RR Six R.Film Pooja.News

Thursday, December 02, 2021

ಹೊಸಬರ  ಆರ್ಆರ್ಸಿಕ್ಸ್ಆರ್

       ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಆರ್‌ಆರ್‌ಸಿಕ್ಸ್‌ಆರ್’ (ಖಖSixಖ) ಚಿತ್ರದ ಮಹೂರ್ತ ಸಮಾರಂಭವು ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು. ‘ಕೂಡ ಬೇಡ ಕಳಿಬೇಡ..ಕೂಡಿದರೆ ಟೈಂ ವೇಸ್ಟ್..ಕಳೆದರೆ ಲೈಫ್ ವೇಸ್ಟ್ಸುಮ್ನೆ ನೋಡು?’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷರಾದ ಉಮೇಶ್‌ಬಣಕಾರ್ ಕ್ಯಾಮಾರ ಆನ್ ಮಾಡಿದರೆ, ಶೈಲೇಂದ್ರಬಾಬು ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಶಿಷ್ಯನ ಚಿತ್ರಕ್ಕೆ ಎ.ಎನ್.ಜಯರಾಮಯ್ಯ ಮೊದಲ ದೃಶ್ಯವನ್ನು ಚಿತ್ರೀಕರಿಸಿದರು. ಶಿವಕುಮಾರ್.ಆರ್.ಬಿ, ಸತೀಶ್ ಮತ್ತು ಗೌಡ.ಕೆ.ಎಂ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹದಿನೈದು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ ಅನುಭವವಿರುವ ಚಿತ್ರದುರ್ಗದ ಡಿ.ಎಸ್.ರವಿಯಾದವ್ ಚಿತ್ರಕ್ಕೆ ಕಥೆ,ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಾಲ್ಕು ಆರು ಸಂಖ್ಯೆಗಳನ್ನು ಕೂಡಿದರೆ ೨೪ ಬರುತ್ತದೆ. ದಿನದ ೨೪ ಗಂಟೆಯನ್ನು ಕೂಡಿದ್ರೆ ಸಮಯ ವ್ಯರ್ಥವಾಗುತ್ತದೆ. ಅದನ್ನೆ ಕಳೆದರೆ ಜೀವನ ಹಾಳಾಗುತ್ತದೆ. ಅಂದರೆ ಬದುಕು ಶೂನ್ಯವಾಗುತ್ತದೆ ಎಂಬುದನ್ನು ಹೇಳ ಹೊರಟಿದ್ದಾರೆ. ಮುತ್ಸದ್ದಿ ಪತ್ರಕರ್ತ ತನ್ನ ಕಲ್ಪನೆಯಲ್ಲಿ ಹೇಳುವುದರೊಂದಿಗೆ ಸಿನಿಮಾವು ತೆರೆದುಕೊಳ್ಳುತ್ತದೆ. ಅದು ರಾಜಕೀಯ, ಸಿನಿಮಾ, ಪ್ರೀತಿ ಹಾಗೂ ಪ್ರಸಕ್ತ ವಿಷಯ ಯಾವುದೆಂಬುದನ್ನು ನಿರ್ದೇಶಕರು ಗುಟ್ಟನ್ನು ಕಾಪಾಡಿಕೊಂಡಿದ್ದಾರೆ.

       ಹತ್ತು ವರ್ಷ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಕುಷ್ಟಗಿಯ ಶಿವಂಗಿ ನಾಯಕ ಅಲ್ಲದೆ ಒಂದು ಹಾಡನ್ನು ಬರೆದು ಗೀತೆಗೆ ಧ್ವನಿಯಾಗುತ್ತಿದ್ದು, ನಿರ್ಮಾಣದಲ್ಲಿ ಪಾಲುದಾರರು. ಮುಗ್ದನಾಗಿ ಸಾಧನೆ ಮಾಡಲು ಹೋದಾಗ ಎದುರಿಸುವ ಸವಾಲುಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪ್ರದಾಯಸ್ಥ ಮನೆ ಹುಡುಗಿಯಾಗಿ ಬೆಂಗಳೂರಿನ ಯಶಿಕಾರಾಜ್ ನಾಯಕಿಯಾಗಿ ಎರಡನೇ ಅವಕಾಶ. ಇನ್ನುಳಿದಂತೆ ರಮೇಶ್‌ಭಟ್, ಬ್ಯಾಂಕ್‌ಜನಾರ್ಧನ್, ಸಂತೋಷ್, ವೀರಣ್ಣಕಾರುಬಾರಿ ಮುಂತಾದವರ ಅಭಿನಯವಿದೆ. 

       ಆರು ಹಾಡುಗಳಿಗೆ ಮುಂಬೈ ಪ್ರತಿಭೆಯೊಬ್ಬರು ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಶಿವಚೆನ್ನಪಟ್ಟಣ ಅವರದು. ಬೆಂಗಳೂರು ಹಾಗೂ ಸಕಲೇಶಪುರ ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ೪೦ ದಿನಗಳ ಕಾಲ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,