Purushotama.Film Audio Rel

Sunday, September 05, 2021

185

ಹೊರಬಂತು ಪುರುಷೋತ್ತಮ ಗೀತೆಗಳು

ಜಿಮ್‌ರವಿ ಅಭಿನಯ ಮತ್ತು ನಿರ್ಮಾಣದ ‘ಪುರುಷೋತ್ತಮ’ ಚಿತ್ರದಧ್ವನಿಸಾಂದ್ರಿಕೆಯುಕೆಎಲ್‌ಇಕಾಲೇಜು ಸಭಾಂಗಣದಲ್ಲಿಕಿಕ್ಕಿರಿದಜನರ ನಡುವೆಅನಾವರಣಗೊಂಡಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟ ಶರಣ್ ಮಾತನಾಡಿ ಕೆಲವು ನೆನಪುಗಳನ್ನು ತೆರೆದಿಡುತ್ತಾ ಸಭೆಯನ್ನು ನಗೆಯ ಲೋಕಕ್ಕೆ ಕರೆದುಕೊಂಡು ಹೋದರು.ಚಿತ್ರರಂಗಕ್ಕೆ ಬರುವುದಕ್ಕೆ ಮುಂಚೆ ವಾದ್ಯಗೋಷ್ಟಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದಕಾರಣ ಸಂಗೀತದಿಂದ ನಟನಾದೆಎಂದು ಹೇಳಬಹುದು. ನಾನು ೧೦೦ ಚಿತ್ರದ ನಂತರ ನಾಯಕನಾಗಿ ಬಡ್ತಿ ಪಡೆದುಕೊಂಡೆ.ರವಿ ಅವರು ೧೫೦ ಸಿನಿಮಾತರುವಾಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ನನ್ನರೆಕಾರ್ಡ್‌ನ್ನು ಪ್ರಾಮಾಣಿಕವಾಗಿ ಮುರಿದಿದ್ದಾರೆ.ಅವರ ಶಾಲೆಯಲ್ಲಿಜಿಮ್‌ತರಭೇತಿ ಪಡೆದುಕೊಂಡಿದ್ದೇನೆ. ಶಾಲೆಯಲ್ಲಿಅವರುತುಂಬ ಶಿಸ್ತಿನ ಮಾಸ್ಟರ್.ಇಂದು ಶಿಕ್ಷಕರ ದಿನಾಚರಣೆಆಗಿರುವುದರಿಂದರವಿ ಸರ್ ಹಾಗೂ ಡ್ಯಾನ್ಸ್ ಹೇಳಿಕೊಟ್ಟ ಕಲೈ ಇಬ್ಬರಿಗೂಅಭಾರಿಯಾಗಿದ್ದೇನೆ. ಕರೋನ ನಂತರಇಷ್ಟು ಜನರನ್ನು ನೋಡಿದ್ದುಇದೇ ಮೊದಲು. ಇಂದು ಹೌಸ್‌ಫುಲ್‌ಆಗಿರುವಂತೆ,ಚಿತ್ರಮಂದಿರವುತುಂಬಲಿ ಎಂದುತಂಡಕ್ಕೆ ಶುಭಹಾರೈಸಿದರು.

ಪತಿ ಮತ್ತು ಪತ್ನಿಇದ್ದರೆಅದನ್ನು ಸಂಸಾರಎಂದುಕರೆಯುವುದುಂಟು.ಅಲ್ಲಿ ಮುನಿಸು, ಜಗಳ, ಕೋಪ, ತಾಪಎಲ್ಲವುಇರುತ್ತದೆ.ಇಬ್ಬರ ನಡುವೆಒಡಕು ಮೂಡಿದಾಗಅದನ್ನು ಸರಿಪಡಿಸಿಕೊಂಡು ಹೋಗುವುದೇಜೀವನಎಂದುಚಿತ್ರದಲ್ಲಿ ಸಂದೇಶದ ಮೂಲಕ  ಹೇಳುವ ಪ್ರಯತ್ನ ಮಾಡಲಾಗಿದೆ. ಡಬ್ಬಿಂಗ್ ಕೊನೆ ಹಂತಕ್ಕೆ ಬಂದಿದೆಎಂದು ನಿರ್ದೇಶಕಅಮರನಾಥ್‌ಕಡಿಮೆ ಸಮಯತೆಗೆದುಕೊಂಡರು.

