Ganduli.Film Audio Relese

Wednesday, January 05, 2022

ಗಂಡುಲಿ ಧ್ವನಿಸಾಂದ್ರಿಕೆ ಬಿಡುಗಡೆ

ಹೊಸಬರ‘ಗಂಡುಲಿ’ ಚಿತ್ರದ ಹಾಡು ಬಿಡುಗಡೆಗೊಂಡು ಸದ್ದು ಮಾಡುತ್ತಿದೆ. ವಿ.ಆರ್.ಫಿಲ್ಮ್‌ಅಡಿಯಲ್ಲಿಅಮರೇಂದ್ರ, ಪುನೀತ್, ಚಂದನ ಹಾಗೂ ಲೋಕೇಶ್‌ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.ವಿನಯ್‌ರತ್ನಸಿದ್ದಿ ನಾಯಕ ಮತ್ತು ನಿರ್ದೇಶಕ.ಛಾಯಾದೇವಿ ನಾಯಕಿ. ನಾಯಕನತಾಯಿಯಾಗಿ ಸುಧಾನರಸಿಂಹರಾಜು ಕಾಣಿಸಿಕೊಂಡಿದ್ದು, ಇವರೊಂದಿಗೆಧಮೇಂದ್ರಅರಸ್ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ತಾರಗಣದಲ್ಲಿ ಶಿವಮೊಗ್ಗರಾಮಣ್ಣ, ಸುಬ್ಬೆಗೌಡ, ಶಿವು, ವಿಜಯ್ ಮುಂತಾದವರು ನಟಸಿದ್ದಾರೆ. 

ಪ್ರಚಾರದ ಸಲುವಾಗಿ ಚಿತ್ರದಆಡಿಯೋ ಬಿಡುಗಡೆ ಮಾಡಿದ ಬಿಗ್ ಬಾಸ್ ವಿಜೇತ ಪ್ರಥಮ್ ಮಾತನಾಡಿಡಾ.ರಾಜ್‌ಕುಮಾರ್‌ಅವರ ಬೆಟ್ಟದಹುಲಿ, ಹುಲಿಹೆಬ್ಬುಲಿ, ನಂತರರಾಜಾಹುಲಿ ಹೀಗೆ ಹುಲಿ ಸರಣಿಯಲ್ಲಿ ಮೂಡಿಬಂದಎಲ್ಲಾ ಚಿತ್ರಗಳು ಸೂಪರ್ ಹಿಟ್‌ಆಗಿದ್ದವು.ಆ ಚಿತ್ರಗಳ ಸಾಲಿಗೆ ಇದು ಸೇರುವಂತಾಗಲಿ. ವಿಜಯ್‌ಪ್ರಕಾಶ್ ಹಾಡಿರುವ ‘ನಿನ್ನಓರೆನೋಟ’ ಹಾಡುಚೆನ್ನಾಗಿ ಬಂದಿದೆ. ವಿನಯ್ ಏನೋ ಸಾಧನೆ ಮಾಡಲು ಬಂದಿದ್ದಾರೆ.ಅವರಿಗೆ ಒಳ್ಳೆಯದಾಗಲಿ ಎಂದರು.

ನಮ್ಮಚಿತ್ರದ ಹಾಡುಗಳನ್ನು ಇಷ್ಟಪಟ್ಟ ದಿಲೀಪ್‌ಅವರೇ ನಮ್ಮನ್ನು ಕರೆಸಿಕೊಂಡು ಮಾತನಾಡಿದರು.ಒಳ್ಳೆ ಹಣ ನೀಡಿದರು.ಅಲ್ಲದೆ ಪ್ರಚಾರ ಮಾಡಿಕೊಡುವುದಾಗಿ ಹೇಳಿದ್ದಾರೆ. ವಿತರಕ ಮರಿಸ್ವಾಮಿ ೫೦ಕ್ಕೂ ಹೆಚ್ಚು ಚಿತ್ರಮಂದಿರಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಸಿನಿಮಾಕ್ಕೆಎಲ್ಲಾರೀತಿಯಿಂದ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ.ಊರಿನದೇವಸ್ಥಾನಕುರಿತು ಪುರಾತತ್ವಇಲಾಖೆಯಿಂದ ಸರ್ವೆ ಮಾಡಲು ಬಂದವರು ಹಾಗೆ ಮರ್ಡರ್‌ಆಗುತ್ತಾರೆ.ಅವರುಏತಕ್ಕೆಕೊಲೆಯಾದರು.ಅದರಹಿಂದಿರುವಕಾರಣವೇನುಎಂಬುದನ್ನುಥ್ರಿಲ್ಲರ್ ಮೂಲಕ ತೋರಿಸಲಾಗಿದೆಎಂದು ನಾಯಕ ಮತ್ತು ನಿರ್ದೇಶಕ ವಿನಯ್‌ರತ್ನಸಿದ್ದಿ ಮಾಹಿತಿ ಹಂಚಿಕೊಂಡರು. ಸಂಗೀತಅಜಯ್ ಮತ್ತುರವಿದೇವ್, ರಾಜುಶಿವಶಂಕರ್-ಶ್ಯಾಮ್‌ಛಾಯಾಗ್ರಹಣ, ಸತೀಶ್‌ಚಂದ್ರಯ್ಯ ಸಂಕಲನ, ಸುರೇಶ್ ಸಾಹಸವಿದೆ. ಕೆ.ಆರ್.ಪೇಟೆ, ಹೇಮಗಿರಿ, ಮೈಸೂರು, ಕನಕಪುರ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,