Alla Naveena.Albam Song Rel

Monday, December 20, 2021

ಆಡು ಭಾಷೆಆಲ್ಬಂ ಶೀರ್ಷಿಕೆ

ನಾವು ಸಾಮಾನ್ಯವಾಗಿ ಮಾತನಾಡುವಾಗ ‘ಅಲ್ಲಾ ಹೀಗೇಕೆ, ಅಲ್ಲಾ ನೀನೇನು ಮಾಡಿದೆ’ ಹೀಗೆ ತರೆಹವಾರಿ ಮಾತುಗಳ ಜತೆಗೆಅಲ್ಲಾ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತೇವೆ. ಇದನ್ನೆಕ್ಯಾಚ್ ಮಾಡಿಕೊಂಡಯುವ ಪ್ರತಿಭೆಗಳ ತಂಡವೊಂದು ‘ಅಲ್ಲಾ ನವೀನಾ’ ಎನ್ನುವ ನಾಲ್ಕು ನಿಮಿಷದ ವಿಡಿಯೋಆಲ್ಬಂನ್ನುಆರು ಲಕ್ಷದಲ್ಲಿಸಿದ್ದಪಡಿಸಿದ್ದಾರೆ. ‘ಅವನ್ನೆ ಶ್ರೀಮನ್‌ನಾರಾಯಣ’, ‘ಸಲಗ’ ಚಿತ್ರಗಳಿಗೆ ಹಾಡನ್ನು ಬರೆದಿರುವ ನಾಗಾರ್ಜುನ್‌ಶರ್ಮಾ ಸಾಹಿತ್ಯಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ.

ಹಾಡಿಗೆ ಚಾಲನೆ ನೀಡಿದದುನಿಯಾ ವಿಜಯ್ ಮಾತನಾಡಿ ಮುಂದೆ ನಾಗಾರ್ಜುನಶರ್ಮ ನಿರ್ದೇಶಕನಾಗಿ ಬರಲಿ. ‘ಬೇಕಾ ಪ್ರೀತಿ ಬೇಡ್ವಾ’ ಗೀತೆ ನೋಡಲು ಕೇಳಲು ತುಂಬಾಚೆನ್ನಾಗಿದೆ.ನಾನು ಸರ್ಕಸ್ ಹೊಡಿಬೇಕಾದ ಸಂದರ್ಭದಲ್ಲಿಯಾರ ಸಮಯಗೊತ್ತಾಗುತ್ತಿರಲಿಲ್ಲ. ನಾವು ಇನ್ನೊಂದುಯೋಚನೆ ಮಾಡುತ್ತಿರಲಿಲ್ಲ. 

ಇವತ್ತು ನಮ್ಮನ್ನು ಸಾಬೀತು ಪಡಿಸಿಕೊಳ್ಳಲು ಹಾಡು, ಕಿರುಚಿತ್ರ ವೇದಿಕೆಯಾಗಿದೆ.ಪತ್ರಿಕೆ, ದೃಶ್ಯ ಮಾದ್ಯಮಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದೀರಾ.ಇದೇರೀತಿ ಮುಂದುವರೆಯಲಿ.ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ನಿರ್ದೇಶನ ಮಾಡಿ.ಎಲ್ಲಾಅರ್ಹತೆ ನಿಮ್ಮಲ್ಲಿತುಂಬಿಕೊಂಡಿದೆ.ನಾನು ನಿಮ್ಮಜೊತೆಇರುತ್ತೆನೆಂದು ಹೇಳಿ ತಂಡಕ್ಕೆ ಶುಭ ಹಾರೈಸಿದರು.

ನಾವು ಹೆಚ್ಚು ಬಳಸುವ ಪದವನ್ನುತೆಗೆದುಕೊಂಡು ಹಾಡನ್ನು ಮಾಡಿದ್ದೇವೆ. ನಿರಾಸೆ ಮತ್ತು ಹಾಸ್ಯದರೂಪದಲ್ಲಿಗೀತೆ ಬಂದಿದೆ.ನೋಡುವವರಿಗೆ ಬೇಜಾರು ಮಾಡದೆ, ನಗಿಸಿಕೊಂಡು ತತ್ವಗಳನ್ನು ಹೇಳಲಾಗಿದೆ. ಇಂದಿನ ಯುವಜನಾಂಗಕ್ಕೆ ಬುದ್ದಿವಾದ ಹೇಳುವ ಪಾತ್ರದಲ್ಲಿರಾಜ್.ಬಿ.ಶೆಟ್ಟಿಚೆನ್ನಾಗಿ ನಟಿಸುವಜತೆಗೆ ಹೆಜ್ಜೆ ಹಾಕಿದ್ದಾರೆ. ಅಭಿನಯತರಂಗ ವಿದ್ಯಾರ್ಥಿಅಥರ್ವ ನಾಯಕನಾಗಿ ಪರಿಚಯಗೊಂಡಿದ್ದಾರೆ.ಇವರೊಂದಿಗೆ  ಸ್ಪೂರ್ತಿ ಕಾಣಿಸಿಕೊಳ್ಳುತ್ತಾರೆ. ಮಾಡ್ರನ್‌ಯುಗದಲ್ಲಿ ಲವ್ ಯಾವತರಹಇರುತ್ತದೆಎಂಬುದನ್ನುತೋರಿಸಲಾಗಿದೆ.ಕನ್ನಡದಲ್ಲಿ ಪರಂವಾ ಸ್ಟುಡಿಯೋದವರು ಬಿಡುಗಡೆ ಮಾಡುತ್ತಿದ್ದು, ತಮಿಳಿನಲ್ಲಿ ಐರಾ ಮ್ಯೂಸಿಕ್ ಸಂಸ್ಥೆಯುವರು ಹಕ್ಕುಗಳನ್ನು ಪಡೆದುಕೊಂಡಿದ್ದಾರೆಎಂಬುದಾಗಿ ನಿರ್ದೇಶಕರು ಮಾಹಿತಿನೀಡಿದರು.

ಸಂಗೀತಆನಂದ್‌ರಾಜ್‌ವಿಕ್ರಂ, ಛಾಯಾಗ್ರಹಣ ವಿಶ್ವಾಸ್, ನೃತ್ಯ ಮುರುಗ, ಗಾಯನಆಂಟೋನಿದಾಸ್‌ಅವರದಾಗಿದೆ.ಹೆಸರುಘಟ್ಟ ಬಳಿಇರುವ ಕಸಿಪು ಲಾಂಜ್‌ದಲ್ಲಿ ನಾಲ್ಕು ರಾತ್ರಿಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,