5D.Film Title Launch Press Meet.

Friday, January 01, 2021

57

ಎಸ್.ನಾರಾಯಣ್ ಹೊಸ ಚಿತ್ರ ಡಿ

ಬಹಳಷ್ಟು ಗ್ಯಾಪ್ ನಂತರ ನಟ,ನಿರ್ದೇಶಕ ಮತ್ತು ನಿರ್ಮಾಪಕಎಸ್.ನಾರಾಯಣ್ ವಿನೂತನಕತೆಯ ‘೫ಡಿ’ ಚಿತ್ರಕ್ಕೆಚಿತ್ರಕತೆ,ಸಾಹಿತ್ಯ ಒದಗಿಸಿ ಆಕ್ಷನ್‌ಕಟ್ ಹೇಳುತ್ತಿದ್ದಾರೆ.ವರ್ಷದ ಮೊದಲದಿನದಂದು ಸಿನಿಮಾದ ಪೋಸ್ಟರ್‌ನ್ನುದರ್ಶನ್ ಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ ಪ್ರತಿ ವರ್ಷಏನಾದ್ರೂ ಕೆಲಸ ಮಾಡುತ್ತಾಇರುತ್ತೇವೆ. ಈ ಸಲ ಅದುಆಗಿಲ್ಲ. ಗೆಳೆಯ ಹೊಸ ವರ್ಷದಲ್ಲಿ ಬಣ್ಣ ಹಚ್ಚುತ್ತಿದ್ದಾನೆ.ಅದೃಷ್ಟಒಲಿಯಲಿ.ಎಲ್ಲರೂ ಬಣ್ಣ ಹಚ್ಚುವಂತಾಗಲಿ.ನಾರಾಯಣ್ ಸರ್ ಹೊಸ ಟ್ರೆಂಡ್‌ನೊಂದಿಗೆ ಶುರು ಮಾಡಿದ್ದಾರೆ.ಒಳ್ಳೆಯದಾಗಲಿ ಎಂದರು.

ಲಾಕ್‌ಡೌನ್ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡೆ.ಈ ಸಮಯದಲ್ಲಿಯಾರ ಸಂಪರ್ಕ, ಮೊಬೈಲ್‌ಕರೆ ಬಾರದಕಾರಣಏಕಾಗ್ರತೆಯಿಂದ ನಾಲ್ಕು ಕತೆಗಳನ್ನು ಬರೆಯಲು ಅನುಕೂಲವಾಯಿತು.ಅದರಲ್ಲಿಒಂದನ್ನುಆಯ್ಕೆ ಮಾಡಿಕೊಂಡಿದ್ದೇನೆ. ರವಿಗುಂಟಿಮುದುಗು ಹೇಳಿದ ಒಂದು ಏಳೆಯನ್ನು ವಿಸ್ತರಿಸಲಾಗಿದೆ.ಅವರುಕತೆಯೊಂದಿಗೆ ನಾಯಕನ ಹೆಸರನ್ನು ಶಿಪಾರಸ್ಸು ಮಾಡಿದರು. 

ಪೋಸ್ಟರ್‌ದಲ್ಲಿಎರಡುಅಕ್ಷರಇರಲಿದೆ.ಅದನ್ನು ಹುಡುಕಲಿ ಎಂದು ಬಿಡಲಾಗಿದೆ.ಮುಂದೆ ಹಂತ ಹಂತವಾಗಿತುಂಬಾ ವಿಶೇಷವಾದ ವಿನೂತನ ವಿಚಾರಗಳನ್ನು ತಿಳಿಸಲಾಗುವುದು.ಯಾರು ಏನು ಅಂದುಕೊಳ್ತಾರೋ ಹಾಗೆ ಇರಬಹುದು.ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮೆಲಯಾಳಂ ಭಾಷೆಗಳಲ್ಲಿ ಸಿದ್ದಗೊಳ್ಳಲಿದೆ. ಫೋಟೋ ಶೂಟ್‌ತರುವಾಯ ಮತ್ತಷ್ಟು ವಿಚಾರಗಳನ್ನು ಹಂಚಿಕೊಳ್ಳುವುದಾಗಿ ಎಸ್.ನಾರಾಯಣ್ ಮಾತಿಗೆ ವಿರಾಮ ಹಾಕಿದರು.

