Belaku.Film Press Meet.

Tuesday, February 16, 2021

20

ಮೊದಲಬಾರಿರಾಘವೇಂದ್ರರಾಜ್ಕುಮಾರ್ಗೆ ಸುಧಾರಾಣಿಜೋಡಿ

ಡಾ.ರಾಜ್‌ಕುಮಾರ್, ಶಿವರಾಜ್‌ಕುಮಾರ್ ಮತ್ತು ಪುನೀತ್‌ರಾಜ್‌ಕುಮಾರ್‌ಅವರೊಂದಿಗೆ ನಟಿಸಿದ್ದ ಸುಧಾರಾಣಿ ಈಗ ‘ಬೆಳಕು’ ಚಿತ್ರದಲ್ಲಿರಾಘವೇಂದ್ರರಾಜ್‌ಕುಮಾರ್‌ಗೆಜೋಡಿಯಾಗುವ ಮೂಲಕ ದೊಡ್ಮನೆ ಮನೆಯಎಲ್ಲರೊಂದಿಗೆ ಅಭಿನಯಿಸಿದ  ಕೀರ್ತಿಅವರದಾಗಿದೆ. ನೇತ್ರದಾನದ ಮಹತ್ವ ಹೇಳುವಂತ ಕತೆಇದಾಗಿದೆ.ಯಾರದ್ದೋ ನೇತ್ರದಾನದಿಂದಜಗತ್ತನ್ನುಕಾಣುವಂತಾದ ಹುಡುಗಿಯೊಬ್ಬಳು, ಮುಂದೆತನ್ನಂತೆಇತರರು ಬೆಳಕನ್ನು ಕಾಣುವಂತೆಆಗಬೇಕೆಂದು ಬಯಕೆ ಹೊಂದಿ ನೇತ್ರತಜ್ಘೆಯಾಗುತ್ತಾಳೆ.ಮುಂದೆಆಕೆಯ ಬದುಕು ಅವಳನ್ನು ಇನ್ನಷ್ಟುಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗುತ್ತದೆ.ನಂತರ ಅವಳು ಹೇಗೆ ಆದರ್ಶಪ್ರಾಯವಾದ ಹೆಣ್ಣಾಗಿ ಬೆಳಗುತ್ತಾಳೆ ಎನ್ನುವುದುಒಂದು ಏಳೆಯ ಸಾರಾಂಶವಾಗಿದೆ.

ಮತ್ತೋಂದು ಮುಖ್ಯ ಪಾತ್ರದಲ್ಲಿ ನಿರೀಕ್ಷಾಶೆಟ್ಟಿ ನಟಿಸುತ್ತಿದ್ದಾರೆ.ಮಂಜುನಾಥ್ ನಿರ್ದೇಶಕನಾಗಿ ಹೊಸ ಅನುಭವ. ಪಾತ್ರ ಹೇಗಿದೆ.ಎಷ್ಟು ಸಮಯ ಬರುತ್ತದೆಅಂತತಿಳಿಯದೆ ಇದ್ದರೂ, ಒಳ್ಳೆಯ ಸಂದೇಶಇರುವುದರಿಂದಅಭಿನಯಿಸುತ್ತಿರುವುದಾಗಿರಾಘಣ್ಣ ಮಾದ್ಯಮದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.ಬಿ.ಎನ್.ಗಂಗಾಧರ್ ನಿರ್ಮಾಣ ಮಾಡುತ್ತಿರುವ ಸಿನಿಮಾವು ಸದ್ಯಚಿತ್ರೀಕರಣದಲ್ಲಿ ಬ್ಯುಸಿ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,