Yaarige Beku Ee Lokha.Film News

Friday, December 24, 2021

ಮರಿಟೈಗರ್ *ವಿನೋದ್ ಪ್ರಭಾಕರ್* ಬಿಡುಗಡೆ ಮಾಡಿದರು *"ಯಾರಿಗೆ ಬೇಕು ಈ ಲೋಕ"** ಚಿತ್ರದ ಮೊದಲ ಹಾಡು. 

 

ಆರ್ಯವರ್ಧನ್ ನಾಯಕರಾಗಿ ಅಭಿನಯಿಸುತ್ತಿರುವ "ಯಾರಿಗೆ ಬೇಕು ಈ ಲೋಕ" ಚಿತ್ರದ ಮೊದಲ ಹಾಡನ್ನು ಮರಿಟೈಗರ್ ವಿನೋದ್ ಪ್ರಭಾಕರ್ ಬಿಡುಗಡೆ ಮಾಡಿದ್ದಾರೆ.

 

ರಾಜೇಶ್ ಕೃಷ್ಣ ಅವರು ಹಾಡಿರುವ ಈ ಹಾಡು ನೋಡಲು ಹಾಗೂ ಕೇಳಲು ಇಂಪಾಗಿದೆ. ನಾಯಕ ಆರ್ಯವರ್ಧನ್  ನೋಡಲು ಸುಂದರವಾಗಿ ಕಾಣಿಸಿದ್ದಾರೆ. ನಿರ್ದೇಶಕರಾದ ರಮೇಶ್ ಹಾಗೂ ಗೋಪಿ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಶ್ರೀನಿವಾಸರಾವ್ ಹಾಗೂ ರೋಶಿನಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ ಜನತೆಯ ಆಶೀರ್ವಾದ ಈ ಹೊಸತಂಡದ ಮೇಲಿರಲಿ.‌ ಎಲ್ಲರಿಗೂ ಶುಭವಾಗಲಿ ಎಂದು ವಿನೋದ್ ಪ್ರಭಾಕರ್ ಹಾರೈಸಿದರು.

  ಆರ್ಯವರ್ಧನ್ ಅವರಿಗೆ ನಾಯಕಿಯರಾಗಿ‌ ಪ್ರಿಯಾಂಕ ರಿವಾರಿ, ಪಾವನಿ ಹಾಗೂ ವರ್ಷ ನಟಿಸಿದ್ದಾರೆ.

 

ಹಿರಿಯ ನಟ ವಿನೋದ್ ಕುಮಾರ್, ರಚ ರವಿ, ರಾಮು(ಜ್ಯೂನಿಯರ್ ರಾಜಕುಮಾರ್), ಶೋಭನ್ ಅಕ್ಷರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

ಎಂ.ರಮೇಶ್‌ ಹಾಗೂ ಗೋಪಿ ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರವನ್ನು ಬಿ.ಶ್ರೀನಿವಾಸ ರಾವ್ ಹಾಗೂ ರೋಶಿನಿ ನೌಡಿಯಲ್ ನಿರ್ಮಿಸಿದ್ದಾರೆ.

 

ಮಹಿತ್ ನಾರಾಯಣ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಶ್ರೀ ವಸಂತ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎ.ಕೆ.ಆನಂದ್ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ "ಯಾರಿಗೆ ಬೇಕು ಈ ಲೋಕ" ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,