Film RRR.Film Trailer Launch

Friday, December 10, 2021

104

 

KVN ಪ್ರೊಡಕ್ಷನ್ ಜೊತೆ ರಾಜಮೌಳಿ ಸಿನಿಮಾ….? ರಾಜಮೌಳಿ RRR ಬಳಗದ ಕನ್ನಡ ಮಾತು ಬಲು ಚೆನ್ನ!

 

ಸಿನಿಮಾದ ಅಂಗಳದ ಯಾವುದೇ ಮೂಲೆ..ಗಲ್ಲಿ ಗಲ್ಲಿಯಲ್ಲಿಯೂ ಈಗ ಬರೀ RRR ಸಿನಿಮಾದ್ದೇ ಜಪ-ತಪ.. ಯೂಟ್ಯೂಬ್ ನಲ್ಲಿ ಬೆಂಕಿ ಬಿರುಗಾಳಿ ಸೃಷ್ಟಿಸ್ತಿರುವ RRR ಟ್ರೇಲರ್ ನೋಡಿ ಚಿತ್ರಪ್ರೇಮಿಗಳು ಬಹುಪರಾಕ್ ಅಂತಿದ್ದಾರೆ. ಜಕ್ಕಣ್ಣ ಈಸ್ ಗ್ರೇಟ್.. ರಿಯಲ್ ಹೀರೋ ಅಂತಾ ಶಹಬ್ಬಾಸ್ ಗಿರಿ ಕೊಡ್ತಿದ್ದಾರೆ. ಅದ್ಧೂರಿ.. ವೈಭೋಗದ RRR ಟ್ರೇಲರ್ ಲಾಂಚ್ ಇವೆಂಟ್ ಗೆ ಇವತ್ತು ಜಕ್ಕಣ್ಣಗಾರು ತಮ್ಮ ಬಳಗದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ನಗರದ ಓರಿಯನ್ ಮಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ RRR ಬಳಗ ಮಾಧ್ಯಮದವರ ಒಟ್ಟಿಗೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು.

 

ಕನ್ನಡದಲ್ಲಿ ಮಾತಾಡಿದ ರಾಜಮೌಳಿ ಟೀಂ!

RRR ಟ್ರೇಲರ್ ಇವೆಂಟ್ ಗೆ ಹಾಜರಾಗಿದ್ದ ರಾಜಮೌಳಿ, ಜೂನಿಯರ್ ಎನ್ ಟಿಆರ್, ರಾಮ್ ಚರಣ್ ತೇಜ್, ಆಲಿಯಾ ಭಟ್ ಎಲ್ಲರೂ ಕನ್ನಡದಲ್ಲಿ ಮಾತು ಆರಂಭಿಸಿದರು. ಅದ್ರಲ್ಲೂ ತಾರಕ್ ಹೇಳಿಕೊಟ್ಟ ಕನ್ನಡ ಪಾಠ ಕಲಿತ ಆಲಿಯಾ ಎಲ್ಲರಿಗೂ ನಮಸ್ಕಾರ ಅಂತಾ ಕನ್ನಡದಲ್ಲಿ ಹೇಳಿದ್ದು ಎಲ್ಲರನ್ನೂ ಚಕಿತಗೊಳಿಸಿತು.

 

ಕನ್ನಡದಲ್ಲಿ ಇಡೀ ಸಿನಿಮಾ ಡಬ್ ಮಾಡಿದ ತಾರಕ್!

RRR ಟ್ರೇಲರ್ ನಲ್ಲಿ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ. ಇವರಿಬ್ಬರ ಕನ್ನಡ ವಾಯ್ಸ್ ಕೇಳಿ ಕನ್ನಡಿಗರು ಹಿರಹಿರ ಹಿಗ್ಗಿದ್ದಾರೆ. ಕೇವಲ ಟ್ರೇಲರ್ ನಲ್ಲಿ ಮಾತ್ರವಲ್ಲ ಇಡೀ ಸಿನಿಮಾವನ್ನೂ ಕನ್ನಡದಲ್ಲಿಯೇ ಡಬ್ ಮಾಡಿದ್ದೇನೆ ಅಂತಾ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಜೂನಿಯರ್ ಎನ್ ಟಿಆರ್ ನಗುತ್ತಲೇ ಉತ್ತರಿಸಿದರು.

