Wedding Gift.Film Press Meet

Monday, January 03, 2022

ವೆಡ್ಡಿಂಗ್ಗಿಫ್ಟ್ ಕುಂಬಳಕಾಯಿ

ಗಂಡ ಹೆಂಡತಿ ನಡುವಿನ ಬಾಂದವ್ಯ, ಮನಸ್ತಾಪ ಹೀಗೆ ಸತಿಪತಿಯರ ನಡುವೆ ನಡೆಯುವಕಥೆ ಹೊಂದಿರುವ ‘ವೆಡ್ಡಿಂಗ್‌ಗಿಫ್ಟ್’ ಸಿನಿಮಾದಚಿತ್ರೀಕರಣವುಅಂದುಕೊಂಡಿದ್ದಕ್ಕಿಂತಒಂದು ದಿವಸ ಮುಂಚಿತವಾಗಿ ಮುಗಿದಿದೆ.ಸೆಕ್ಷನ್ ೪೯೮ಕ್ಕೆ ಸಂಬಂದಿಸಿದ ಕೆಲವು ವಿಷಯಗಳನ್ನು ಸನ್ನಿವೇಶಗಳಲ್ಲಿ ಬಳಸಲಾಗಿದೆ.೧೮ ವರ್ಷಗಳ ಹಿಂದೆ ರಾಜೇಂದ್ರಸಿಂಗ್‌ಬಾಬು ಅವರ ‘ಲವ್’ ಚಿತ್ರದಲ್ಲಿಕಾರ್ಯನಿರ್ವಹಿಸಿದ್ದ ವಿಕ್ರಮ್‌ಪ್ರಭು ದೀರ್ಘಕಾಲದಗ್ಯಾಪ್ ನಂತರಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ.ದೂರವಾಗಿದ್ದಗಂಡ ಹೆಂಡತಿ ಕೊನೆಗೆ ಒಂದಾಗುತ್ತಾರಾಎಂಬುದುಕ್ಲೈಮಾಕ್ಸ್‌ದಲ್ಲಿ ತಿಳಿಯಲಿದೆ. 

ನಿಶಾನ್‌ನಾಣಯ್ಯ ನಾಯಕ, ಸೋನುಗೌಡ ನಾಯಕಿ. ವಕೀಲೆ ಪಾತ್ರದಲ್ಲಿ ಹಿರಿಯ ನಟಿ ಪ್ರೇಮ ಅಭಿನಯಿಸಿದ್ದಾರೆ. ಉಳಿದಂತೆ ಅಚ್ಯುತಕುಮಾರ್, ಪವಿತ್ರಾಲೋಕೇಶ್ ಮುಂತಾದವರ ನಟನೆಇದೆ.

ತುಮಕೂರು, ಉಡುಪಿ, ಮಂಗಳೂರು ಮುಂತಾದ ಕಡೆಗಳಲ್ಲಿ ಒಟ್ಟು ಮೂವತ್ತೇಳು ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಹಾಡುಗಳಿಗೆ ಬಾಲಚಂದ್ರಪ್ರಭು ಸಂಗೀತಸಂಯೋಜಿಸಿದ್ದಾರೆ. ಉದಯಲೀಲ ಛಾಯಾಗ್ರಹಣ, ವಿಜೇತ್‌ಚಂದ್ರ ಸಂಕಲನವಿದೆ.ಏಪ್ರಿಲ್‌ದಲ್ಲಿತೆರೆಗೆತರಲು ನಿರ್ಮಾಪಕರುಚಿಂತನೆ ನಡೆಸಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,