RRR.Film Teaser Launch

Friday, November 26, 2021

 

*ಆರ್ ಆರ್ ಆರ್ ಟ್ರೇಲರ್ ಆಗಮನಕ್ಕೆ ಮುಹೂರ್ತ ಫಿಕ್ಸ್.... ಆ ದಿನ‌ ಶುರುವಾಗ್ತಿದೆ ರಣ..ರೌಧ್ರ..ರುಧಿರನ ಆರ್ಭಟ...*

 

 

ಎಸ್.ಎಸ್.ರಾಜಮೌಳಿ ಆರ್ ಆರ್ ಆರ್ ಅಂಗಳದಿಂದ ಧಮಾಕೇದಾರ್ ಸುದ್ದಿಯೊಂದು ಹೊರ ಬಂದಿದೆ. ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲದ ಕೋಟೆ ಕಟ್ಟಿದ್ದ ಆರ್ ಆರ್ ಆರ್ ಟ್ರೇಲರ್ ಗೆ ಅಭಿಮಾನಿಗಳು ಎದುರು ನೋಡುತ್ತಿದ್ದರು. ಫೈನಲಿ ತ್ರಿಬಲ್ ಆರ್ ಸಿನಿಮಾದ ಟ್ರೇಲರ್ ಎಂಟ್ರಿಗೆ ದಿನಾಂಕ‌ ನಿಗದಿಯಾಗಿದೆ. ಡಿಸೆಂಬರ್ 3 ರಂದು ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ಟ್ರೇಲರ್ ರಿಲೀಸ್ ಆಗ್ತಿದೆ.

 

 

ಪಂಚ ಭಾಷೆಯಲ್ಲಿ ತಯಾರಾಗ್ತಿರುವ ಆರ್ ಆರ್ ಆರ್ ಸಿನಿಮಾ ಮೇಲೆ ಭಾರತೀಯ ಚಿತ್ರರಂಗದ ಚಿತ್ತ ನೆಟ್ಟಿದೆ. ಜಕ್ಕಣ್ಣಗಾರು ಸಿನಿಮಾ ಅಂದ್ಮೇಲೆ ಆ ನಿರೀಕ್ಷೆ ದುಪ್ಪಟ್ಟಾಗಿರುತ್ತದೆ. ಇದೀಗ ಅಂತಹದ್ದೇ ನಿರೀಕ್ಷೆ ಆರ್ ಆರ್ ಆರ್ ಮೇಲಿದೆ.

 

 

ಜೂನಿಯರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಆರ್ ಆರ್ ಆರ್ ಸಿನಿಮಾದಲ್ಲಿದೆ. ಎಂ ಎಂ ಕೀರವಾಣಿ ಮ್ಯೂಸಿಕ್ ಗುಂಗು...ಸೆಂಥಿಲ್ ಕ್ಯಾಮೆರಾ ಕೈಚಳಕವಿರುವ ಆರ್ ಆರ್ ಆರ್ ಸಿನಿಮಾ ಜನವರಿ 7 ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.

 

ರಾಜಮೌಳಿಯ ಕನಸಿನಂತೆ ಅದ್ಧೂರಿಯಾಗಿ, ಆಡಂಬರದಿಂದ, ವೈಭವೋಪೇತವಾಗಿ ಮೂಡಿಬಂದಿರುವ ಟೀಸರ್, ಮೇಕಿಂಗ್ ಹಾಗೂ ಸಾಂಗ್ಸ್ ಹೀಗೆ ಇರುವಾಗ ಟ್ರೇಲರ್ ಯಾವ ಮಟ್ಟಿಗೆ ಇರಲಿದೆ ಅನ್ನುವುದಕ್ಕೆ ಡಿಸೆಂಬರ್ 3 ರಂದು ಉತ್ತರ ಸಿಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ‌ ಮಾಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಆರ್ ಆರ್ ಆರ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ.

 

ಕನ್ನಡದಲ್ಲಿಯೂ ರಿಲೀಸ್ ಆಗ್ತಿರುವ  ಆರ್ ಆರ್ ಆರ್ ಸಿನಿಮಾದ ವಿತರಣೆ ಹಕ್ಕುನ್ನು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಪಡೆದುಕೊಂಡಿದೆ. ರಾಜ್ಯಾದ್ಯಂತ ಆರ್ ಆರ್ ಆರ್ ಸಿನಿಮಾವನ್ನು ಕೆವಿಎನ್ ರಿಲೀಸ್ ಮಾಡಲಿದೆ. ಈಗಾಗ್ಲೇ ಸ್ಟಾರ್ ಸಿನಿಮಾಗಳಿಗೆ ಬಂಡವಾಳ ಹಾಕಿ ಸಕ್ಸಸ್ ಕಂಡಿರುವ ಕೆವಿಎನ್, ಆರ್ ಆರ್ ಆರ್ ಸಿನಿಮಾದ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದೆ

 

ಬಾಹುಬಲಿಯಂತಹ ಸಿನಿಮಾ ಹೇಳಿ ಸಕ್ಸಸ್ ಕಂಡಿರುವ ಜಕ್ಕಣ್ಣಗಾರು ತ್ರಿಬಲ್ ಆರ್ ಸಿನಿಮಾ ಏನೆಲ್ಲಾ ಮ್ಯಾಜಿಕ್ ಮಾಡ್ತಾರೆ ಅನ್ನೋದು ಚಿತ್ರಪ್ರೇಮಿಗಳಿರುವ ಕ್ಯೂರಿಯಾಸಿಟಿ.

Copyright@2018 Chitralahari | All Rights Reserved. Photo Journalist K.S. Mokshendra,