Tarun Talkies Production 5.Film Pooja.

Friday, December 10, 2021

 

*ತರುಣ್ ಟಾಕೀಸ್ ನ‌ 5ನೇ ಚಿತ್ರಕ್ಕೆ ಶರಣ್ ನಾಯಕ.*

 

 *ಗಣಪತಿ ಸನ್ನಿಧಿಯಲ್ಲಿ ನವನೀತ್ ನಿರ್ದೇಶನದ ನೂತನ‌ ಚಿತ್ರಕ್ಕೆ ಚಾಲನೆ.*

 

"ರೋಜ್", "ಮಾಸ್ ಲೀಡರ್", " ವಿಕ್ಟರಿ 2" ಹಾಗೂ "ಖಾಕಿ" ಚಿತ್ರಗಳ ನಿರ್ಮಾಣ‌ ಮಾಡಿದ್ದ ತರುಣ್ ಟಾಕೀಸ್ ಸಂಸ್ಥೆಯಿಂದ "ಪ್ರೊಡಕ್ಷನ್ ನಂ 5" ನೂತನ ಚಿತ್ರ ನಿರ್ಮಾಣವಾಗುತ್ತಿದೆ

 

ಶರಣ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು "ಕರ್ವ" ಖ್ಯಾತಿಯ ನವನೀತ್ ನಿರ್ದೇಶಿಸುತ್ತಿದ್ದಾರೆ.

 

ಈ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಮಾನಸ ತರುಣ್ ಆರಂಭ ಫಲಕ ತೋರಿದರು. ಖ್ಯಾತ ನಿರ್ದೇಶಕ ತರುಣ್ ಸುಧೀರ್ ಕ್ಯಾಮೆರಾ ಚಾಲನೆ ಮಾಡಿದರು.

ಹಾರಾರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ, ಕಥೆ, ಚಿತ್ರಕಥೆ ಬರೆದಿದ್ದಾರೆ. ಅಂತರರಾಷ್ಟ್ರೀಯ ಜಾಹಿರಾತುಗಳಿಗೆ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಿರುವ ಅನೂಪ್ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.

 

ಶರಣ್ ನಾಯಕರಾಗಿ ನಟಿಸುತ್ತಿದ್ದು, ನಾಯಕಿ ಸೇರಿದಂತೆ ಉಳಿದ ತಾರಾಬಳಗದ ವಿವರ ಸದ್ಯದಲ್ಲೇ ತಿಳಿಸಲಾಗುವುದು.

 

ಬೆಂಗಳೂರು ಹಾಗೂ ಉತ್ತರಖಂಡ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಮಾಸಾಂತ್ಯಕ್ಕೆ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,