Duniya Vijay.Press Meet

Thursday, January 06, 2022

ನಟನಾಗಿ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕುದುನಿಯಾ ವಿಜಯ್

‘ಸಲಗ’ ಯಶಸ್ಸಿನ ನಂತರ ನಟನೆಜತೆಗೆ ನಿರ್ದೇಶಕನಾಗಿ ಗುರುತಿಸಿಕೊಂಡ ದುನಿಯಾ ವಿಜಯ್ ಸದ್ಯಟಾಲಿವುಡ್‌ದಲ್ಲಿ ಬಾಲಕೃಷ್ಣ ಅವರಿಗೆಖಡಕ್ ವಿಲನ್ ಆಗುತ್ತಿದ್ದಾರೆ.ಮುಂದಿನ ದಿನಗಳಲ್ಲಿ ನಟನಾಗಿಅಥವಾಡೈರಕ್ಟರ್ ಆಗಿ ಹೆಚ್ಚು ಕಾಣಿಸಿಕೊಳ್ಳುತ್ತಾರಾ?ಎಂಬುದಕ್ಕೆಉತ್ತರಅವರಿಂದಲೇ ಬಂದಿದೆ.

‘ಸಲಗ’ ಗೆಲುವು ಅನ್ನುವುದಕ್ಕಿಂತ ನಾನು ಏನೆಂದುತೋರಿಸಲು ಅವಕಾಶ ಸಿಕ್ಕಿತು. ಇದರಲ್ಲಿಎರಡು ನಾನೇ ಆಗಿದ್ದರಿಂದ ಸ್ವಲ್ಪಕಷ್ಟವಾಯಿತು. ನಿರ್ದೇಶನ ಮಾಡಬೇಕುಅಂದುಕೊಂಡಾಗಅದು ಹೀಗೇ ಬರಬೇಕುಎಂದುಯೋಜನೆ ಹಾಕಿಕೊಂಡಿದ್ದೆ. ಬಿಡುಗಡೆತನಕ ನನ್ನ ಕೆಲಸ ಮಾತಾಡ್ಬೇಕುಅಂತ ಹೆಚ್ಚು ಮಾತನಾಡಿರಲಿಲ್ಲ. ಕೆಲಸವೇ ಉತ್ತರಕೊಟ್ಟಿದೆ. ಮುಂದೆಯೂ ಮಾತಿಗಿಂತ ನನ್ನವರ್ಕ್ ಮಾತನಾಡುತ್ತದೆ.

ಸಕ್ಸಸ್‌ನ್ನು ತಲೆಗೇರಿಸಿಕೊಳ್ಳದೆ ಅದನ್ನತಲೆಬಾಗಿ ಸ್ವೀಕರಿಸಿ ಮುನ್ನಡೆಯಬೇಕೆಂದು ನಿರ್ಧಾರ ಮಾಡಿರುವೆ. ಮಾಡಬೇಕಾಗಿರುವ ಕೆಲಸಗಳು ಸಾಕಷ್ಟು ಇರುವುದರಿಂದ ಮುಂದಿನ ಕೆಲಸ ಶುರು ಮಾಡಿದ್ದೇನೆ.

ಹೀರೋ ಆಗಿ ೧೫ ವರ್ಷಗಳಲ್ಲಿ ೩೦ ಸಿನಿಮಾ ಮಾಡಿದೆ. ಸಂಖ್ಯೆಕಡಿಮೆಯಾಗಿದೆಎಂದು ಒಪ್ಪಿಕೊಳ್ಳುತ್ತೇನೆ. ಇಲ್ಲಿ ನಾನೇ ಇಂಜಿನ್, ನಾನೇ ಗಾಡಿ. ಇಂಜಿನ್‌ಕೆಟ್ಟಾಗರಿಪೇರಿ ಮಾಡಿಕೊಂಡು ಮುಂದಕ್ಕೆ ಹೋಗಬೇಕು. ಇದರಿಂದ ಹೆಚ್ಚು ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ.

ನಟನಾದವನುಯಾವುದೇ ಪಾತ್ರಕ್ಕೆಅಂತ ಸೀಮಿತವಾಗಬಾರದು. ಅದಕ್ಕಾಗಿ ಹೊಸತರದಚಾಲೆಂಜಿಂಗ್ ಅನಿಸುವಂತ ಪಾತ್ರಗಳಿಗಾಗಿ ಹುಡುಕುತ್ತಿರುತ್ತೆನೆ.ಅದೇಕಾರಣದಿಂದ ಮೊದಲುತೆಲುಗುಚಿತ್ರಕ್ಕೆ ಸಹಿ ಹಾಕಿದ್ದು. ಇಲ್ಲಿ ಹೊಸತನದ ವಿಲನ್ ಆಗಿರುತ್ತೇನೆ. ನಟನಾಗಿ ಪ್ರೂವ್ ಮಾಡಿಕೊಳ್ಳಲು ಜಾಸ್ತಿ ಜಾಗ ಸಿಕ್ಕಿದೆ. ಅಂತಹ ಪಾತ್ರಗಳು ತೆರೆದುಕೊಂಡಾಗಲೇಎಲ್ಲಾ ಕಡೆಗಳಿಂದ ಆಫರ್‌ಗಳು ಬರುವುದು.

