Asia Star Gala Designer-Forever Naveen Kumar.

Monday, January 10, 2022

 

*ಏಷ್ಯಾ ಸ್ಟಾರ್ ಗಾಲಾದಲ್ಲಿ ಸ್ಟಾರ್ ಡಿಸೈನರ್ ಫಾರೆವರ್ ನವೀನ್ ಕುಮಾರ್*

 

ಫ್ಯಾಶನ್ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿರುವ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ಕನ್ನಡದ ಪ್ರತಿಭೆ ಫಾರೆವರ್ ನವೀನ್ ಕುಮಾರ್.

 

 ತಮ್ಮ ವಿಭಿನ್ನ, ವಿಶಿಷ್ಟ ವಿನ್ಯಾಸಗಳಿಂದ ಮನೆಮಾತಾಗಿರುವ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನವನ್ನು ಪಡೆದದುಕೊಂಡಿರುವ, ಫಾರೆವರ್ ನವೀನ್ ಕುಮಾರ್, ಸದಾ ಹೊಸತನದ ಮೂಲಕ ಫ್ಯಾಶನ್ ಇವೆಂಟ್  ಎದುರುಗೊಳ್ಳುತ್ತಿದ್ದಾರೆ.ಇಂತಹ ಫಾರೆವರ್ ನವೀನ್ ಕುಮಾರ್ ಅವರ ಖ್ಯಾತಿಗೆ ಈಗ ಇನ್ನೊಂದು ಗರಿ ಸೇರಿದೆ.

 

 ಮೆಟ್ ಗಾಲಾ ನಡೆಸಿದ ಏಷ್ಯಾ ಸ್ಟಾರ್ ಗಾಲಾ ಫ್ಯಾಶನ್ ಇವೆಂಟ್ ಇತ್ತೀಚೆಗೆ  ಕೊಲಂಬೋದಲ್ಲಿ ನಡೆದಿದೆ. ಮೆಟ್ ಗಾಲಾ ಜಾಗತಿಕ ಮಟ್ಟದ ಅತ್ಯುನ್ನತ ಶ್ರೇಣಿಯ ಫ್ಯಾಶನ್ ಇವೆಂಟ್ ಇದು. ಇವರು ಮೊಟ್ಟ ಮೊದಲ ಬಾರಿಗೆ ಏಷ್ಯಾ ಮಟ್ಟದಲ್ಲಿ ಹಮ್ಮಿಕೊಂಡ ಏಷ್ಯಾ ಸ್ಟಾರ್ ಗಾಲಾ ಇವೆಂಟ್ ನಲ್ಲಿ ಭಾಗಿಯಾಗಿದ್ದಾರೆ.

 

 ಹಲವು ವಿಶೇಷತೆಯನ್ನು ಒಳಗೊಂಡ ಈ ಇವೆಂಟ್ ಶ್ರೀಲಂಕಾದ ಕೊಲಂಬೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ನಲ್ಲಿ ನಡೆದಿದ್ದು ಇದೇ ಮೊದಲ ಬಾರಿಗೆ.  ಬೇರೆ ಬೇರೆ ದೇಶದ ಪ್ರಖ್ಯಾತ ಫ್ಯಾಶನ್ ಡಿಸೈನರ್ ಗಳು ಹಾಗೂ ಕಲಾವಿದರು ಪಾಲ್ಗೊಂಡ ಈ ರೆಡ್ ಕಾರ್ಪೆಟ್ ಕಾರ್ಯಕ್ರಮಕ್ಕೆ ಭಾರತದಿಂದ ಪ್ರನಿಧಿಸಿದ ಏಕೈಕ ಫ್ಯಾಶನ್ ಡಿಸೈನರ್ ಎಂದರೆ ಅದು ಫಾರೆವರ್ ನವೀನ್ ಕುಮಾರ್.