ಚಿತ್ರಕ್ಕೆ ಪರೋಕ್ಷವಾಗಿ ಸಹಾಯ ಮಾಡಿರುವ ಮೈಸೂರಿನ ವಿಜಯ್‌ರಾಮೇಗೌಡ ಮೈಕ್‌ತೆಗೆದುಕೊಂಡುಉದ್ಯಮದಲ್ಲಿ ಬ್ಯುಸಿ ಇದ್ದ ನನ್ನನ್ನುರವಿ ಚಿತ್ರರಂಗಕ್ಕೆಕರೆದುಕೊಂಡು ಬಂದರು. ಅವರನ್ನು ಪ್ರೋತ್ಸಾಹಿಸಲು ನಿರ್ಮಾಣ ಮಾಡಲು ಮನಸ್ಸು ಮಾಡಲಾಯಿತು. ಬಂಗಾರದ ಮನುಷ್ಯ ನೋಡಿ ಸಾಕಷ್ಟು ಯುವಕರು ಸಿಟಿಯಿಂದ ಹಳ್ಳಿಗೆ ಹೋದರು. ಅಂತಹುದೆಅರ್ಥಪೂರ್ಣ ಸಂದೇಶಇದರಲ್ಲಿಇರಲಿದೆ.ರವಿರವರಿಗೆ ನಿಮ್ಮಲ್ಲರ ಬೆಂಬಲ ಸಹಕಾರಇರಲೆಂದು ಹೇಳಿದರು.

ಬಡವನಾಗುವುದುತಪ್ಪಲ್ಲ. ಬಡವನಾಗಿ ಬದುಕುವುದುತಪ್ಪುಎಂದು ಹೇಳಿಕೊಂಡರವಿ,ತಾನು ಬೆಳದು ಬಂದಕಷ್ಟದ ಹಾದಿಯ್ನು ಏಳೆ ಏಳೆಯಾಗಿ ಬಚ್ಚಿಟ್ಟರು. ೧೫೦ ಚಿತ್ರಗಳಲ್ಲಿ ಪೋಷಕ ಪಾತ್ರ ಮಾಡಿದ್ದ ನನ್ನನ್ನು, ನಾಯಕನಾಗುಅಂತಪ್ರೇರಿಪಿಸಿದ್ದು ಪತ್ನಿ. ಅವಳನ್ನು ಪಡೆಯಲು ಪುಣ್ಯ ಮಾಡಿದ್ದೆ.ಪ್ರಾರಂಭದಲ್ಲಿ ಫ್ಯಾಮಿಲಿ ಚಿತ್ರವಾಗಿರುವುದರಿಂದ ಹಾಡು ಬೇಡಅಂದುಕೊಂಡಿದ್ದೇವು.ಮುಂದೆನಾಲ್ಕು ಗೀತೆಗಳು ಹುಟ್ಟಿಕೊಂಡಿತು.ಗಂಡ ಲೇಟಾಗಿ ಬಂದರೆ, ಪಿಜ್ಜಾತರೆದೆಇದ್ದಾಗಡೈವರ್ಸ್‌ಕೊಡುವುದು.ಇಂತಹ ಸಣ್ಣ ಸಣ್ಣ ಕಾರಣಗಳಿಗೆ ಸಂಸಾರ ವಿಕೋಪಕ್ಕೆ ಹೋಗುತ್ತದೆ.ಅದನ್ನೆಚಿತ್ರಕತೆಯಲ್ಲಿ ಮಸೇಜ್‌ಮೂಲಕ ಹೇಳಲಾಗಿದೆ.ಇದರಕುರಿತಂತೆ ಹಾಡನ್ನು ಸೇರಿಸಲಾಗಿದೆ.ಜಿಮ್‌ರವಿ ಅಫೀಶಿಯಲ್ ಯೂಟ್ಯೂಬ್‌ದಲ್ಲಿ ಹಾಡುಗಳನ್ನು ನೋಡಬಹುದು.ಮಾದ್ಯಮದ ಸಹಕಾರ ಬೇಕೆಂದುಕೋರಿದರು.

ನಾಯಕಿಅಪೂರ್ವ,  ಸಂಗೀತ ಸಂಯೋಜಕ ಶ್ರೀಧರ್‌ಸಂಭ್ರಮ್, ವಕೀಲೆ ಪಾತ್ರ ಮಾಡಿರುವ ನಿವೇದಿತಾ, ನೃತ್ಯ ನಿರ್ದೇಶಕ ಕಲೈ, ಛಾಯಾಗ್ರಾಹಕಕುಮಾರ್ ಸಂತಸವನ್ನು ಹಂಚಿಕೊಂಡರು. ಸಮಾರಂಭದಲ್ಲಿಅರಗಣಿ ಸಂಸ್ಥೆಯ ಮಾಲೀಕ ಟಿ.ವೆಂಕಟೇಶ್, ಒಗ್ಗರಣೆಡಬ್ಬಿ ಮುರಳಿ, ಕಾರ್ಪೋರೇಟರ್ ಮೋಹನ್‌ಕುಮಾರ್ ಮುಂತಾದವರು ಉಪಸ್ತಿತರಿದ್ದರು.ಇದರ ಮಧ್ಯೆ ಹಾಡುಗಳು ವಿದ್ಯುತ್‌ಪರದೆ ಮೇಲೆ ಬಿತ್ತರಗೊಂಡಿತು.

 

Copyright@2018 Chitralahari | All Rights Reserved. Photo Journalist K.S. Mokshendra,