Love Birds.Film Pooja Press Meet

Sunday, October 10, 2021

 

 

 *"Love ಬರ್ಡ್ಸ್" ಗೆ ಚಾಲನೆ ನೀಡಿದ ಪವರ್ ಸ್ಟಾರ್.‌*

 

 *ಪಿ.ಸಿ.ಶೇಖರ್ ನಿರ್ದೇಶನದ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ.*

 

 

 *ಬನಶಂಕರಿ ಚಿತ್ರಾಲಯ* ಲಾಂಛನದಲ್ಲಿ ಚಂದ್ರು *ಕಡ್ಡಿಪುಡಿ ನಿರ್ಮಿಸುತ್ತಿರುವ,* ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ *"Love ಬರ್ಡ್ಸ್"* ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಪವರ್ ಸ್ಟಾರ್ *ಪುನೀತ್ ರಾಜಕುಮಾರ್* ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ *ರಮೇಶ್ ರೆಡ್ಡಿ* ಕ್ಯಾಮೆರಾ ಚಾಲನೆ ಮಾಡಿದರು. *ಪ್ರಜ್ವಲ್ ದೇವರಾಜ್* ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

 

ಪಿ.ಸಿ.ಶೇಖರ್ ನನಗೆ ಹೇಳಿದ ಕಥೆ ನನಗೆ ಇಷ್ಟವಾಯಿತು. ಕಥೆ ಕೇಳಿದ ಕೆಲವೇ ದಿನಗಳಲ್ಲಿ ಚಿತ್ರದ ಮುಹೂರ್ತ ನಡೆದಿದೆ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿತ್ತಿದ್ದಾರೆ. ಮತ್ತೊಬ್ಬ ನಾಯಕಿ ಇರುತ್ತಾರೆ. ಯಾರೆಂಬುದು ಇಷ್ಟರಲ್ಲೇ ತಿಳಿಯಲಿದೆ. ಸಾಧುಕೋಕಿಲ, ತಾರಾ, ಅವಿನಾಶ್, ರಂಗಾಯಣ ರಘು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ ಎಂದರು ನಿರ್ಮಾಪಕ ಚಂದ್ರು ಕಡ್ಡಿಪುಡಿ.

ಮೊದಲು ನಿರ್ಮಾಪಕ ಚಂದ್ರು ಅವರಿಗೆ ಕಥೆ ಹೇಳಿದೆ. ಇಷ್ಟಪಟ್ಟರು. ರೋಮಿಯೋ ಚಿತ್ರದ ನಂತರ ಲವ್ ಸಬ್ಜೆಕ್ಟ್ ಕಥೆ ಸಿದ್ದ ಮಾಡಿಕೊಂಡಿದ್ದೇನೆ. ಈ ಕಥೆಗೆ ಡಾರ್ಲಿಂಗ್ ಕೃಷ್ಣ ಅವರೆ ಸೂಕ್ತ ನಾಯಕ ಅನಿಸಿತು. ಆಶಿಕಾ ರಂಗನಾಥ್ ಈ ಚಿತ್ರದ ನಾಯಕಿ. ಇದೊಂದು ಕಾರ್ಪೊರೇಟ್ ಶೈಲಿಯ ಚಿತ್ರ. ಅರ್ಜುನ್ ಜನ್ಯ ಅವರ ರಾಗ ಸಂಯೋಜನೆಯಲ್ಲಿ ಉತ್ತಮ ಹಾಡುಗಳು ಮೂಡಿಬರತ್ತದೆ. ಎರಡು, ಮೂರು ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಮೊದಲ ಹಂತ ಬೆಂಗಳೂರಿನಲ್ಲಿ ನಡೆದರೆ, ಮುಂದಿನ ಹಂತದ ಚಿತ್ರೀಕರಣ ಮಂಡ್ಯ ಮುಂತಾದ ಕಡೆ ನಡೆಯಲಿದೆ ಎಂದರು ನಿರ್ದೇಶಕ  ಪಿ.ಸಿ.ಶೇಖರ್.

 

ನಾನು ಜಾಕಿ ಚಿತ್ರದ ಸಮಯದಿಂದಲೂ ಕಡ್ಡಿಪುಡಿ ಚಂದ್ರು ಅವರನ್ನು ಬಲ್ಲೆ. ಒಟ್ಟಾಗಿ ಅಭಿನಯ ಕೂಡ ಮಾಡಿದ್ದೇವೆ. ಆಗ ಅವರು ಒಂದು ಚಿತ್ರ ಮಾಡೋಣ ಅನ್ನುತ್ತಿದ್ದರು. ಈಗ ಸಮಯ ಕೂಡಿ ಬಂದಿದೆ. ನಿರ್ದೇಶಕ ಪಿ.ಸಿ.ಶೇಖರ್ ಅವರು ಹೇಳಿದ ಕಥೆ ಇಷ್ಟವಾಯಿತು. ನನಗೆ ಅವರ ನಿರ್ದೇಶನದ "ರೋಮಿಯೋ"  ಮೆಚ್ಚುಗೆಯ ಚಿತ್ರ.  ನಿರ್ದೇಶಕರು ಹೇಳಿದಂತೆ ಇದೊಂದು ಕಾರ್ಪೊರೇಟ್ ಶೈಲಿಯ ಚಿತ್ರ. ನನ್ನದು ಸಾಫ್ಟ್ ವೇರ್ ಎಂಜಿನಿಯರ್ ಪಾತ್ರ ಎಂದು ಡಾರ್ಲಿಂಗ್ ಕೃಷ್ಣ ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

 

ಚಿತ್ರದಲ್ಲಿ ಅಭಿನಯಿಸುತ್ತಿರುವ ಹಿರಿಯ ನಟ ರಂಗಾಯಣ ರಘು ಅವರು ಚಿತ್ರತಂಡಕ್ಕೆ ಶುಭ ಕೋರಿದರು.

Copyright@2018 Chitralahari | All Rights Reserved. Photo Journalist K.S. Mokshendra,