Namma Hudugaru.Film Song Launch

Friday, October 08, 2021

ನಮ್ಮ ಹುಡುಗರು ಹಾಡು ಬಿಡುಗಡೆ

ಉಪೇಂದ್ರಅಣ್ಣನಮಗ ನಿರಂಜನ್‌ಸುಧೀಂದ್ರಅಭಿನಯದ ‘ನಮ್ ಹುಡುಗರು’ ಚಿತ್ರವುತೆರೆಗೆ ಬರೋದಕ್ಕೆ ಸಿದ್ದವಾಗಿದೆ.ದಸರಾ ಹಬ್ಬದ ಪ್ರಯುಕ್ತ ಮೊದಲ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ.ಪುನೀತ್‌ರಾಜ್‌ಕುಮಾರ್‌ಧ್ವನಿಯಾಗಿರುವಗೀತೆಗೆಅಭಿಮಾನ್‌ರಾಯ್ ಸಂಗೀತ ಸಂಯೋಜಿಸಿದ್ದಾರೆ.ನಂತರ ಮಾತನಾಡಿದನಿರಂಜನ್‌ಉಪೇಂದ್ರ ನಾನು ಭರಮ ಹೆಸರಿನಲ್ಲಿ ಮಂಡ್ಯಾಕಡೆಯ ಮುಗ್ದ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಪಾತ್ರದ ಪೋಷಣೆಚೆನ್ನಾಗಿದೆ.ಲವ್ ಸ್ಟೋರಿಜೊತೆಗೆ ಫ್ಯಾಮಲಿ ಡ್ರಾಮಇರುವಂತಹ ಸಿನಿಮಾವೆಂದು ಹೇಳಿಕೊಂಡರು.ಮೊದಲ ಸಿನಿಮಾದಲ್ಲೆ ಒಳ್ಳೆಯ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆಅಂತಾರೆ ನಾಯಕಿರಾಧ್ಯಾ.ಒಂದು ಸುಳ್ಳಿನಿಂದ ಆಗುವ ಅನಾಹುತದ ಬಗ್ಗೆ ಚಿತ್ರತೆಗೆದುಕೊಂಡು ಹೋಗುತ್ತದೆಂದು ನಿರ್ದೇಶಕ ಎಚ್.ಬಿ.ಸಿದ್ದು ಮಾಹಿತಿ ನೀಡಿದರು,

ನಿರ್ಮಾಪಕಕೆ.ಕೆ.ಅಶ್ರಫ್‌ಅವರಿಗೆ ಹೊಸ ಅನುಭವವಾಗಿದ್ದರಿಂದಕಡಿಮೆ ಸಮಯತೆಗೆದುಕೊಂಡರು.ತಾರಗಣದಲ್ಲಿ ವಸಿಷ್ಟಸಿಂಹ, ಅಲೋಕ್, ಪ್ರವೀಣ್, ಮಾರುತಿ.ಬಿ.ಹೆಚ್, ಶರತ್‌ಲೋಹಿತಾಶ್ವ, ಭವ್ಯ, ರಾಧಾರಾಮಚಂದ್ರ, ಯತಿರಾಜ್, ರಾಕ್‌ಲೈನ್ ಸುಧಾಕರ್ ಮುಂತಾದವರು ನಟಸಿದ್ದಾರೆ. ಹೆಚ್.ಕೆ.ಚಿದಾನಂದಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಭಜರಂಗಿಮೋಹನ್-ಹೈಟ್ ಮಂಜು ನೃತ್ಯ, ವಿನೋಧ್ ಸಾಹಸವಿದೆ. ಗೋಲ್ಡನ್‌ಆರ್ಟ್ಸ್‌ಅರ್ಪಿಸುವಚಿತ್ರವು ಸದ್ಯ ಪ್ರಮೋಷನ್ ಕೆಲಸದಲ್ಲಿ ಬ್ಯುಸಿ ಇದ್ದು. ನವೆಂಬರ್ ತಿಂಗಳಲ್ಲಿ ತೆರೆಗೆ ಬರುವ ಸಾದ್ಯತೆಇದೆ.

 

 

    

     

    

 

 

Copyright@2018 Chitralahari | All Rights Reserved. Photo Journalist K.S. Mokshendra,