Arjun Gowda.Film Press Meet

Sunday, December 19, 2021

ಅರ್ಜುನ್ಗೌಡದಲ್ಲಿರಾಮುಗೆ ಶ್ರದ್ದಾಂಜಲಿ

ನಿರ್ಮಾಪಕರಾಮು ಬಂಡವಾಳ ಹೂಡಿರುವ ೩೯ನೇ ಚಿತ್ರ ‘ಅರ್ಜುನ್‌ಗೌಡ’ ವರ್ಷದ ಕೊನೆ ದಿನದಂದುತೆರೆಗೆ ಬರುತ್ತಿರುವುದಿರಿಂದಚಿತ್ರದಕುರಿತುಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ತಂಡವು ಮಾದ್ಯಮದ ಮುಂದೆ ಬಂದಿತ್ತು. ನಾಯಕ ಪ್ರಜ್ವಲ್‌ದೇವರಾಜ್ ಮಾತನಾಡಿರಾಮು ಸರ್ ನಿರ್ಮಾಣ ಶುರು ಮಾಡಿದ್ದುಅಪ್ಪನಜತೆಗೆ, ಅವರಕೊನೆಯ ಸಿನಿಮಾ ನನ್ನೋಂದಿಗೆ.ಇದನ್ನು ಹೇಳಲು ಬೇಸರವಾಗುತ್ತದೆ.ಚಿತ್ರ ನೋಡಿದಾಗಇದು ನಾನು ಮಾಡಿದಚಿತ್ರನಾ ಅನಿಸಿತ್ತು. ಶೂಟಿಂಗ್‌ದಲ್ಲಿಆಗಿದ್ದೆ ಬೇರೆ.ಎಡಿಟಿಂಗ್‌ರೂಮ್‌ದಲ್ಲಿ ಬೇರೆತರಹ ಮಾಡಿದ್ದಾರೆ.ಅವರು ಸಿನಿಮಾದ ಬಗ್ಗೆ ಹೆಚ್ಚು ನಿರೀಕ್ಷೆಇಟ್ಟುಕೊಂಡಿದ್ದರು.

ಬಿಡುಗಡೆ ನಂತರಯಾರಿಗೂಡೇಟ್ಸ್‌ಕೊಡಬೇಡಿ.ಒಟ್ಟಿಗೆಇನ್ನಷ್ಟುಚಿತ್ರ ಮಾಡೋಣಅಂತ ಹೇಳಿದ್ದರು.ಆದರೆಇಂದುಅವರಿಲ್ಲ. ಅವರ ಬ್ಯಾನರ್‌ಜೊತೆಗೆಖಂಡಿತಇರುತ್ತೇನೆ. ಮಾಲಾಶ್ರೀ ಅವರೊಂದಿಗೆ ಸಿನಿಮಾ ನೋಡಿದೆ.ಅವರಿಗೆಕೊನೆಯಐದು ನಿಮಿಷ ಶ್ರದ್ದಾಂಜಲಿ ಸಲ್ಲಿಸಿದ್ದೇವೆ.ಖಂಡಿತವಾಗಿ ಮೇಡಂ ಸರ್ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆಎಂದು ಹೇಳಿದರು. ಈಗಿನ ಯೂಥ್ಸ್‌ಇಷ್ಟಪಡುವುದಕ್ಕೆಎಲ್ಲವುಇದೆಅಂತಾರೆಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಲಕ್ಕಿಶಂಕರ್.

ನಾಯಕಿ ಪ್ರಿಯಾಂಕತಿಮ್ಮೇಶ್, ಸಂಗೀತ ನಿರ್ದೇಶಕಧರ್ಮವಿಶ್, ಛಾಯಾಗ್ರಾಹಕಜೈಆನಂದ್ ಉಪಸ್ತಿತರಿದ್ದು ಸಿನಿಮಾದ ಬಗ್ಗೆ ಮಾತನಾಡಿದರು.ತಾರಗಣದಲ್ಲಿ ಬಾಲಿವುಡ್‌ಕಲಾವಿದರಾಹುಲ್‌ದೇವ್, ಸ್ಪರ್ಶರೇಖಾ, ಸಾಧುಕೋಕಿಲ, ಕಡ್ಡಿಪುಡಿಚಂದ್ರು, ದೀಪಕ್‌ಶೆಟ್ಟಿ, ದಿನೇಶ್‌ಮಂಗಳೂರು, ಶೋಭಿತ್, ಜೀವನ್, ಹನುಮಂತೇಗೌಡ, ಮೋಹನ್‌ಜುನೇಜ್ ಮುಂತಾದವರು ನಟಿಸಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,