Garudaaksha.Film Press Meet

Monday, January 03, 2022

262

 

ತಂದೆ ಮಗನ ಬಾಂದವ್ಯ

ತಂದೆ ಮಗನ ಸಂಬಂದವನ್ನು ತಿಳಿಸುವ ‘ಗರುಡಾಕ್ಷ’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರಕೆ,ಸಂಭಾಷಣೆಬರೆದು ನಿರ್ದೇಶನ ಮಾಡಿರುವಶ್ರೀಧರ್‌ವೈಷ್ಣವ್ ಮಾತನಾಡಿ೨೦೦೫ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಸಹ ಕಲಾವಿದನಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದೆ. ತರುವಾಯ ಹಿರಿಯ ನಟ ಮಿತ್ರತಂಡದೊಂದಿಗೆ ಸೇರಿಕೊಂಡು ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿ, ಮಧ್ಯೆ ೧೦೦ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು.‘ತಂದೆಯ ಸಾವು ಆಕಸ್ಮಿಕವಾಗಿರುವುದಿಲ್ಲ. 

ಇದೊಂದು ಮರ್ಡರ್‌ಎಂದು ಹೇಳುವುದರೊಂದಿಗೆ ಕಥೆಯು ಬಿಚ್ಚಿಕೊಳ್ಳುತ್ತದೆ’ ಎಂದು ಸಣ್ಣದೊಂದು ಮಾಹಿತಿ ನೀಡಿ ಮಾದ್ಯಮದ ಸಹಕಾರಕೋರಿದರು.ಆಂಜನೆಯದೇವಸ್ಥಾನದಲ್ಲಿಅರ್ಚಕರಾಗಿರುವ ನರಸಿಂಹಮೂರ್ತಿ ಬಂಡವಾಳ ಹೂಡಿದ್ದು ಸಣ್ಣಯಶಸ್ಸು ಸಿಕ್ಕರೆ ಮತ್ತಷ್ಟು ಚಿತ್ರಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿಕೊಂಡರು.ಡಾ.ವಿ.ನಾಗೇಂದ್ರಪ್ರಸಾದ್, ಅರಸುಅಂತಾರೆ ಸಾಹಿತ್ಯದ ‘ತೇಲಿ ತೇಲಿ ನಾ ಮೇಲೆ ಹೋದೆ’, ‘ನಾ ಅತ್ತರೂಕಣ್ಣು ಸುಮ್ಮನೆ ಬಿಡುತ್ತಿಲ್ಲ’, ‘ಮಳೆ ನಿಂತು’ ಹಾಡುಗಳನ್ನು  ತೋರಿಸಲಾಯಿತು.

ಮುಗ್ದನಾಗಿ ನಂತರಅಪ್ಪನ ಸಾವಿನ ತನಿಖೆ ನಡೆಸುವ ಪಾತ್ರದಲ್ಲಿಚೇತನ್‌ಯಧು ನಾಯಕ.ಸತ್ಯರಾಜ್ ಖಳನಾಗಿ ಹೊಸ ಅನುಭವ. ಇವರೊಂದಿಗೆರಫೀಕ್, ಪಲ್ಲವಿ, ಉಗ್ರಂರೆಡ್ಡಿ ಮುಂತಾದವರು ನಟಿಸಿದ್ದಾರೆ. ಸಂಗೀತ ಶ್ರೀವತ್ಸ, ಛಾಯಾಗ್ರಹಣವೀರೇಶ್.ಎನ್‌ಟಿಎ, ಸಂಕಲನ ಎನ್.ಎಂ.ವಿಶ್ವ, ನೃತ್ಯ ಸುರೇಶ್, ಸಾಹಸ ವೈಲೆಂಟ್‌ವೇಲುಅವರದಾಗಿದೆ.ಆದಷ್ಟು ಬೇಗನೆ ಚಿತ್ರವನ್ನುತೆರೆಗೆತರಲುತಂಡವುಯೋಜನೆ ಹಾಕಿಕೊಂಡಿದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,