Arishadvarga.Film Trailer Launch

Thursday, November 12, 2020

111

ಮನುಷ್ಯನ ಹೋರಾಟ, ಅಸಹಾಯಕತೆ ಹೇಳುವ ಚಿತ್ರ

ಸಮಾಜದಲ್ಲಿಒಬ್ಬ ಮನುಷ್ಯನುಯಾವುದೋ ವಿಷಯಕ್ಕೆ ಹೋರಾಟ ಮಾಡುತ್ತಾನೆ. ಇಲ್ಲದೆ ಹೋದಲ್ಲಿತನ್ನಅಸಹಾಯಕತೆಯನ್ನು ತೋರ್ಪಡಿಸಿಕೊಳ್ಳುತ್ತಾನೆ. ಅದುಯಾವರೀತಿಎಂದು ‘ಅರಿಷಡ್ವರ್ಗ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಸಂಬಂಧಗಳ ಚಾಲಿತ, ನಿಗೂಢ ಹಾಗೂ ಥ್ರಿಲ್ಲರ್‌ಆಧಾರಿತಕತೆಯಲ್ಲಿ ಮಹತ್ವಾಕಾಂಕ್ಷಿಯುಳ್ಳ ನಟನೊಬ್ಬ ಹವ್ಯಾಸಿ ಗುಪ್ತವಾದ ಕೆಲಸಕ್ಕಾಗಿ ಒಂದು ಮನೆಗೆ ಬಂದುಆಶ್ಚರ್ಯಕರವಾದಕೊಲೆಯ ಕೇಸಿನಲ್ಲಿ ಸಿಕ್ಕಿ ಬೀಳುತ್ತಾನೆ. ಆತನಜೊತೆ ನಟಿಯಾಗಬೇಕೆಂಬ ಹುಡುಗಿ, ಮನೆಗೆ ಕನ್ನ ಹಾಕುವ ಕಳ್ಳನು ಸೇರಿಕೊಳ್ಳುತ್ತಾರೆ.ಇವರೆಲ್ಲರೂ ಕೊಲೆ ಸಾಕ್ಷಿಗೆಆಧಾರವಾಗಿ ನಿಲ್ಲುತ್ತಾರೆ.ಇದರ ಮಧ್ಯೆಉದ್ಯಮಿದಂಪತಿಕತೆಯೊಂದು ತೆರೆದುಕೊಳ್ಳುತ್ತದೆ.ಕೊಲೆಯಾದ ವ್ಯಕ್ತಿ, ಮೂರುಜನರಿಗೂಇರುವ ಸಂಬಂದವನ್ನು ಪೋಲೀಸರುಯಾವರೀತಿತನಿಖೆ ಮಾಡುತ್ತಾರೆಎಂಬುದನ್ನುಚಿತ್ರ ನೋಡಬೇಕು.

ಕಾಮ, ಕ್ರೋಧ, ಪ್ರೀತಿ, ದುರಾಸೆ, ಅಧಿಕಾರ ಮತ್ತುಅಹಂಕಾರಎಲ್ಲವನ್ನುತಪ್ಪಾಗಿ ಅರ್ಥೈಸಿಕೊಳ್ಳುವುದೇ ಇಲ್ಲಿರುವ ಪ್ರತಿ ಪಾತ್ರದಕೊರತೆಯಾಗಿದೆ.ತಮ್ಮ ಮಿತಿಗಳಿಂದ ತಪ್ಪಿಸಿಕೊಳ್ಳಲು ಸದರಿ ಪಾತ್ರಗಳು ಯಾವರೀತಿಆಟವಾಡುತ್ತಾರೆಎನ್ನುವುದು ಸನ್ನಿವೇಶಗಳ ಮೂಲಕ ಸಾಗುತ್ತದೆ.ಮುಖ್ಯ ಪಾತ್ರದಲ್ಲಿ ಅವಿನಾಶ್, ಯಳಂದೂರ್, ಮಹೇಶ್‌ಬಂಗ್, ಸಂಯುಕ್ತಹೊರನಾಡು, ಅಂಜುಆಳ್ವಾನಾಯಕ್, ನಂದಗೋಪಾಲ್‌ಇವರೊಂದಿಗೆಗೋಪಾಲಕೃಷ್ಣದೇಶಪಾಂಡೆ, ಶ್ರೀಪತಿ, ಮಂಜನಬಯಲು, ಅರವಿಂದ್‌ಕುಪ್ಪಿಕರ್ ಮುಂತಾದವರು ನಟಿಸುತ್ತಿದ್ದಾರೆ.  ಕತೆ,ಚಿತ್ರಕತೆ,ಸಂಭಾಷಣೆ, ಸಂಕಲನ ಹಾಗೂ ನಿರ್ದೇಶನಅರವಿಂದ್‌ಕಾಮತ್, ಸಂಗೀತಉದಿತ್ ಹರಿತಸ್‌ಅವರದಾಗಿದೆ.ನಟ ಬಾಲಾಜಿಮನೋಹರ್ ಬದಲಾವಣೆಎನ್ನುವಂತೆಚಿತ್ರಕ್ಕೆಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ.ಕನಸು ಟಾಕೀಸು ಮುಖಾಂತರಆನಂದ್-ಹರೀಶ್‌ಜಂಟಿಯಾಗಿ ನಿರ್ಮಾಣ ಮಾಡಿರುವಚಿತ್ರವು ನವೆಂಬರ್ ೨೭ರಂದು ರಾಜ್ಯಾದ್ಯಂತತೆರೆಕಾಣಲಿದೆ.ಪ್ರಚಾರದ ಮೊದಲ ಹಂತವಾಗಿಇತ್ತೀಚಗಷ್ಡೇಟ್ರೈಲರ್ ಬಿಡುಗಡೆಕಾರ್ಯಕ್ರಮ ನಡೆಯಿತು.

 

Copyright@2018 Chitralahari | All Rights Reserved. Photo Journalist K.S. Mokshendra,