Purushottama.Film Title Song Rel

Friday, October 08, 2021

ಪುರುಷೋತ್ತಮಎರಡನೇಗೀತೆ ಬಿಡುಗಡೆ

ರಾಜ್ಯ, ರಾಷ್ಟ್ರ ಮತ್ತುಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವರವಿ ಪ್ರಥಮಬಾರಿ ನಾಯಕನಾಗಿ ಮತ್ತುರವಿಸ್ ಜಿಮ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ, ವಿಜಯ್‌ರಾಮೆಗೌಡ ಭೂಕನಕೆರೆ ಪ್ರಸೆಂಟ್ ಮಾಡುತ್ತಿರುವ‘ಪುರುಷೋತ್ತಮ’ ಸಿನಿಮಾದಮೊದಲ ಹಾಡನ್ನು ನಟ ಶರಣ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಸದರಿಗೀತೆಯು ವೈರಲ್ ಆಗಿ ಪ್ರಶಂಸೆಯ ಸುರಿಮಳೆಗಳು ಬಂದಿದ್ದವು. 

ಹಾಡನ್ನು ಆಲಿಸಿದ ರಂಗಿತರಂಗಖ್ಯಾತಿಯ ನಿರೂಪ್‌ಭಂಡಾರಿಅವರುರವಿ, ಸಂಗೀತ ನಿರ್ದೇಶಕ ಶ್ರೀಧರ್‌ಸಂಭ್ರಮ್ ಹಾಗೂ ನಿರ್ದೇಶಕಎಸ್.ವಿ.ಅಮರನಾಥ್ ಅವರುಗಳನ್ನು ಶ್ಲಾಘಿಸಿದ್ದಾರೆ. ಅಲ್ಲದೆಖುದ್ದು ಆಸಕ್ತಿ ವಹಿಸಿ ತಂಡವನ್ನು ಮನೆಗೆ ಕರೆಸಿಕೊಂಡು ಶೀರ್ಷಿಕೆ ಮೇಕಿಂಗ್ ಹಾಡನ್ನು ಅನಾವರಣಗೊಳಿಸಿ, ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.ಸದರಿ ಹಾಡನ್ನುಜಿಮ್‌ರವಿ ಅಫೀಶಿಯಲ್ ಯೂಟ್ಯೂಬ್‌ಚಾನಲ್‌ದಲ್ಲಿ ವೀಕ್ಷಿಸಬಹುದು.

ರಷಸ್ ನೋಡಿದ ಪರಭಾಷಿಗಳು ತೆಲುಗು, ತಮಿಳು ಭಾಷೆಗೆಡಬ್ ಮಾಡಲು ಬೇಡಿಕೆಇಟ್ಟಿದ್ದಾರೆ.ಆದರೆ ಮೊದಲ ಪ್ರತಿ ಹೊರಬಂದ ನಂತರ ತಿಳಿಸುವುದಾಗಿ ನಿರ್ಮಾಪಕರು ಹೇಳಿದ್ದಾರೆ.ಇಷ್ಟೆಲ್ಲಾ ಸಕರಾತ್ಮಕ ಮಾಹಿತಿ ಹೊಂದಿರುವಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.ಅಪೂರ್ವ ನಾಯಕಿ.ಇವರೊಂದಿಗೆ ಎ.ವಿ.ಹರೀಶ್, ಮೈಸೂರುಪಭು ಸೇರಿದಂತೆ ಹಲವು ಖ್ಯಾತ ಕಲಾವಿದರುಗಳು ಅಭಿನಯಿಸಿದ್ದಾರೆ. ಆನಂದ್ ಪ್ರಿಯಾ, ಪ್ರಮೋದ್‌ಮರವಂತೆ ಹಾಗೂ ನಿರ್ದೇಶಕರು ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್‌ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದಾರೆ.ಛಾಯಾಗ್ರಹಣಕುಮಾರ್.ಎಂ, ಸಂಕಲನ ಅರ್ಜುನ್‌ಕಿಟ್ಟು, ನೃತ್ಯ ಕಲೈ ಅವರದಾಗಿದೆ. ಪ್ರಸ್ತುತಆರ್‌ಆರ್‌ದಲ್ಲಿ ಬ್ಯುಸಿ ಇದ್ದು, ಸದ್ಯದಲ್ಲೆ ಸೆನ್ಸಾರ್ ಹೋಗಲಿದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,