Laka Laka Lamborghini.Video Song Rel

Wednesday, December 29, 2021

ಲ್ಯಾಬೋರ್ಗಿನಿ ಕಾರಿನಲ್ಲಿರಚಿತಾರಾಮ್

ಚಂದನವನದ ಬ್ಯುಸಿ ತಾರೆರಚಿತಾರಾಮ್ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಾ, ದೂರದಟಾಲಿವುಡ್‌ದಲ್ಲಿಯೂತಮ್ಮಛಾಪನ್ನು ಉಳಿಸಿಕೊಂಡಿದ್ದಾರೆ.ಮೊನ್ನೆಯಷ್ಟೇಇವರ ನಟನೆಯ ‘೧೦೦’ ಚಿತ್ರತೆರೆಕಂಡುಯಶಸ್ವಿ ಪ್ರದರ್ಶನಕಂಡಿತ್ತು.ಇದರ ಮಧ್ಯೆಅವರುಆಲ್ಬಂ ಸಾಂಗ್‌ದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.ಬಿಗ್ ಬಾಸ್ ವಿನ್ನರ್ ಮತ್ತುರ‍್ಯಾಪರ್‌ಚಂದನ್‌ಶೆಟ್ಟಿ ಪ್ರತಿ ವರ್ಷಒಂದೊಂದು ಹೊಸ ಆಲ್ಬಂ ಸಾಂಗ್‌ನ್ನು ಬಿಡುಗಡೆ ಮಾಡುತ್ತಾ, ಯುವಜನರ ಮನಸ್ಸನ್ನುಗೆಲ್ಲುತ್ತಾ ಬಂದಿರುತ್ತಾರೆ.ಅದರಂತೆ ಈ ಬಾರಿಯೂ ಹೊಸದೊಂದು ಸಾಂಗ್‌ನ್ನು ಬಿಡುಗಡೆ ಮಾಡಲುತಯಾರಿ ನಡೆಸಿದ್ದಾರೆ.ವಿಶೇಷ ಎಂದರೆ ಸದರಿಗೀತೆಡಿಂಪಲ್‌ಕ್ವೀನ್‌ರಚಿತಾರಾಮ್ ಹೆಜ್ಜೆ ಹಾಕಿರುವುದು ವಿಶೇಷ. ‘ಲಕ ಲಕ ಲ್ಯಾಂಬೋರ್ಗಿನಿ’ ಎಂಬ ಶೀರ್ಷಿಕೆಯಲ್ಲಿ ಹಾಡು ಮೂಡಿಬಂದಿದೆ.

ಹಾಡಿನಕುರಿತಂತೆ ಪೋಸ್ಟರ್‌ನ್ನುಒಂದನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿಇಬ್ಬರುಗ್ಲಾಮರಸ್ ಲುಕ್‌ದಲ್ಲಿ ಸ್ಟೈಲಿಶ್ ಆಗಿ ನಿಂತುಕೊಂಡಿರುವುದು ಪಡ್ಡೆ ಹುಡುಗರನ್ನುಕೆಣಕಿದೆ.ಗೀತೆಗೆ ನಂದಕಿಶೋರ್ ನಿರ್ದೇಶನ ಮಾಡಿದ್ದಾರೆ.ಇವರಿಬ್ಬರು ಪೊಗರುಚಿತ್ರದಲ್ಲಿಒಟ್ಟಿಗೆ ಕೆಲಸ ಮಾಡಿದ್ದು, ಹಾಡಿಗಾಗಿ ಮತ್ತೆಒಂದಾಗಿದ್ದಾರೆ.ಮುರಳಿ ನೃತ್ಯ, ಶೇಖರ್‌ಚಂದ್ರಛಾಯಾಗ್ರಹಣ ಹಾಡಿಗಿದೆ. ಸಾಹಿತ್ಯ, ಸಂಗೀತ, ಗಾಯನ, ನಟನೆ ಹಾಗೂ ಪರಿಕಲ್ಪನೆಚಂದನ್‌ಶೆಟ್ಟಿಅವರದಾಗಿದೆ. ಆರ್.ಕೇಶವ್ ನಿರ್ಮಾಪಕರು, ಬಿಂದ್ಯಾ.ಕೆ.ಗೌಡ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.ಪ್ರಚಾರದ ಸಲುವಾಗಿ ಹಾಡನ್ನುತೋರಿಸಲಾಯಿತು.ಖ್ಯಾತ ನಿರ್ಮಾಪಕ ಕೆ.ಮಂಜುಅತಿಥಿಯಾಗಿ ಆಗಮಿಸಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,