Arjun Gowda.Film Event

Tuesday, December 28, 2021

ಅರ್ಜುನ್ಗೌಡಗೆತಾರೆಯರ ಬೆಂಬಲ

ಪ್ರಜ್ವಲ್‌ದೇವರಾಜ್ ನಟನೆ, ಲಕ್ಕಿಶಂಕರ್ ನಿರ್ದೇನದ ‘ಅರ್ಜುನ್‌ಗೌಡ’ ಚಿತ್ರವನ್ನು ಬಹುಪ್ರೀತಿಯಿಂದರಾಮು ನಿರ್ಮಾಣ ಮಾಡಿದ್ದರು.ಆದರೆ ಸಿನಿಮಾತೆರೆಗೆ ಬರುವ ಮುನ್ನವೇರಾಮು ನಿಧನರಾದರು.ಅವರ ಅನುಪಸ್ಥಿತಿಯಲ್ಲಿ ನಟಿ,ಪತ್ನಿ ಮಾಲಾಶ್ರೀ ಸಿನಿಮಾವನ್ನುತೆರೆಗೆತರುತ್ತಿದ್ದಾರೆ. ಬಿಡುಗಡೆಯ ಹಿನ್ನಲೆಯಲ್ಲಿ ಪ್ರಿರಿಲೀಸ್‌ಇವೆಂಟ್‌ಕಾರ್ಯಕ್ರಮ ಮಂಗಳವಾರ ನಡೆಯಿತು.

ರಾಮು ನನ್ನ ಸಹೋದರ:

ರಾಮು ನನಗೆ ಸಹೋದರಇದ್ದಂತೆ.ಅವರ ಬ್ಯಾನರ್‌ದಲ್ಲಿ ಸಿನಿಮಾ ಮಾಡುವಾಗಖುಷಿಯ ವಾತವರಣಇತ್ತು.‘ಸಿಂಹದ ಮರಿ’ ಸಮಯದಲ್ಲಿಯಾವುದೇ ಸಮಸ್ಯೆಎದುರಾದರೂಅದನ್ನು ನಿಭಾಯಿಸಿ, ಚಿತ್ರೀಕರಣ ಪೂರ್ಣಗೊಳಿಸುತ್ತಿದ್ದರು.ಕಥೆಗೆಏನೆಲ್ಲಾ ಬೇಕು ಅದನ್ನುಒದಗಿಸುತ್ತಿದ್ದರು.ಕನ್ನಡದಲ್ಲಿಯೇ ಮೊದಲ ಡಿಟಿಎಸ್‌ಚಿತ್ರಅಂದರೆ ‘ಎಕೆ ೪೭’.ಇದಕ್ಕೆ ಸಾಕಷ್ಟು ಶ್ರಮಪಟ್ಟರು.ಅದು ಹಿಟ್‌ಆಯಿತು.ಅವರ ಅಗಲಿಕೆ ನೋವು ತಂದಿದೆ.ಯಾವುದೇಕಾರಣಕ್ಕೂ ನಿರ್ಮಾಣ ನಿಲ್ಲಿಸಬೇಡಿ.ನಾವು ನಿಮ್ಮಜತೆಗೆ ಸದಾಇರುತ್ತೇವೆ. ನಿಮ್ಮ ಬ್ಯಾನರ್‌ದಲ್ಲಿಇನ್ನೊಂದು ಸಿನಿಮಾ ಮಾಡ್ತಿನಿ.ಇದು ನನ್ನ ಪ್ರಾಮೀಸ್‌ಎಂದು ಶಿವಣ್ಣ ಹೇಳಿದರು.

ಮಲ್ಲ ಮಾಡೋಣ್ವಾ:

‘ರಾಮಾಚಾರಿ’ ಸಿನಿಮಾ ಸಮಯದಲ್ಲಿ  ಮಾಲಾಶ್ರೀ ತುಂಬಾ ಬ್ಯುಜಿ ನಟಿ. ೮ ದಿನಗಳಲ್ಲಿ ಸಿನಿಮಾ ಮುಗಿಸಿಕೊಟ್ಟಿದ್ದರು.ಚಿತ್ರ ಯಶಸ್ವಿ ಆಯಿತು. ಅವತ್ತಿನಅವರಋಣವನ್ನು ನಾನು ‘ಮಲ್ಲ’ ಸಿನಿಮಾದಲ್ಲಿ ತೀರಿಸಿದೆ.ನನ್ನಜತೆಗೆ ‘ಶಕುನಿ’ ಸಿನಿಮಾಕೈಗೆತ್ತಿಕೊಂಡಿದ್ದರಾಮು ಆ ಪ್ರಾಜೆಕ್ಟ್‌ನ್ನುಕೈ ಬಿಟ್ಟರು.ರಾಮುಅನ್ನೋದೇಒಂದು ಬ್ರಾಂಡು. ಇಂಡಸ್ಟ್ರಿಯಲ್ಲಿ ಅವರಿಗೆಒಂದು ಸ್ಥಾನವಿತ್ತು.ನಿಮಗೆ ಅಲ್ಲದಿದ್ದರೆ ನಿಮ್ಮ ಮಕ್ಕಳ ಹೆಸರಿನಲ್ಲಿ ಮಲ್ಲ೨ ನಿರ್ಮಾಣ ಮಾಡಿರೆಂದುರವಿಚಂದ್ರನ್‌ಗದ್ಗದಿತರಾಗಿದ್ದ ಮಾಲಾಶ್ರೀ ಅವರನ್ನು ನಗಿಸಿದರು.

ಓಂ ಮಾಡೋಣ:

ರಾಮುಅವರು ನಮ್ಮಎಲ್ಲರಜತೆಗೆ ಸಿನಿಮಾ ಮಾಡಿದವರು. ಈಗ ನಾವು ನಿಮ್ಮೊಂದಿಗೆಇದ್ದೇವೆಎಂದುಉಪೇಂದ್ರ  ಮಾಲಾಶ್ರೀಗೆ ಧೈರ್ಯತುಂಬಿದರು.

ಸಮಾರಂಭದಲ್ಲಿದೇವರಾಜ್, ಸಾಧುಕೋಕಿಲ, ಗಣೇಶ್, ನಾಯಕಿ ಪ್ರಿಯಾಂಕತಿಮ್ಮೇಶ್ ಮುಂತಾದವರು ಹಾಜರಿದ್ದರು. ಅಂದ ಹಾಗೆ ಚಿತ್ರವುಇದೇ ಶುಕ್ರವಾರದಂದುತೆರೆಕಾಣುತ್ತಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,