಖೇನಿ ನಿರ್ಮಾಣ, ಸೋನುನಿಗಮ್ ಗಾಯನದ ಆಡಿಯೋ,ವಿಡಿಯೋ ‘ನೀನೇ ಬರೀ ನೀನೇ’ ಬಿಡುಗಡೆಯಲ್ಲಿ ಪ್ರಮುಖ ಪಾತ್ರ, ಬಿಗ್ ಎಫ್‌ಎಂ ಮತ್ತು ಬಿಗ್ ಸಿನಿಮಾಸ್‌ದಲ್ಲಿ ಕನ್ನಡ ಚಿತ್ರಗಳ ಪರವಾಗಿ ಕೆಲಸ, ಐಶ್ವರ್ಯ ಚಿತ್ರದ ವಿತರಣೆ, ಡಬ್ಬಿಂಗ್ ಪರವಾಗಿ ಹೋರಾಟ.  ಇನ್ನು ಮುಂತಾದ ಕೊಡುಗೆಗಳು ಇವರಿಂದಲೇ ಆಗಿರುತ್ತದೆ.

         ಡ್ರಗ್ಸ್‌ಗೆ ಸಂಬಂದಪಟ್ಟಂತೆ ಪ್ರಶಾಂತ್‌ಸಾಂಬರಗಿ ನಟಿ ರಾಗಿಣಿ, ಸಂಜನಾ ವಿಷಯ ಪ್ರಸ್ತಾಪಿಸಿ, ಮೂರು ಅಂಶಗಳ ಕುರಿತಂತೆ ತನಿಖೆ ಆಗಬೇಕೆಂದು ಹೇಳಿದರು. ಮೊದಲನೆಯದಾಗಿ ಮುಂಬೈನಲ್ಲಿರುವ ಇಮ್ತಿಯಾಜ್‌ಖಾತ್ರಿ ೨೦೧೭ರಂದು ಹುಟ್ಟುಹಬ್ಬ ಆಚರಿಸಿಕೊಂಡಾಗ  ಕರ್ನಾಟಕದಿಂದ ಯಾರ‍್ಯಾರು ಭಾಗಿಯಾಗಿದ್ದರು. ಕಾಂಗ್ರೇಸ್ ಶಾಸಕರ ಹುಟ್ಟಹಬ್ಬ ಸಂದರ್ಭದಲ್ಲಿ ಇಮ್ತಿಯಾಜ್‌ಖಾತ್ರಿ ಬಂದಿದ್ದರು. ಆ  ಸಮಯದಲ್ಲಿ ಯಾವ ಕಲಾವಿದರು ಇವರನ್ನು ಭೇಟಿಯಾಗಿದ್ದರು. ಕರ್ನಾಟಕದ  ಹುಡುಗಿಯನ್ನು ಬಾಲಿವುಡ್ ನಟನಿಗೆ ಮದುವೆ ಮಾಡಿಸಿದ್ದು. ಇದನ್ನು ಗಂಭೀರವೆಂದು ಪರಿಗಣಿಸಿ ತನಿಖಾಧಿಕಾರಿಗಳು ಕ್ರಮ ತೆಗೆದುಕೊಂಡರೆ

Copyright@2018 Chitralahari | All Rights Reserved. Photo Journalist K.S. Mokshendra,