Mafia.Film Pooja.News

Thursday, December 02, 2021

ಮಾಫಿಯಾದಲ್ಲಿ  ಪ್ರಜ್ವಲ್ದೇವರಾಜ್

‘ಮಾಫಿಯ’ ಚಿತ್ರವೊಂದು ಮೊನ್ನೆ ಮಹೂರ್ತ ಆಚರಿಸಿಕೊಂಡಿತು.ಸದರಿ ಸಮಾರಂಭಕ್ಕೆ ಪ್ರಿಯಾಂಕಉಪೇಂದ್ರ ಮತ್ತುದುನಿಯಾವಿಜಯ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ಮಾಫಿಯಾಗಳಲ್ಲಿ ನೂರಾರುತರಹದ ಮಾಫಿಯಾವಿದೆ.ಚಿತ್ರದಲ್ಲಿಯಾವ ಬಗೆಯ ಶೀರ್ಷಿಕೆ ತೋರಿಸುವುದಾಗಿ ನಿರ್ದೇಶಕ ಲೋಹಿತ್ ಹೇಳಲಿಲ್ಲ. ‘ಮಮ್ಮಿ’ ಮತ್ತು ‘ದೇವಿಕಿ’ ಚಿತ್ರಗಳನ್ನು ನಿರ್ದೇಶಿದ್ದು,ಇವರಿಗೆ ಮೂರನೆ ಅವಕಾಶ. ಇನ್ಸ್‌ಪೆಕ್ಟರ್ ಆಗಿ ಪ್ರಜ್ವಲ್‌ದೇವರಾಜ್ ನಾಯಕ. ಅದೇಗೆಟಪ್‌ದಲ್ಲಿ ನಟಿಸುತ್ತಿರುವಅದಿತಿಪ್ರಭುದೇವ ನಾಯಕಿ.ನಾನು ಈ ಹಿಂದೆ ನಿರ್ದೇಶಕರ ಚಿತ್ರಗಳನ್ನು ನೋಡಿದ್ದೇನೆ. 

ಸಾಕಷ್ಟು ಅಧ್ಯಯನ ಮಾಡಿಯೇಅವರು ಸ್ಕ್ರಿಪ್ಟ್ ಮಾಡುತ್ತಾರೆ.ಮಾಫಿಯಾಅಂದಾಗ ಹೊಡೆದಾಟ ಬಡಿದಾಟದ ಸಿನಿಮಾನಾ ಎಂಬ ಭಾವನೆ ಬರಬಹುದು.ಖಂಡಿತಇದಾಗಿರದೆ, ಹೊಸ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆಎಂದು ಪ್ರಜ್ವಲ್ ಹೇಳಿದರು.

ಕುಮಾರ್.ಬಿ ನಿರ್ಮಾಣದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸಂಗೀತ ಅನೂಪ್‌ಸೀಳನ್, ಛಾಯಾಗ್ರಹಣತರುಣ್, ಟಗರುಖ್ಯಾತಿಯ ಮಾಸ್ತಿ ಸಂಭಾಷಣೆ, ಸಾಹಸ ಡಿಫರೆಂಟ್‌ಡ್ಯಾನಿ ಅವರದಾಗಿದೆ.ಮೊದಲ ಹಂತದಚಿತ್ರೀಕರಣ ಬೆಂಗಳೂರುದಲ್ಲಿ ನಡೆಯಲಿದ್ದು, ನಂತರರಾಮೋಜಿರಾವ್ ಫಿಲಿಂ ಸಿಟಿಗೆ ಹೋಗುವ ಇರಾದೆಇದೆ.‘ಒರಟ’ದಲ್ಲಿ ನಾಯಕನಾಗಿದ್ದ ಪ್ರಶಾಂತ್ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,