Body God.Film Press Meet

Wednesday, July 21, 2021

264

 

ಮಾನವ ಸಂಬಂಧಗಳ ಸುತ್ತಲ್ಲಿನ‌ ಕಥೆ ಹೇಳಲಿದೆ "ಬಾಡಿ ಗಾಡ್"

 

ಪ್ರಭು ಶ್ರೀನಿವಾಸ್ ನಿರ್ದೇಶಿಸಿರುವ ಈ ಚಿತ್ರದ ಪ್ರಮುಖಪಾತ್ರದಲ್ಲಿ ಮಠ ಗುರುಪ್ರಸಾದ್. ಮೊಗ್ಗಿನ‌ ಮನಸ್ಸಿನ ಮನೋಜ್ ಈ ಚಿತ್ರದ ನಾಯಕ.

 

ತಮ್ಮ‌ ನಿರ್ದೇಶನದ ಮೂಲಕ ಮನೆಮಾತಾಗಿರುವ ಗುರುಪ್ರಸಾದ್ ಕಲಾವಿದರಾಗೂ ಸೈ ಅನಿಸಿಕೊಂಡವರು.

ಕೊರೋನ ಲಾಕ್ ಡೌನ್ ಸಮಯದಲ್ಲಿ ಗುರುಪ್ರಸಾದ್ ವಿಭಿನ್ನ ಕಥಾಹಂದರ ಹೊಂದಿರುವ "ಬಾಡಿ ಗಾಡ್" ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ  ಹಾಗೂ ಪತ್ರಿಕಾಗೋಷ್ಠಿಯಲ್ಲಿ ಗುರುಪ್ರಸಾದ್ ತಮ್ಮ ಅನುಭುವ ಹಂಚಿಕೊಂಡಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಖಾಲಿ ಕುಳಿತ್ತಿದ್ದ ನನಗೆ ನಿರ್ದೇಶಕರು ಹೇಳಿದ ಈ ಕಥೆ ಇಷ್ಟವಾಯಿತು.

ಅರವತ್ತರ ಆಸುಪಾಸಿನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ತನಕ ಪತ್ರಕರ್ತ ಹಾಗೂ ನಿರ್ದೇಶಕನಾಗಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ನನಗೆ ಇದು ವಿಭಿನ್ನ ಪಾತ್ರ.

 ಚೆನ್ನಾಗಿ ಓದಿದ್ದ, ಮಗ-ಮಗಳು ವಿದೇಶದಲ್ಲಿ ನೆಲೆಸಿರುತ್ತಾರೆ. ವಯಸ್ಸಾದ ವರಿಗೆ ಮಕ್ಕಳ ಅವಶ್ಯಕತೆ ಎಷ್ಟಿರುತ್ತದೆ ಎನ್ನುವುದನ್ನು ಈ ಪಾತ್ರದ ಮೂಲಕ ಹೇಳಹೊರಟಿದ್ದಾರೆ.

 ನನ್ನ ಪತ್ನಿ ಪಾತ್ರದಲ್ಲಿ ಪದ್ಮಜಾರಾವ್ ಅಭಿನಯಿಸಿದ್ದಾರೆ.

ಒಳ್ಳೆಯ ಕಥೆ, ಒಳ್ಳೆಯ ತಂಡ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ಪ್ರೇಕ್ಷಕರ ಮೆಚ್ಚುಗೆಗೂ "ಬಾಡಿ ಗಾಡ್" ಪಾತ್ರವಾಗಲಿದೆ ಎಂದರು ಗುರುಪ್ರಸಾದ್.

ದಕ್ಷಿಣ ಭಾರತದ ಹೆಸರಾಂತ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಹಾಗೂ ಕನ್ನಡದಲ್ಲಿ "ಗಣಪ", "ಕರಿಯ ೨",

 "ಡಾಲಿ" ಚಿತ್ರಗಳನ್ನು ನಿರ್ದೇಶಿಸಿರುವ ಪ್ರಭು ಶ್ರೀನಿವಾಸ್ ಈ ಚಿತ್ರದ ನಿರ್ದೇಶಕರು.

ಸತ್ತ ವ್ಯಕ್ತಿಯ ದೇಹದ ಹಿಂದೆ ಹೆಣೆಯಲಾಗಿರುವ ವಿಭಿನ್ನ ಕಥೆಯ "ಬಾಡಿ ಗಾಡ್" ಚಿತ್ರವನ್ನು ಲಾಕ್ ಡೌನ್ ಸಮಯದಲ್ಲಿ ನಿರ್ದೇಶಿಸಿದ್ದೇನೆ. 

