Yellow Gang.Film Teaser Launch.

Tuesday, December 08, 2020

370

 ಯಲ್ಲೋ ಗ್ಯಾಂಗ್ಸ್ ಭಟ್ಟರ ಶುಭಹಾರೈಕೆ

         ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಯಲ್ಲೋ ಗ್ಯಾಂಗ್ಸ್’ ಕ್ರೈಂ ಥ್ರಿಲ್ಲರ್ ಚಿತ್ರಕ್ಕೆ ಶುಭ ಹಾರೈಸಲು ಯೋಗರಾಜಭಟ್ ಆಗಮಿಸಿದ್ದರು. ಟ್ರೈಲರ್ ಬಿಡುಗಡೆ ಮಾಡಿದ ಭಟ್ಟರು ನಂತರ ಮಾತನಾಡಿ ಇದೇ ರೀತಿ ಜನಸಂದಣಿ ಚಿತ್ರಮಂದಿರಕ್ಕೆ ಬಂದಲ್ಲಿ ನಿರ್ಮಾಪಕರು ಉಳಿಯುತ್ತಾರೆ. ‘ಮುಗುಳುನಗೆ’ಯಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದ ನಿರ್ದೇಶಕರ ಶ್ರಮ, ನಿಯತ್ತು ನೋಡಿದಾಗ ಇವರು ಮುಂದೆ ನಿರ್ದೇಶಕರಾಗಿ ಬರುತ್ತಾರೆಂದು ಮನಸ್ಸು ಹೇಳಿತ್ತು. ಅದು ನಿಜವಾಗಿದೆ. ಚಿತ್ರವನ್ನು ಗುದ್ದಾಡಿ, ಬಡಿದಾಡಿ ಮಾಡಿದ್ದರೂ ಅಂತಿಮವಾಗಿ ಫಲಿತಾಂಶ ಪರದೆ ಮೇಲೆ ಬಂದಾಗ ಎಲ್ಲವು ಮರೆತು ಹೋಗುತ್ತದೆ ಎಂದರು. ಎರಡು ಹಂತದಲ್ಲಿ ಬೆಂಗಳೂರು ಸುತ್ತಮುತ್ತ ೩೫ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕತೆ ಮತ್ತು ನಿರ್ದೇಶನ ರವೀಂದ್ರಪರಮೇಶ್ವರಪ್ಪ.

         ತಾರಗಣದಲ್ಲಿ ಬಲರಾಜವಾಡಿ, ನಾಟ್ಯರಂಗ, ನವೀನ್‌ದೇವಯ್ಯ, ಅರ್ಚನಾಕೊಟ್ಟಿಗೆ, ಸತ್ಯಉಮ್ಮತ್ತಾಲ್, ಪ್ರದೀಪ್‌ಪೂಜಾರಿ, ವಿನೀತ್‌ಕಟ್ಟಿ, ಮಲ್ಲಿಕಾರ್ಜುನದೇವರಮನೆ, ನಂದಗೋಪಾಲ್, ರವಿಗಜಜಿಗಣಿ, ಪವನ್‌ಕುಮಾರ್, ನೀನಾಸಂ ದಯಾನಂದ್, ಸತ್ಯ, ಬಿಜಿ.ವಿಠಲ್‌ಪರೀಟ, ಅರುಣ್‌ಕುಮಾರ್, ಶ್ರೀಹರ್ಷ, ಸಂಚಾರಿಮಧು, ಪ್ರವೀಣ್.ಕೆ.ಬಿ. ಮುಂತಾದವರು ನಟಿಸಿದ್ದಾರೆ       ರೋಹಿತ್‌ಸೋವರ್ ಸಂಗೀತ, ಸುಜ್ಘಾನ್ ಛಾಯಾಗ್ರಹಣ, ಸುರೇಶ್‌ಆರ್ಮುಗಂ ಸಂಕಲನ, ಪ್ರವೀಣ್‌ಕುಮಾರ್.ಜಿ ಸಂಭಾಷಣೆ ಇದೆ. ಮನೋಜ್.ಪಿ.ಜಿ, ಕುಮಾರ್.ಎಂ.ಆರ್(ಕೆವಿಜಿ) ಹಾಗೂ ಜಿ.ಎನ್.ವಿ ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಸಹ ನಿರ್ಮಾಪಕರು.

 

 

 

Copyright@2018 Chitralahari | All Rights Reserved. Photo Journalist K.S. Mokshendra,