Shathabisha.Film Press Meet

Monday, December 06, 2021

271

 

ಶತಭಿಷ ಟೀಸರ್ ಬಿಡುಗಡೆ

 

" ಶತಭಿಷ" ಇದು  ನಕ್ಷತ್ರದ ಹೆಸರು. ಈಗ ಇದೇ ಹೆಸರಿನ ಚಿತ್ರವೊಂದು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ. ವೆಂಕಟೇಶ್ ಅವರ ನಿರ್ದೇಶನದಲ್ಲಿ‌ ಮೂಡಿ ಬಂದಿರುವ  ‌ಈ ಚಿತ್ರದ  ಚಿತ್ರೀಕರಣವು ಸದ್ದು ಗದ್ದಲವಿಲ್ಲದೆ ಮುಗಿದಿದ್ದು,  ದೀಪು ಅರ್ಜುನ್ ಮತ್ತು ಶೋಬಿತಾ ಶಿವಣ್ಣ  ಚಿತ್ರದ   ನಾಯಕ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.  ಅಂದುಕೊಂಡಂತೆ ಆದರೆ ಹೊಸ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಮೊನ್ನೆ ಈ ಚಿತ್ರದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

 ವಿರಾಜಪೇಟೆ, ಮೇಲುಕೋಟೆ, ಹುಬ್ಬಳ್ಳಿ, ಮುಂಬೈ,ಗುಲ್ಬರ್ಗಾ, ಬೆಂಗಳೂರು, ಚಿಂತಾಮಣಿ ಅಲ್ಲದೆ ತಮಿಳುನಾಡನ ಕೆಲವೆಡೆ ಸೇರಿ ಸಾಕಷ್ಟು ಲೊಕೇಶನ್ ಗಳಲ್ಲಿ ಈ ಚಿತ್ರಕ್ಕೆ  ಚಿತ್ರೀಕರಣ ಮಾಡಲಾಗಿದೆ. ಒಂದು ವಿಭಿನ್ನ ಶೈಲಿಯ. ಕಳ್ಳ ಪೋಲೀಸ್ ಆಟವನ್ನು  ನಿರ್ದೇಶಕ ಎಂ.ವೆಂಕಟೇಶ್ ಅವರು ಈ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ.   ಕನ್ನಡ, ತೆಲುಗು, ತಮಿಳು ಸೇರಿ ಹಲವು ಭಾಷೆಯಲ್ಲಿ  ಶತಭಿಷ  ಚಿತ್ರವು ‌ ತೆರೆಗೆ ಬರಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ  ನಿರ್ದೇಶಕ ವೆಂಕಟೇಶ್, ನಾಲ್ವರು ಪೋಲಿ ಹುಡುಗರ ಕಥೆಯಿದು.  ಭಯೋತ್ಪಾದಕರಿಗೆ  ಬೆಂಬಲ ನೀಡಲು ಹೋಗಿ ಪೊಲೀಸ್  ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ, ನಂತರ ಅವರು ಹೊರ ಬರ್ತಾರಾ ಇಲ್ವಾ ಎನ್ನುವುದು ಚಿತ್ರದ ತಿರುಳು. ಚಿತ್ರದಲ್ಲಿ 3 ಹಾಡು ಹಾಗೂ  4 ಪೈಟುಗಳಿದ್ದು,  ಅಭಿಷೇಕ್ ರಾಯ್ ಸಂಗೀತ,  ಆರ್ ಸೆಲ್ವರಾಜ್ ಕ್ಯಾಮರ ಚಿತ್ರಕ್ಕಿದೆ ಎಂದರು.

ನಿರ್ಮಾಪಕ ಕಾಶಿ ಶೇಖರ್  ಮಾತನಾಡಿ,  ಚಿತ್ರ ಚೆನ್ನಾಗಿ ಮೂಡಿಬಂದಿದೆ,  ಕುಟುಂಬ ಸಮೇತ ನೋಡುವಂಥ ಒಳ್ಳೆಯ ಕಥೆ ಸಿನಿಮಾದಲ್ಲಿದೆ ಎಂದು  ಹೇಳಿದರು. ಅವರು ಪೋಲೀಸ್ ಅಧಿಕಾರಿಯಾಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‌

ನಾಯಕ ದೀಪು ಅರ್ಜುನ್ ಮಾತನಾಡಿ.  ಕಿತಾಪತಿ ಮಾಡುವುದೇ ನನ್ನ ಕೆಲಸವಾಗಿರುತ್ತೆ,  ‌ಒಂದು ರೀತಿಯ ಕಳ್ಳ ಪೋಲೀಸ್ ಆಟ,  ನಂತರ  ನಾಯಕಿಯ ಪರಿಚಯವಾಗಿ, ಪರಿಚಯ ಪ್ರೀತಿಯಾಗುತ್ತದೆ ಎಂದರು.

ಚಿತ್ರೆದ ಉಳಿದ ಪಾತ್ರಗಳಲ್ಲಿ  ಟೆನ್ನಿಸ್ ಕೃಷ್ಣ, ಅಪ್ಪಣ್ಣ, ಮೂಗು ಸುರೇಶ್, ಕುರಿ ಸುನೀಲ್  ನಟಿಸಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,