Oreo.Film Pooja News

Monday, November 29, 2021

ಬಿಸ್ಕೆಟ್ ಹೆಸರುಚಿತ್ರದ ಶೀರ್ಷಿಕೆ

‘ಓರಿಯೋ’ ಎಂಬ ಹೆಸರಿನ ಬಿಸ್ಕೆಟ್‌ಇದೆ.ಈಗ ಇದೇಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ. ಹಾಗಂತ ಸಿನಿಮಾಗೂ ಬಿಸ್ಕೆಟ್‌ಗೂಯಾವುದೇ ಸಂಬಂದವಿಲ್ಲ. ಕತೆಗೆ ಪೂರಕವಾಗಿದ್ದರಿಂದಶೀರ್ಷಿಕೆಯನ್ನು ಇಡಲಾಗಿದೆ. ದಿ ಬ್ಲ್ಯಾಕ್‌ಅಂಡ್ ವೈಟ್‌ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.‘ಪ್ರೀತಿಯ ಲೋಕ’ ಮತ್ತು ‘ಲವ್ ಈಸ್ ಪಾಯಸನ್’ ನಿರ್ದೇಶನ ಮಾಡಿರುವ ನಂದನಪ್ರಭುಗ್ಯಾಪ್ ನಂತರಆಕ್ಷನ್‌ಕಟ್ ಹೇಳುತ್ತಿದ್ದಾರೆ.ಮಹೂರ್ತ ಸಮಾರಂಭವು ಪುನೀತ್ ಸಮಾಧಿ ಪಕ್ಕ ನಡೆಯಿತು.ಶಿವಾಂಜನೇಯ ಪ್ರೊಡಕ್ಷನ್ ಬ್ಯಾನರ್‌ದಲ್ಲಿ ವಿಜಯಶ್ರೀ.ಆರ್, ವೈಶಾಲಿ.ಎಂ ಹಾಗೂ ವೈ.ಜೆ.ಕೃಷ್ಣಪ್ಪಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.ರೇಣುಕಾಪ್ರಭಾಕರ್ ಸಹ ನಿರ್ಮಾಪಕರು. 

ಶೀರ್ಷಿಕೆಗೆ ಬೇರೆ ಬೇರೆ ದೇಶಗಳಲ್ಲಿ ಒಂದೊಂದುಅರ್ಥವಿದೆ.ಐದು ಪ್ರಮುಖ ಪಾತ್ರಗಳ ಸುತ್ತಕತೆಯು ಸಾಗುತ್ತದೆ.ಒಮ್ಮೆಇವರೆಲ್ಲ ಅನಿವಾರ್ಯವಾಗಿಕಾಡಿಗೆ ಹೋಗುವಂಥ ಸಂದರ್ಭಒದಗಿ ಬರುತ್ತದೆ.ಅವರುಅಲ್ಲಿಗೆ ಹೋದಾಗಏನೆಲ್ಲಾ ಘಟನೆಗಳು ನಡೆಯುತ್ತದೆಎಂಬುದು ಸಿನಿಮಾದ ಸಾರಾಂಶವಾಗಿದೆ.

ಒಂದುಘಟನೆಯ ಹಿಂದೆ ಹೋಗುವಾಗ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಅಂತ ಹೇಳಲಾಗಿದೆ.ಪ್ರಮುಖ ಪಾತ್ರದಲ್ಲಿ ನಿತಿನ್‌ಗೌಡಅವರಿಗೆ ಹೊಸ ಅನುಭವ. ಉಳಿದಂತೆ ರಥಾವರ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಪುತ್ರಗೋವಿಂದ್, ಶುಭಿ, ಲತಾ ನಟಿಸುತ್ತಿದ್ದಾರೆ.ಬೆಂಗಳೂರು, ಸಕಲೇಪುರ, ಮಡಕೇರಿ ಸುತ್ತಮುತ್ತ ೪೦ ದಿನಗಳ ಕಾಲ ಒಂದೇ ಹಂತದಲ್ಲಿಚಿತ್ರೀಕರಣ ನಡೆಸಲುಯೋಜನೆರೂಪಿಸಲಾಗಿದೆ.ಎರಡು ಹಾಡುಗಳಿಗೆ  ಸಾಯಿಕಿರಣ್ ಸಂಗೀತ ಸಂಯೋಜಿಸುತ್ತಿದ್ದಾರೆ. ಬ್ಯಾಟಪ್ಪಗೌಡಛಾಯಾಗ್ರಹಣ, ಬಿ.ರಾಜರತ್ನ ಸಂಭಾಷಣೆ, ಶ್ರೀನಿವಾಸ್.ಪಿ.ಬಾಬು ಸಂಕಲನ, ಥ್ರಿಲ್ಲರ್‌ಮಂಜು ಸಾಹಸ, ಹರಿಕೃಷ್ಣ ನೃತ್ಯವಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,