ACT 1978.Film Releasing On 20th Nove 2020.

Wednesday, November 18, 2020

41

 

ಈ ವಾರ ತೆರೆಗೆ ಆಕ್ಟ್ 1978

 

ಕೊರೋನ ಹಾವಳಿಯ ನಂತರ ಯಾವುದೇ ಹೊಸ ಚಿತ್ರಗಳು ತೆರೆಕಂಡಿರಲಿಲ್ಲ.‌ ಎಂಟು ತಿಂಗಳ ನಂತರ ಇದೇ ನವೆಂಬರ್ 20 ರಂದು ಆಕ್ಟ್ 1978 ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.

ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ಅರ್ ದೇವರಾಜ್ ಅವರು ನಿರ್ಮಿಸಿರುವ ಈ‌ ಚಿತ್ರವನ್ನು ಮಂಸೋರೆ ಕಥೆ ಬರೆದು,  ನಿರ್ದೇಶಿಸಿದ್ದಾರೆ.

ಮಂಸೋರೆ, ವೀರೇಶ್ ಮಲ್ಲಣ್ಣ ಹಾಗೂ ದಯಾನಂದ್ ಟಿ ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ರಾಹುಲ್ ಶಿವಕುಮಾರ್ ಸಂಗೀತ ನಿರ್ದೇಶನ, ಸತ್ಯ ಹೆಗಡೆ ಛಾಯಾಗ್ರಹಣ

ಹಾಗೂ ನಾಗೇಂದ್ರ ಕೆ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ.

ಯಜ್ಞ ಶೆಟ್ಟಿ,  ಪ್ರಮೋದ್ ಶೆಟ್ಟಿ, ಬಿ.ಸರೇಶ್, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್,

ಅವಿನಾಶ್, ಸುಧಾ ಬೆಳವಾಡಿ, ಶೋಭ್ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ, ಕಿರಣ್ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,