Campus Kranthi.Film Press Meet.

Saturday, February 13, 2021

13

ಕ್ಯಾಂಪಸ್ಕ್ರಾಂತಿಟೀಸರ್ ಬಿಡುಗಡೆ

ಗಡಿ ನಾಡ ಸಮಸ್ಯೆ ಸದ್ಯ ಸುದ್ದಿಯಾಗುತ್ತಿದೆ.ಇದರ ಏಳೆಯನ್ನೆ ಹೊಂದಿರುವ ‘ಕ್ಯಾಂಪಸ್‌ಕ್ರಾಂತಿ’ ಚಿತ್ರದ ಶೀರ್ಷಿಕೆ ಹೇಳುವಂತೆ ಕಾಲೇಜು ಮತ್ತುಕ್ಯಾಂಪಸ್ ಸುತ್ತ ನಡೆಯುವಕತೆಇದಾಗಿದೆ.ನಿರ್ದೇಶಕ ಮತ್ತು ನಿರ್ಮಾಪಕಸಂತೋಷ್‌ಕುಮಾರ್‌ಒಮ್ಮೆ ಬೆಳಗಾವಿಗೆ ಹೋಗಿದ್ದಾರೆ.ಅಲ್ಲಿಕನ್ನಡ ಭಾಷೆಯನ್ನು ಹೆಚ್ಚು ಬಳಸದೆ, ಮರಾಠಿ ಭಾಷೆಯಲ್ಲಿ ಮಾತನಾಡುವುದನ್ನು ನೋಡಿದ್ದಾರೆ. ನಾವುಗಳು ಎಲ್ಲೇ ಹೋದರೂ ಮ್ಮ ಭಾಷೆಗೊತ್ತಿದ್ದರೂ ಮಾತಾಡುವಗೋಜಿಗೆ ಹೋಗುವುದಿಲ್ಲ. ಇಂತಹುದೆ ಸಾಲನ್ನುಚಿತ್ರಕತೆಗೆ ಬಳಸಿಕೊಂಡಿದ್ದಾರೆ. 

ಮೊನ್ನೆಯಷ್ಟೇಟೀಸರ್ ಬಿಡುಗಡೆಗೊಂಡಿತು.ಇದೇ ಸಂದರ್ಭದಲ್ಲಿತಂಡವು ಹಿಂದಿಯಲ್ಲಿಸಿದ್ದಪಡಿಸಿರುವ ‘ದಾರು ಪಾರ್ಟಿ’ ಎನ್ನುವ ವಿಡಿಯೋ ಮ್ಯೂಸಿಕ್ ಆಲ್ಬಂತರಲಾಯಿತು.

ಶ್ರೀಮಂತ ಮನೆತನದ ಹುಡುಗನಾಗಿಅಲಂಕಾರ್ ನಾಯಕ.ಮರಾಠಿ ಹುಡುಗಿಯಾಗಿ ಇಶಾನಾ ನಾಯಕಿ.ರಣವೀರ್‌ರಾಜ್ ಖಳನಾಯಕ. ತಾರಗಣದಲ್ಲಿ ಹನುಮಂತೇಗೌಡ್ರು, ಕೀರ್ತಿರಾಜ್, ಭವಾನಿಪ್ರಕಾಶ್, ವಾಣಿಶ್ರೀ ಮುಂತಾದವರು ನಟಿಸಿದ್ದಾರೆ. ನಾಲ್ಕು ಹಾಡುಗಳ ಪೈಕಿ ಮೂರು ಗೀತೆಗಳಿಗೆ ಸಾಹಿತ್ಯ ಒದಗಿಸಿ ಸಂಗೀತವನ್ನು ಸಂಯೋಜಿಸಿರುವುದು ವಿ.ಮನೋಹರ್.ಕಾರ್ಯಕ್ರಮದಲ್ಲಿಡಾ.ರಾಜ್‌ಕುಮಾರ್ ಅಳಿಯ ಎಸ್.ಎ.ಗೋವಿಂದರಾಜು, ಬಾ.ಮಾ.ಹರೀಶ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಫ್ಯಾಷನ್ ಮೂವಿ ಮೇಕರ‍್ಸ್ ಮೂಲಕ ಸಿದ್ದಗೊಂಡಿರುವ ಚಿತ್ರವು ಸದ್ಯದಲ್ಲೆತೆರೆಕಾಣಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,