ಕನ್ನಡ ಸಿನಿಮಾ ಮಾಡ್ತಾರೆ ರಾಮ್!

ರಾಜಮೌಳಿ ಡೈರೆಕ್ಷನ್ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕನ್ನಡ ಸಿನಿಮಾ ಮಾಡ್ತೇನೆ. ಒಳ್ಳೆ ಕಥೆ ಹಾಗೂ ಡೈರೆಕ್ಟರ್ ಸಿಕ್ಕರೇ ಕನ್ನಡ ಸಿನಿಮಾ ಮಾಡ್ತೇನೆ ಅಂತಾ ಮನದಾಳದ ಮಾತು ಹಂಚಿಕೊಂಡರು.

 

ಕೆವಿಎನ್ ಜೊತೆ ರಾಜಮೌಳಿ ಸಿನಿಮಾ!

RRR ಸಿನಿಮಾದ ಕನ್ನಡ ವಿತರಣೆ ಹಕ್ಕು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ KVN ಪಾಲಾಗಿದೆ. ಕೋಟಿ ಕೋಟಿ ಕೊಟ್ಟು RRR ವಿತರಣೆ ಹಕ್ಕು ಪಡೆದಿರುವ KVN ಜೊತೆ ರಾಜಮೌಳಿ ಸಿನಿಮಾ ಮಾಡ್ತಾರಾ ಅನ್ನೋ ಪತ್ರಕರ್ತರೊಬ್ಬರ ಪ್ರಶ್ನೆ ಜಕ್ಕಣ್ಣಗಾರು, ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ರು.

 

ಕನ್ನಡ ರೈಟ್ಸ್ ಕಾಂಪಿಟೇಷನ್ ಇತ್ತು !

 

RRR ಸಿನಿಮಾದ ಕನ್ನಡ ವಿತರಣೆ ಹಕ್ಕು ಪಡೆಯಲು ದೊಡ್ಡ ಕಾಂಪಿಟೇಷನ್ ಇತ್ತು. ಆ ಕಾಂಪಿಟೇಷನ್ ನಡುವೆ KVN, RRR ಸಿನಿಮಾದ ವಿತರಣೆ ಹಕ್ಕನ್ನು ಖರೀದಿ ಮಾಡಿದೆ. ಈ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೆವಿಎನ್  ವೆಂಕಟ್, ಬಾಹುಬಲಿ ಸಿನಿಮಾವನ್ನು ಕರುನಾಡ ಮಂದಿಗೆ ತೋರಿಸುವ ಇಚ್ಛೆ ಇತ್ತು. ಬಟ್ ಬಾಹುಬಲಿ ಕನ್ನಡದಲ್ಲಿ ಇರಲಿಲ್ಲ. ಆದ್ರೆ RRR ಸಿನಿಮಾದ ಕನ್ನಡದಲ್ಲಿ ಇದೆ. ಹೀಗಾಗಿ ತಾವೇ ಕನ್ನಡ ವಿತರಣೆ ಹಕ್ಕನ್ನು ಎಷ್ಟೇ ಕಾಂಪಿಟೇಷನ್ ಇದ್ರು ಖರೀದಿ ಮಾಡಿದ್ರು.

 

 

ಒಟ್ನಲ್ಲಿ RRR ಸಿನಿಮಾ ಅದ್ಧೂರಿಯಾಗಿ ಪ್ರಮೋಷನ್ ಮಾಡ್ತಿದೆ. ಈಗಾಗಲೇ ಸ್ಯಾಂಪಲ್ಸ್ ನಲ್ಲಿ ಸಖತ್ ಸದ್ದು ಮಾಡ್ತಿರುವ RRR ಸಿನಿಮಾ ಜನವರಿ 7ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,