Consilium.Film Press Meet

Monday, November 22, 2021

261

 

*‘ಕಾನ್ಸೀಲಿಯಂ’ ಟ್ರೇಲರ್ ರಿಲೀಸ್…. ಐಟಿ ಉದ್ಯೋಗಿಗಳ ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಾನ್ಸೀಲಿಯಂ!*

 

ಕಾನ್ಸೀಲಿಯಂ.. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಮೊದಲ ವೈಜ್ಞಾನಿಕ ಕಾಲ್ಪನಿಕ ಸಿನಿಮಾ. ಐಟಿ ಉದ್ಯೋಗಳು ನಿರ್ಮಿಸ್ತಿರುವ ಈ ಸಿನಿಮಾದಲ್ಲಿ ಡಿಎನ್ ಎ, ಸ್ಪೇಸ್, ಟೆಕ್ನಾಲಜಿ ಇತ್ಯಾದಿ ವಿಷಯಗಳನ್ನಿಟ್ಟು ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಕಥೆ ಹೇಳೋದಿಕ್ಕೆ ರೆಡಿಯಾಗಿದ್ದಾರೆ ಯುವ ನಿರ್ದೇಶಕ ಸಮರ್ಥ್. ಈ ಸಿನಿಮಾದ ಟ್ರೇಲರ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. 

 

ಕಾನ್ಸೀಲಿಯಂ ಅನ್ನೋದು ಲ್ಯಾಟಿನ್ ಪದ.. ಪ್ಲಾನಿಂಗ್..ಜಡ್ಜಮೆಂಟ್, ಅಡ್ವೈಸ್ ಇತ್ಯಾದಿ ಅರ್ಥಗಳಿವೆ. ಈ ಎಲ್ಲಾ ವಿಷಗಳನ್ನು ಒಳಗೊಂಡಿರೋದ್ರಿಂದ ಕಾನ್ಸೀಲಿಯಂ ಅನ್ನೋ ಟೈಟಲ್ ಫಿಕ್ಸ್ ಮಾಡಲಾಗಿದೆ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಅನುಭವ ಇರುವ ಮಂಡ್ಯದ ಪ್ರತಿಭೆ ಸಮರ್ಥ್ಯ ಈ ಚಿತ್ರದ ನಿರ್ದೇಶನ ಮಾಡುವುದರ ಜೊತೆಗೆ ಮೇನ್ ಲೀಡ್ ರೋಲ್ ಪ್ಲೇ ಮಾಡಿದ್ದಾರೆ.

ಸೀತಾರಾಮ್ ಶಾಸ್ತ್ರೀ ಪ್ರೊಡಕ್ಷನ್ ನಡಿ ತಯಾರಾಗಿರುವ ಕಾನ್ಸೀಲಿಯಂ ಸಿನಿಮಾದಲ್ಲಿ ಪ್ರೀತಂ, ಮನೆದೇವ್ರು ಸೀರಿಯಲ್ ಖ್ಯಾತಿಯ ಅರ್ಚನಾ ಲಕ್ಷ್ಮೀ ನರಸಿಂಹ ಸ್ವಾಮಿ, ಲವ್ ಮಾಕ್ಟೇಲ್ ಖ್ಯಾತಿಯ ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಂಕರ್ ನಾಗ್ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದ ಜಗದೀಶ್ ಮಲ್ನಾಡ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

 

ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರೋ ಕಾನ್ಸೀಲಿಯಂ ಸಿನಿಮಾ ಬಳಗದಲ್ಲಿ ರೇಷ್ಮಾ ರಾವ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಫಸ್ಟ್ ಲುಕ್, ಟೀಸರ್ ಮೂಲಕ ಸೌಂಡ್ ಮಾಡ್ತಿರುವ ಕಾನ್ಸೀಲಿಯಂ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,