ಇವರ ಜೊತೆಗೆ ಇವರ ವಿನ್ಯಾಸಗಳ ಬ್ರ್ಯಾಂಡ್ ಅಂಬಾಸಿಡರ್ ನಟಿ ಸಂಹಿತಾ ವಿನ್ಯಾ ಕೂಡ ಪಾಲ್ಗೊಂಡಿದ್ದಾರೆ. ಭಾರತದಿಂದ ಮೆಟ್ ಗಾಲಾ ಫ್ಯಾಶನ್ ಶೋನಲ್ಲಿ ಹೆಜ್ಜೆ ಹಾಕಿದ ನಟಿಮಣಿಯರೆಂದರೆ ಐಶ್ವರ್ಯ ರೈ, ಪ್ರಿಯಾಂಕ ಚೋಪ್ರ, ದೀಪಿಕಾ ಪಡುಕೋಣೆ.  ಇವರ ಸಾಲಿಗೆ ಈಗ ಸೇರಿದ್ದಾರೆ ಕನ್ನಡದ ನಟಿ ಸಂಹಿತ ವಿನ್ಯಾ.

 

 ಏಷ್ಯಾ ಸ್ಟಾರ್ ಗಾಲಾ ಇವೆಂಟ್ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಫಾರೆವರ್ ನವೀನ್ ಕುಮಾರ್ 5.7 ಅಡಿ ಎತ್ತರದ ಫೆದರ್ ವಿಂಗ್ಸ್ ಡಿಸೈನ್ ಶೋಕೇಸ್ ಮಾಡಿದ್ದಾರೆ. ಈ ಡಿಸೈನ್ ಅಲ್ಲಿ ಸೇರಿದ ಜನರ ಕಣ್ಣು ಹಾಗೂ ಮನಸೂರೆಗೊಂಡಿದೆ. ಇದರಿಂದ ಈ ಇವೆಂಟ್ ಡಿಸೈನರ್ ಫಾರೆವರ್ ನವೀನ್ ಕುಮಾರ್ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ

 

2016ರಿಂದ ಫ್ಯಾಶನ್ ಲೋಕದಲ್ಲಿ ಡಿಸೈನರ್ ಆಗಿ ಗುರುತಿಸಿಕೊಂಡಿರುವ ನವೀನ್ ಕುಮಾರ್, ಫಾರೆವರ್ ನವೀನ್ ಕುಮಾರ್ ಎಂಬ ಹೆಸರಿನ ಮೂಲಕವೇ ಚಿರಪರಿಚಿತರಾಗಿದ್ದಾರೆ.

 

  ಕಡಿಮೆ ಸಮಯದಲ್ಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಫಾರೆವರ್ ನವೀನ್ ಕುಮಾರ್ ಸ್ಟಾರ್ ಡಿಸೈನರ್ ಆಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಭಾರತದ ಹಲವು ಸ್ಟಾರ್ ನಟ ನಟಿಯರ ನೆಚ್ಚಿನ ಡಿಸೈನರ್ ಇವರಾಗಿದ್ದು, ಅನೇಕ ಟಿವಿ ಶೋಗಳಿಗೆ, ಅಂತರಾಷ್ಟ್ರೀಯ ಕಾರ್ಯಕ್ರಮಗಳಿಗೆ ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ.

 

ತಮ್ಮ ಪರಿಶ್ರಮ, ಶ್ರದ್ಧೆ ಹಾಗೂ ವಿಶಿಷ್ಟತೆ ಮೂಲಕ ಭಾರತದ ಕೀರ್ತಿಯನ್ನು ಫ್ಯಾಶನ್ ಲೋಕದಲ್ಲಿ ಇನ್ನಷ್ಟು ಹೆಚ್ಚಿಸುತ್ತಿರುವ ಫಾರೆವರ್ ನವೀನ್ ಕುಮಾರ್ ಬೆಂಗಳೂರಿನವರು, ಕನ್ನಡಿಗ ಎನ್ನುವುದೇ ಹೆಮ್ಮೆಯ ವಿಚಾರ.

 

ಕೊಲೊಂಬೊದಲ್ಲಿ ನಡೆದ ಈ ವರ್ಣರಂಜಿತ ಸಮಾರಂಭದಲ್ಲಿ ಶಿರಂತಿ ರಾಜಾಪಕ್ಸೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Copyright@2018 Chitralahari | All Rights Reserved. Photo Journalist K.S. Mokshendra,