Sakhat.Film Success Meet

Thursday, December 16, 2021

 

‘ಸಖತ್’ ಖುಷಿಯಲ್ಲಿ ಗಣಿ-ಸುನಿ… 25ನೇ ದಿನದತ್ತ ‘ಸಖತ್’ ಜರ್ನಿ!

 

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ಸಖತ್ ಸಿನಿಮಾ ಗೆಲುವಿನ ನಾಗಲೋಟ ