Jai Ho Kannadiga.Video Song Release

Monday, December 27, 2021

 

**ಅಪ್ಪು ನೆನಪಲ್ಲಿ ಅನಾವರಣವಾಯಿತು "ಜೈಹೋ ಕನ್ನಡಿಗ" ಹಾಡು* .

 

 *ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿಬಂದಿದೆ ಜೆ.ಆರ್.ಶಿವ ರಚಿಸಿ, ಸಂಗೀತ ನೀಡಿರುವ ಈ ಗೀತೆ.*

 

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ "ಒರಟ ಐ ಲವ್ ಯು" ಚಿತ್ರಕ್ಕೆ ಜಿ.ಆರ್.ಶಂಕರ್ ಅವರೊಡನೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ, ಶಿವ ನಂತರ "ಈ ಸಂಜೆ" ಚಿತ್ರದಲ್ಲೂ ಕಾರ್ಯ ನಿರ್ವಹಿಸಿದ್ದರು.‌

ಕೆಲವು ವರ್ಷಗಳ ನಂತರ ಮತ್ತೆ ಮರಳಿ ಬಂದಿರುವ ಶಿವ, "ಜೈಹೋ ಕನ್ನಡಿಗ" ಎಂಬ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. ಈ ಹಾಡನ್ನು ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಣೆ ಮಾಡಿದ್ದಾರೆ.

ಈ ಹಾಡಿನಲ್ಲಿ ಜೆ.ಆರ್. ಶಿವ, ಹಂಸಲೇಖ, ವಿ.ಮನೋಹರ್, ಸಿ.ಆರ್.ಮನೋಹರ್, ವಿ.ನಾಗೇಂದ್ರ ಪ್ರಸಾದ್, ದೊಡ್ಡರಂಗೇಗೌಡ, ಸಾಲುಮರದ ತಿಮ್ಮಕ್ಕ, ಕೆ.ಮಂಜು, ಅನಿರುದ್ಧ್, ಶ್ರೀಧರ್ ವಿ ಸಂಭ್ರಮ್, ಮಾಸ್ಟರ್ ಆನಂದ್, ಧರ್ಮ ಕೀರ್ತಿರಾಜ್, ಧರ್ಮ,

ಪೊಲೀಸ್ ಅಧಿಕಾರಿಗಳು, ಸಾಕಷ್ಟು ಸಂಖ್ಯೆಯಲ್ಲಿ ಕಲಾವಿದರು, ಮಕ್ಕಳು ಅಭಿನಯಿಸಿದ್ದಾರೆ.

 

ಅದ್ದೂರಿಯಾಗಿ ಮೂಡಿಬಂದಿರುವ ಈ ಗೀತೆಯನ್ನು ಪದ್ಮಶ್ರೀ ದೊಡ್ಡರಂಗೇಗೌಡ, ಸಿ.ಆರ್.ಮನೋಹರ್, ಗಂಡಸಿ ಸದಾನಂದ ಸ್ವಾಮಿ, ಪಿ.ಆರ್.ಓ ಸುಧೀಂದ್ರ ವೆಂಕಟೇಶ್, ನಟಿ ಲಲಿತಮ್ಮ,  ಮಹಾಲಕ್ಷ್ಮಿ ಸ್ವೀಟ್ಸ್ ನ ಹರಣ್ ರಾಜ್ , ಅರುಣ್ ಸೇರಿದಂತೆ ಮುಂತಾದ ಗಣ್ಯರು ಬಿಡುಗಡೆ ಮಾಡಿದರು.

 

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಶಿವ,  ಈ ಹಾಡಿನ ಮೂಲಕ ಏಳುಕೋಟಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಎಷ್ಟೋ ಅನುಭವವಿರುವವರು ಸಾಹಿತಿ ಬರೆದ ಹಾಗಿದೆ ಈ ಹಾಡು. ಶಿವ ಅವರಿಗೆ ಒಳಿತಾಗಲಿ ಎಂದರು ಹಿರಿಯ ಸಾಹಿತಿ ದೊಡ್ಡರಂಗೇಗೌಡ.

  ನಾನು "ಒರಟ ಐ ಲವ್ ಯು "ಚಿತ್ರ ಮಾಡಿದಾಗಿನಿಂದಲೂ ಶಿವ ನನಗೆ ಪರಿಚಯ.  ಕನ್ನಡದ ಹಿರಿಮೆ ಸಾರುವ ಈ ಹಾಡು ತುಂಬಾ ಚೆನ್ನಾಗಿದೆ. ಇಂತಹ ಇನ್ನೂ ಸಾಕಷ್ಟು ಹಾಡುಗಳು ಶಿವ ಅವರು ರಚಿಸಲಿ. ಅವರಿಗೆ ಬೇಕಾದ ಸಹಕಾರ ನೀಡಿತ್ತೇ‌ನೆ ಎಂದರು ನಿರ್ಮಾಪಕ ಸಿ.ಆರ್.ಮನೋಹರ್.

 

ಇದು ನನ್ನೊಬ್ಬನಿಂದ ಆಗಿಲ್ಲ. ನನ್ನ ಹಿಂದೆ ಸಾಕಷ್ಟು ಜನರಿದ್ದಾರೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ಹಾಗೂ ಹಾಡನ್ನು ಬಿಡುಗಡೆ ಮಾಡಲು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ. ತುಂಬಾ ದಿನಗಳ ನಂತರ ನಾನು ಈ ಕ್ಷೇತ್ರಕ್ಕೆ ಬಂದಿದ್ದೀನಿ. ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಬಂದಿರುವ ಈ ಹಾಡನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಮೂರು ಜ‌ನ ಗಾಡ್ ಫಾದರ್ ಇದ್ದಾರೆ. ಒಬ್ಬರು ನನ್ನ ತಂದೆ. ಇನ್ನೊಬ್ಬರು ಅಪ್ಪು ಹಾಗೂ ಮತ್ತೊಬ್ಬರು ಸಿ.ಆರ್.ಮನೋಹರ್.

ಸಿ.ಆರ್.ಮನೋಹರ್ ಅವರು ಏಕೆಂದರೆ, ಖಾಯಿಲೆಯಿಂದ ಚಿಕ್ಕ ವಯಸ್ಸಿಗೆ ನನ್ನ ಗೆಳೆಯ ಅಸುನೀಗಿದ. ನಂತರ ಆ ಕುಟುಂಬಕ್ಕೆ ಸಿ.ಆರ್.ಮನೋಹರ್ ಮಾಡಿರುವ ಉಪಕಾರ ಮರೆಯುವ ಹಾಗಿಲ್ಲ. ಹಾಗಾಗಿ ಅವರು ನನಗೆ ಗಾಡ್ ಫಾದರ್ ಎಂದು ಶಿವ ಭಾವುಕರಾದರು.

Copyright@2018 Chitralahari | All Rights Reserved. Photo Journalist K.S. Mokshendra,