Snehitaru.Film 25 Days Press Meet

Wednesday, December 15, 2021

 

*"ಸ್ನೇಹಿತ" ನಿಗೆ ಇಪ್ಪತ್ತೈದರ ಸಂಭ್ರಮ.*

 

ಈ ಹಿಂದೆ "ಪ್ಯಾರ್ ಕಾ ಗೋಲ್ ಗುಂಬಜ್" ಚಿತ್ರದಲ್ಲಿ ನಟಿಸಿ ಮನೆಮಾತಾಗಿದ್ದ ಧನುಷ್ ನಾಯಕನಾಗಿ ನಟಿಸಿರುವ "ಸ್ನೇಹಿತ" ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಇಪ್ಪತ್ತೈದು ದಿನಗಳನ್ನು ಪೂರೈಸಿದೆ.ಈ ಸಂತಸವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು.

 

ನಮ್ಮ ಚಿತ್ರ ಬಿಡುಗಡೆಗೂ ಮುನ್ನ ಏನಾಗುವುದು ಎಂಬ ಆತಂಕವಿತ್ತು. ಬಿಡುಗಡೆ ಆದ ಮೇಲೆ ಸಿಗುತ್ತಿರುವ ಪ್ರತಿಕ್ರಿಯೆ ನಿಜಕ್ಕೂ ಸಂತಸ ತಂದಿದೆ. ಬೆಂಗಳೂರು ಮಾತ್ರವಲ್ಲ. ಮೈಸೂರು ಹಾಗೂ ಉತ್ತರ ಕರ್ನಾಟಕದ ಸಾಕಷ್ಟು ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಾನೇ ಪ್ರತಿಯೊಂದು ಕಡೆ ಹೋಗಿ ಬಂದಿದ್ದೀನಿ. ನೋಡುಗರು  ತೋರುತ್ತಿರುವ ಪ್ರೀತಿಗೆ ಆಭಾರಿ. ಕುಟುಂಬ ಸಮೇತ ನೋಡಬಹುದಾದ ಚಿತ್ರ ಕೊಟ್ಟರೆ ಖಂಡಿತವಾಗಿ ಜನ ನೋಡುತ್ತಾರೆ ಎನ್ನುವುದಕ್ಕೆ ನಮ್ಮ ಸಿನಿಮಾ ಸಾಕ್ಷಿ. ಈಗಲ್ಲೂ ರಾಜ್ಯಾದ್ಯಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಇನ್ನೂ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಲಿದೆ ಎಂದ ನಾಯಕ ಧನುಷ್, ಇದಕ್ಕೆ ಕಾರಣಿಭೂತರಾದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ನಾಯಕಿ ಸುಲಕ್ಷಣ ಅವರು ಚಿತ್ರದ ಯಶಸ್ಸಿನ ಸಂತೋಷವನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.

 

ಸಿನಿಮಾ ಏನು ಎಂದು ಈಗಾಗಲ್ಲೇ ಎಲ್ಲರಿಗೂ ತಿಳಿದಿದೆ. ನಮ್ಮ ಚಿತ್ರ ಯಶಸ್ವಿಯಾಗಲು ಪ್ರಮುಖ ಕಾರಣ ನನ್ನ ಚಿತ್ರತಂಡ. ಅವರಿಗೆ ನನ್ನ ಅನಂತ ಧನ್ಯವಾದ ಎಂದರು ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಸಂಗೀತ್ ಸಾಗರ್ .

 

ನಾನು ಧಾರಾವಾಹಿಯೊಂದರ ಚಿತ್ರೀಕರಣದಲ್ಲಿದ್ದಾಗ ಬಾಬು ಅವರು ನನ್ನ ಭೇಟಿಯಾಗಿ, ಈ ಚಿತ್ರದ ಕುರಿತು ಹೇಳಿದರು. ಒಪ್ಪಿಕೊಂಡೆ. ಪಾತ್ರ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಿ ಓಡುತ್ತಿದೆ ಎಂದು ತಿಳಿದು ಖುಷಿಯಾಗಿದೆ ಎಂದರು ಹಿರಿಯ ನಟಿ ಆರ್ ಟಿ ರಮ.

 

ನಿರ್ಮಾಪಕರಾದ  ಅಶೋಕ್ ಆರ್, ಸಹ ನಿರ್ದೇಶಕ ಬಾಬು ಭಾಗವತರ್ ಹಾಗೂ  ವೈದ್ಯ ವೆಂಕಟ್ ಸುಬ್ಬರಾವ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Copyright@2018 Chitralahari | All Rights Reserved. Photo Journalist K.S. Mokshendra,