Love You Rachchu.Film Press Meet

Saturday, December 25, 2021

ರೋಮ್ಯಾಂಟಿಕ್ ಲವ್ ಸ್ಟೋರಿ ಲವ್ ಯುರಚ್ಚು

ಶುಕ್ರವಾರ ಬಿಡುಗಡೆಯಾಗುತ್ತಿರುವ ‘ಲವ್ ಯುರಚ್ಚು’ ಚಿತ್ರವು ಮಧ್ಯಮ ವರ್ಗದ ಭಾವನೆಗಳ ತುಂಬಿಸಿರುವ ಪ್ರೀತಿಯಕಥೆಇದಾಗಿದೆ.ನಿರ್ಮಾಪಕಗುರುದೇಶಪಾಂಡೆ ಮಾತನಾಡಿ ಹಿರಿಯ ನಿರ್ದೇಶಕ ಶಶಾಂಕ್ ಬರೆದಕಥೆಯನ್ನುಚಿತ್ರ ಮಾಡಲಾಗಿದೆ.ಅವರು ಹೇಳಿದ ಲೈನ್‌ಚೆನ್ನಾಗಿತ್ತು.ನಾವು ಓಕೆ ಅಂದ ಮೇಲೆ ಅದನ್ನೇಡೆವಲಪ್ ಮಾಡಿದರು.ನಂತರ ನಮಗೆ ಬೇಕಾದ ಹಾಗೆ ಕೆಲವು ಬದಲಾವಣೆ ಮಾಡಿಕೊಂಡುಚಿತ್ರಕಥೆಯನ್ನು ಸಿದ್ದಪಡಿಸಿದೆವು.ಟೈಟಲ್‌ಇಡುವಾಗ ಪ್ರಧಾನ ಶೀರ್ಷಿಕೆ ಅನ್ನೋ ಮಾತು ಬಂತು.

ಇಲ್ಲಿ ನಾಯಕ ನಾಯಕಿಗೆ ಹೇಳುವ ಡೈಲಾಗ್.ರಚಿತಾರಾಮ್  ಹೆಸರನ್ನುಕೇಳಿ ಇಷ್ಟಪಟ್ಟರು. ನಿರ್ದೇಶಕ ಶಶಾಂಕ್.ಎಸ್.ರಾಜ್ ಹೊಸಬರಾಗಿದ್ದರಿಂದ ನಾನು, ಅಜಯ್‌ರಾವ್, ಮೇಡಂಒಂದಷ್ಟು ಸಲಹೆಗಳನ್ನು ನೀಡುತ್ತಾ ಬಂದೆವು.ಹೀಗೆ ಎಲ್ಲರೂ ಸೇರಿಕೊಂಡು ಶ್ರಮವಹಿಸಿದ್ದರಿಂದ ಚಿತ್ರವುಚೆನ್ನಾಗಿ ಬಂದಿದೆ.ಥ್ರಿಲ್ಲರ್ ಸಿನಿಮಾಗೆ ಬೇಕಾದಇಂಪಾದ ಹಾಡುಗಳನ್ನುಮಣಿಕಾಂತ್‌ಕದ್ರಿ ನೀಡಿದ್ದಾರೆ.

ಅಚ್ಯುತಕುಮಾರ್ ನಾಯಕಿಯತಂದೆಯಾಗಿ, ಇನ್ನೊಂದು ನೆಗಟಿವ್ ಪಾತ್ರ ಬಿಡುಗಡೆಯಾದ ಮೇಲೆ ತಿಳಿಯಲಿದೆ.ಅಜಯ್‌ರಾವ್ ಒಳ್ಳೆ ಪರ್‌ಫಾರ್ಮನ್ಸ್‌ಇರುವ ನಟ.ನಾಲ್ಕೈದು ದಿನ ೨೪ ಗಂಟೆ ಕೆಲಸ ಮಾಡಿದ್ದೇವೆ. ಕನ್ನಡ ಸಿನಿಮಾಗೆದ್ದರೆಕನ್ನಡಿಗರೇಗೆದ್ದಂತೆ.ಆದಕಾರಣಎಲ್ಲರೂಚಿತ್ರಮಂದಿರದಲ್ಲೆ ವೀಕ್ಷಿಸಿರೆಂದು ಕೋರಿದರು.ಸುದ್ದಿಗೋಷ್ಟಿಯಲ್ಲಿರಚಿತಾರಾಮ್, ನಿರ್ದೇಶಕರು, ಸಂಗೀತ ಸಂಯೋಜಕರು ಮತ್ತು ನಟಅರವಿಂದ್‌ರಾವ್ ಉಪಸ್ತಿತರಿದ್ದು ಅನುಭವಗಳನ್ನು ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,