Saavitri.Film Muhurtha and Press Meet.

Thursday, November 19, 2020

31

ಸೆಟ್ಟೇರಿದ  ಸಾವಿತ್ರಿ

       ‘ಸಾವಿತ್ರ’ ಚಿತ್ರದ ಶೀರ್ಷಿಕೆಯಲ್ಲಿ ತಾರಾ ನಟಿಸುತ್ತಿದ್ದಾರೆಂದು ಸುದ್ದಿಯಾಗಿತ್ತು. ಅದರಂತೆ ಗುರುವಾರದಂದು ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಹೂರ್ತ ಆಚರಿಸಿಕೊಂಡಿತು. ಸಾಫ್ಟ್‌ವೇರ್ ಉದ್ಯೋಗಿ ಪ್ರಶಾಂತ್‌ಕುಮಾರ್ ಪಿ.ಎನ್.ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಎಸ್.ದಿನೇಶ್ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವುದು ಎರಡನೇ ಅನುಭವ. ಮೊಬೈಲ್ ಮುಂತಾದ ಆಧುನಿಕ ತಂತ್ರಜ್ಘಾನಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳೇನು? ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಮತ್ತೋಂದು ಮುಖ್ಯ ಪಾತ್ರದಲ್ಲಿ ವಿಜಯರಾಘವೇಂದ್ರ ಇವರೊಂದಿಗೆ ಪ್ರಕಾಶ್‌ಬೆಳವಾಡಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜುಬಸಯ್ಯ, ಬೇಬಿಲೈಲಾ, ಪ್ರಮೋದ್ ಮುಂತಾದವರು ಅಭಿನಯಿಸುತ್ತಿದ್ದಾರೆ.

      ಗೀತೆರಚನೆಕಾರ ಹೃದಯಶಿವ ಸಂಭಾಷಣೆ ಬರೆಯುವ ಜೊತೆಗೆ  ಮೊದಲ ಬಾರಿ ನಾಲ್ಕು ಹಾಡು ಬರೆಯುವ ಜೊತೆಗೆ ರಾಗ ಒದಗಿಸುವುದರ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಂತ್ರಜ್ಘರ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಬೆಂಗಳೂರು ಸುತ್ತಮುತ್ತ ೪೫ ದಿನಗಳ ಕಾಲ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,