Stalker.Film Poster Launch

Sunday, December 19, 2021

204

 

*RGV ಶಿಷ್ಯನ ’ಸ್ಟಾಕರ್’ ಸಿನಿಮಾ ರಿಲೀಸ್ ಗೆ ರೆಡಿ...*

 

ಬಣ್ಣದ‌ ಜಗತ್ತಿನಲ್ಲಿ ಕನಸುಗಳ ಹೊತ್ತು ಬರುವ ಮಂದಿಗೇನು ಕಮ್ಮಿ‌ ಇಲ್ಲ. ಪ್ರತಿಭೆ, ಅದೃಷ್ಟ ಇದ್ದವರು ಗಟ್ಟಿಯಾಗಿ ನೆಲೆಯೂರ್ತಾರೆ.  ಇಂತಹ ಪ್ರತಿಭೆಯೊಬ್ಬರು ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಗರಡಿ *ಇಂದ* ಪ್ರತ್ಯಕ್ಷರಾಗಿದ್ದಾರೆ. ಹಾಗಂತ ಅವ್ರು ತೆಲುಗಿನವರಲ್ಲ. ಅಪ್ಪಟ ಕನ್ನಡದವರೇ. ಅವರೇ ಕಿಶೋರ್ ಭಾರ್ಗವ್.  ಸ್ಯಾಂಡಲ್ ವುಡ್ ನ ಭರವಸೆ ನಿರ್ದೇಶಕರಾಗಿ ಕಿಶೋರ್ ರ್ಭಾರ್ಗವ್ ಗಮನ ಸೆಳೆಯುತ್ತಿದ್ದಾರೆ.

 

 

ಆರ್ ಜಿವಿ ಕ್ಯಾಂಪ್ ನಲ್ಲಿ ಐದಾರು ವರ್ಷಗಳ ಕಾಲ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿ ಸೈಕೋ ಎಂಬ *ತೆಲುಗು* ಸಿನಿಮಾ ಮಾಡಿದ್ದ ಕಿಶೋರ್ ಭಾರ್ಗವ್ ನಿರ್ದೇಶಿಸಿರುವ *ಸ್ಟಾಕರ್* ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

 

 

ಸುಮನ್ ನರ್ಗಕರ್, ರಾಮ್, ಐಶ್ವರ್ಯ ನಂಬಿಯರ್, ಉದಯ್ *ಆಚಾರ್*, ನಮ್ರತಾ ಪಾಟೀಲ್, ಜಿತೆನ್ ಆರೋರಾ, *ಭವಾನಿಶಂಕರ್* ದೇಸಾಯಿ ಮುಂತಾದವರು *ಸ್ಟಾಕರ್*  ಸಿನಿಮಾದಲ್ಲಿ ನಟಿಸಿದ್ದು, ಕನ್ನಡದ ಜೊತೆಗೆ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತಯಾರಾಗಿದೆ.

ಥ್ರಿಲ್ಲರ್ ಜೊತೆಗೆ *ಸಸ್ಪೆನ್ಸ್* ಕಥಾಹಂದರ ಹೊಂದಿರುವ *ಸ್ಟಾಕರ್* ಸಿನಿಮಾವನ್ನು, ಎಸ್ ಎಂ ಎಲ್ *ಪ್ರೊಡಕ್ಷನ್ಸ್*, ಸ್ಕ್ರಿಪ್ಟ್ ಟೀಸ್ *ಫಿಲ್ಮ್ಸ್*  ನಡಿ ಎಂ ಎನ್ ವಿ ರಮಣ,  ಸಂದೀಪ್ ಗೌಡ *ಹಾಗೂ ಸ್ವಾತಿ ಗೋವಾಡ* *ನಿರ್ಮಾಣ* ಮಾಡಿದ್ದಾರೆ.

 

 

ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ವಿನೋದ್ ರಾಜ್ ಕ್ಯಾಮೆರಾ ಕೈ ಚಳಕ, *ಸ್ಕಂದ* ಕಶ್ಯಪ್ ಮ್ಯೂಸಿಕ್, ಸುಧೀರ್ ಪಿಆರ್ ಕಲಾ ನಿರ್ದೇಶನ, *ವಂದನಾ ಭಂಡಾರೆ ವಸ್ತ್ರ ವಿನ್ಯಾಸ* ಸಿನಿಮಾದಲ್ಲಿರಲಿದೆ. ಸದ್ಯ *ಸ್ಟಾಕರ್* ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿ ಬಿಡುಗಡೆಗೆ ಎದುರು ನೋಡುತ್ತಿದೆ.

Copyright@2018 Chitralahari | All Rights Reserved. Photo Journalist K.S. Mokshendra,