Break Failure.Film Poster Launch.

Monday, January 04, 2021

44

ಕಾಲೇಜು ವಿದ್ಯಾರ್ಥಿಗಳ ಬ್ರೇಕ್ ಫೇಲ್ಯೂರ್

       ಸಿನಿಮಾ ಗೆದ್ದರೆ ತಂಡಕ್ಕೆ ಬ್ರೇಕ್ ಸಿಗುತ್ತದೆ. ಸೋತರೆ ಫೇಲ್ಯೂರ್ ಆಗುತ್ತದೆ ಅಂತ ಚಿತ್ರರಂಗವು ನಂಬಿದೆ. ಈಗ ಹೊಸ ಪ್ರತಿಭೆಗಳೇ ಧೈರ್ಯ ಮಾಡಿ ‘ಬ್ರೇಕ್ ಫೇಲ್ಯೂರ್’ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಮಾಜಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಎಸ್.ಎ.ಚಿನ್ನೆಗೌಡ ಪೋಸ್ಟರ್‌ನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಶೀರ್ಷಿಕೆ ಕೇಳಿದರೆ ಅಪಘಾತ ಕತೆ ಇರಬಹುದೆಂಬ ಯೋಚನೆ ಬರುತ್ತದೆ. ಆದರೆ ಇದೊಂದು ಕಾಲೇಜು ವಿದ್ಯಾರ್ಥಿಗಳ ಸಾಹಸ ಗಾಥೆಯಾಗಿದೆ. 

ಬೇಜವಬ್ದಾರಿಯುತ ನಾಲ್ಕು ಹುಡುಗರು ಮತ್ತು ಹುಡುಗೀರು ಸಾಮಾನ್ಯರು ಮಾಡುವ ಕಾಯಕವನ್ನು ಮುಂದೆ ಯೋಚಿಸದೆ ಉಲ್ಟಾ ಕೆಲಸ ಮಾಡುತ್ತಾರೆ. ಅಪಾಯಕಾರಿ ಎಂದು ಹೇಳಿದರೂ ಅದನ್ನೆ ಛಾಲೆಂಜ್ ಅಂತ ತೆಗೆದುಕೊಳ್ಳುತ್ತಾರೆ. ಇದನ್ನು ಅರಿತ ಪ್ರಿನ್ಸಿಪಾಲರು  ಒಂದು ವಿಷಯದ ಕುರಿತಂತೆ ಸಾಕ್ಷಾಚಿತ್ರ ಮಾಡಿಕೊಂಡು ಬರಲು ಸೂಚಿಸಿರುತ್ತಾರೆ. ಅವರ ಸೂಚನೆಯಂತೆ ಎಂಟು ಜನರು ಕಾಡಿಗೆ ಹೋಗುತ್ತಾರೆ. ಅಲ್ಲಿ ಒಬ್ಬ ಭಯಾನಕ ವ್ಯಕ್ತಿಯ ಪ್ರವೇಶವಾಗುತ್ತದೆ. ಆತ ಯಾರು ಎಂಬುದು ತಿಳಿದಿರುವುದಿಲ್ಲ. ಅವನು ಒಂದೊಂದು ಹುಡುಗಿಯರನ್ನೆ ಟಾರ್ಗೆಟ್ ಮಾಡುತ್ತಾನೆ. ಇದಕ್ಕೆ ಕಾರಣವೇನು? ಅಂತಿಮವಾಗಿ ಹುಡುಗರು ಇದನ್ನು ಗುರಿಯಾಗಿ ತೆಗೆದುಕೊಳ್ಳುತ್ತಾರೆ. ಇದರಿಂದ ಸಪಲರಾಗುತ್ತಾರಾ? ಇನ್ನು ಅವರುಗಳು ಬದುಕುತ್ತಾರಾ? ಸಾಯುತ್ತಾರಾ? ಎಂಬುದನ್ನು ಎರಡನೇ ಭಾಗದಲ್ಲಿ ಹೇಳಲಾಗುತ್ತದೆ. ಪಾರ್ಟ್-೨ ಮಾಡಲು ನಿರ್ಮಾಪಕರು ಆಸಕ್ತಿ ತೋರಿಸಿದ್ದಾರೆ.

      ಹೋಮಿಯೋಪತಿ ವೈದ್ಯರಾಗಿರುವ ಅಬ್ದುಲ್‌ಗಣಿತಾಳಿಕೋಟೆ ರಾಜ್‌ಗಣಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿರುವುದು ಹೊಸ ಅನುಭವ. ಅದಿತ್‌ನವೀನ್ ರಚನೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮಾಡುವ ಜೊತೆಗೆ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹುಬ್ಬಳ್ಳಿಯ ಮಾಡಲ್ ಅಂಜಲಿಕೋಟೆಗಾರ್ ನಾಯಕಿ. ಇವರೊಂದಿಗೆ ಉಗ್ರಂರವಿ, ವಿನಯರೆಚಲ್, ಕೃತಿಗೌಡ, ಸುರೇಶ್ ಮುಂತಾದವರ ನಟನೆ ಇದೆ.  ಕೆವಿನ್.ಎಂ-ಅಭಿಷೇಕ್‌ರಾಯ್ ತಲಾ ಒಂದೊಂದು ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ದಾಂಡೇಲಿ ದಟ್ಟ ಅರಣ್ಯದಲ್ಲಿ ಮೂವತ್ತೈದು ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,