ಈ ಕಥೆಯನ್ನು ನನ್ನ‌ ಸ್ನೇಹಿತರ ಬಳಿ ಹೇಳಿದೆ. ಅವರೆ ನಿರ್ಮಾಣ ಮಾಡಬೇಕಿತ್ತು.. ಕಾರಣಾಂತರದಿಂದ ಆನಂತರ ನಾನೇ ನಿರ್ಮಾಣವನ್ನು ಮಾಡಿದ್ದೇನೆ. ಪ್ರಮೋಷನಲ್ ಸಾಂಗ್ ಒಂದರ ಚಿತ್ರೀಕರಣ ಬಿಟ್ಟು ಬಾಕಿ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ‌ ಕೂಡ ತೆರೆಗೆ ಬರಲು ಬಹುತೇಕ ಸಿದ್ದವಾಗಿದೆ.‌ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುತ್ತೇನೆ  ಎನ್ನುತ್ತಾರೆ ಪ್ರಭು ಶ್ರೀನಿವಾಸ್.

ಮಧ್ಯಮವರ್ಗದ ಯುವಕನೊಬ್ಬನ ಪಾತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನನ್ನ ಹಾಗೂ ಗುರುಪ್ರಸಾದ್ ಅವರ ಕಾಂಬಿನೇಶನ್ ನಲ್ಲಿ ಬರುವ ಸನ್ನಿವೇಶಗಳು ಚೆನ್ನಾಗಿದೆ ಅಂತಾರೆ ನಾಯಕ ಮನೋಜ್.

ಈ ಹಿಂದೆ "ಮೊಗ್ಗಿನ ಮನಸ್ಸು", " ಓ ಪ್ರೇಮವೇ" ಮುಂತಾದ ಚಿತ್ರಗಳಲ್ಲಿ ಮನೋಜ್ ಅಭಿನಯಿಸಿದ್ದಾರೆ.

ಮುಗ್ದ ಯುವಕನ ಪಾತ್ರಕ್ಕಾಗಿ ಸಾಕಷ್ಟು ಕಲಾವಿದರನ್ನು ಸಂಪರ್ಕಿಸಲು‌ ಪ್ರಯತ್ನ ಮಾಡಿದರಂತೆ. ಆದರೆ ಅನಿರೀಕ್ಷಿತ ಭೇಟಿಯಾದ ಮನೋಜ್ ಅವರು ಈ ಪಾತ್ರಕ್ಕೆ ಸರಿಹೊಂದುತ್ತಾರೆ ಎಂದು ಕೊಂಡು ಮನೋಜ್ ಅವರನ್ನು ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿರುವುದಾಗಿ  ತಿಳಿಸಿದ ನಿರ್ದೇಶಕರು, ಮನೋಜ್ ಅವರ ಸಹಜ ಅಭಿನಯ ನೋಡುಗರ ಮನದಲ್ಲೇ ಉಳಿಯುತ್ತದೆ ಎನ್ನುತ್ತಾರೆ.

ಚಿತ್ರದಲ್ಲಿ ನಟಿಸಿರುವ ನಿರಂಜನ್, ಅಶ್ವಿನ್ ಹಾಸನ್, ಸಂಗೀತ ನೀಡಿರುವ‌ ಕರಣ್ ಬಿ ಕೃಪ ಹಾಗೂ ಸಂಕಲನಕಾರ ಉಜ್ವಲ್ ಚಂದ್ರ "ಬಾಡಿ ಗಾಡ್" ಬಗ್ಗೆ ತಮ್ನ ಅನುಭವ ಹಂಚಿಕೊಂಡರು.

ಸೆಂಟಿಮೆಂಟ್ ನೊಂದಿಗೆ, ಕಾಮಿಡಿಯ ಕಥಾಹಂದರ ಹೊಂದಿರುವ "ಬಾಡಿ ಗಾಡ್" ಗೆ ಇವನೇ ಬೊಂಬೆ ಆಡ್ಸೋನು ಎಂಬ ಅಡಿಬರಹವಿದೆ.

Copyright@2018 Chitralahari | All Rights Reserved. Photo Journalist K.S. Mokshendra,