ನಾನು ಮುಂಚೆಯೇ ಸರ್‌ಗರಡಿಯಲ್ಲಿ ಪಳಗಬೇಕಾಗಿತ್ತು.ಕಾಲ ಕೂಡಿಬರಲಿಲ್ಲ. ಈ ತರದಕತೆಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಸುಕೃತಎನ್ನಬಹುದು.ಪ್ರಥಮದೃಶ್ಯದಲ್ಲಿಅಭಿನಯಿಸುವಾಗ ಪುಳಕ ಇತ್ತು.ಅಪ್ಪ ಹೇಳಿದಂತೆ ಅವರಿಗೆ ಶರಣಾಗಿರುವೆ. ತಂದೆಇಟ್ಟ ಹೆಸರುದುಶ್ಯಂತ್, ದರ್ಶನ್ ಈಗ ಚಿತ್ರದ ಹೆಸರು ೫ಡಿ.ಮೂರನ್ನು ಮರೆಯಲು ಸಾಧ್ಯವಿಲ್ಲವೆಂದು ಪಾತ್ರದ ವಿವರವನ್ನು ನಾಯಕಆದಿತ್ಯಗೌಪ್ಯವಾಗಿಟ್ಟರು.

ನಾಯಕಿಅದಿತಿಪ್ರಭುದೇವ, ಪೋಷಕ ನಟಿಜ್ಯೋತಿರೈಇಬ್ಬರು ನಾರಾಯಣ್ ಸರ್‌ಇದ್ದಾರೆಂದರೆಅಲ್ಲಿ ಶಿಸ್ತು ಇರುತ್ತದೆ. ಅವರೊಂದಿಗೆ ಕೆಲಸ ಮಾಡುತ್ತಿರುವುದುಖುಷಿಯ ವಿಚಾರವೆಂದು ಹೇಳಿದರು.

ನಾರಾಯಣ್‌ಅವರು ನಮ್ಮ ಸಂಸ್ಥೆಯಗರಡಿಯಲ್ಲಿ ಪಳಗಿದವರು.ಅವರ ಮಾಡಿರುವ ಕೆಲಸಗಳನ್ನು ಪುಸ್ತಕರೂಪದಲ್ಲಿತರಬಹುದು.ದರ್ಶನ್ ಎಷ್ಟೇ ಎತ್ತರದಲ್ಲಿದ್ದರೂಅವರ ಸರಳತೆ ಇಂದಿಗೂ ಉಳಿಸಿಕೊಂಡಿದ್ದಾರೆ.ರಾಬರ್ಟ್‌ಚಿತ್ರzಲ್ಲಿ ‘ದೋಸ್ತಾ’ ಹಾಡಿನಲ್ಲಿಎಲ್ಲಾ ಗೆಳಯರನ್ನು ನೆನದಿದ್ದಾರೆ. ಮೊದಲ, ಎರಡನೇಯುದ್ದ ನಡೆದಾಗಚಿತ್ರರಂಗ ಮುಗಿಯಿತುಅಂತ ಹೇಳಿದ್ದರು.ಆದರೆಚಿರಂಜೀವಿಯಾಗಿದೆ.ಈಗ ಗ್ರಹಣ ಬಂದಿದೆ ಅಷ್ಟೇ.ಮುಂದೆ ಸರಿ ಹೋಗುತ್ತದೆ.ಮತ್ತೆ ಎಂದಿನ ಸ್ಥಿತಿಯಲ್ಲಿ ಬರುವುದುಖಚಿತವೆಂದು ರಾಜೇಂದ್ರಸಿಂಗ್‌ಬಾಬು ಭವಿಷ್ಯ ನುಡಿದರು.

ಛಾಯಾಗ್ರಹಣಕುಮಾರ್‌ಗೌಡ, ಸಂಕಲನ ಶಿವುಯಾದವ್, ಸಾಹಸ ಡಿಫರೆಂಟ್‌ಡ್ಯಾನಿ, ನೃತ್ಯ ಮಾಲೂರುಶ್ರೀನಿವಾಸ್‌ಅವರದಾಗಿದೆ. ೧ ಟು ೧೦೦ ಡ್ರೀಮ್ ಮೂವೀಸ್ ಮುಖಾಂತರ ಸ್ವಾತಿಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

 

 

Copyright@2018 Chitralahari | All Rights Reserved. Photo Journalist K.S. Mokshendra,