ಸಿನಿಮಾ ಬಿಟ್ಟರೆ ಬೇರೇನೂ ತಿಳಿಯದು. ಅದರಿಂದಲೇ ನನಗೆ ಹೆಸರು ಬಂದಿತು. ಸಾಮಾನ್ಯ ಮನುಷ್ಯನಾಗಿದ್ದರೆಇಷ್ಟೋಂದು ಸಾಧ್ಯವಾಗುತ್ತಿರಲಿಲ್ಲ. ಕೆಲವೊಮ್ಮೆ ನನ್ನ ಭಾವನೆಗಳೇ ಕಷ್ಟ ತಂದುಕೊಟ್ಟಿತು. ಅದರಿಂದ ಸಮಸ್ಯೆಗಳು ಬಂದದ್ದುಉಂಟು. ಅವೆಲ್ಲಾವೆನ್ನು ಎದುರಿಸಿರುವೆ.

ತಡವಾಗಿಯಾದರೂ ಒಂದೊಳ್ಳೆಯ ಚಿತ್ರದ ಮೂಲಕ ತೆಲುಗಿಗೆ ಹೋಗುತ್ತಿದ್ದೇನೆ ಎಂಬ ತೃಪ್ತಿಇದೆ. ಲಾಂಗು ಮಚ್ಚು ನಂತರಅಭಿನಯಕ್ಕೆ ಹೆಚ್ಚು ಪ್ರಾಮುಖ್ಯತೆಇರುವ ಪಾತ್ರಗಳಲ್ಲಿ ನಟಿಸಬೇಕೆಂಬ ಬಯಕೆಇದೆ.

ಆಫರ್‌ಗಳು ಬರುತ್ತಿದೆ. ಒಂದಷ್ಟುಕಥೆ ಕೇಳಿದ್ದರೂ ಇಷ್ಟವಾಗಿಲ್ಲದ್ದರಿಂದಒಪ್ಪಿಕೊಂಡಿಲ್ಲ. ಕೆಲವು ನಿರ್ಮಾಪಕರುಎರಡನ್ನು ಮಾಡಿಎಂದುಜವಬ್ದಾರಿ ನೀಡುತ್ತಿದ್ದಾರೆ. ಐದು ತಿಂಗಳು ತೆಲುಗುಚಿತ್ರಕ್ಕೆ ಸಮಯಕೊಟ್ಟಿದ್ದರಿಂದ ಬೇರೆಯೋಚನೆ ಮಾಡಿಲ್ಲ.

ನಮ್ಮಲ್ಲಿ ಬರಹಗಾರರಕೊರತೆಇದೆ. ಅವರನ್ನು ಬೆಳೆಸುವ ಕೆಲಸ ಮೊದಲು ಆಗಬೇಕು. ಹಿಂದೆ ಬಹಳಷ್ಟು ಬರಹಗಾರರುಇದ್ದರು. ಈಗ ಕಡಿಮೆಯಾಗಿದೆ. ಅವರಿಗೆ ಸೂಕ್ತ ಗೌರವ ಮತ್ತು ಸಂಭಾವನೆಕೊಡದೆಇರುವುದುಕಾರಣವಾಗಿದೆ. ಇಲ್ಲಿಯೂ ಸಾಕಷ್ಟು ಪ್ರತಿಭಾವಂತರುಇದ್ದಾರೆ. ಅವರಿಗೆ ಮನ್ನಣೆ ಸಿಗುತ್ತಿಲ್ಲ.

ಇಲ್ಲಿಯವರೆಗೂ ಕನಿಷ್ಟ ಅಂದರೂಐದಾರು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಬೇಕಾಗಿತ್ತು. ಆದರೆಗಾಂಧಿನಗರಕ್ಕೆ ಬರುವಷ್ಟರಲ್ಲಿ ಬೇರೆಯವರ ಪಾಲಾಗುತ್ತಿತ್ತು. ಈ ಬಾರಿ ಹಾಗಾಗಲಿಲ್ಲ. ನೇರವಾಗಿತೆಲುಗು ನಿರ್ದೇಶಕರು ನನ್ನನ್ನು ಭೇಟಿಯಾಗಿಕಥೆ, ಪಾತ್ರದ ವಿವರ ನೀಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,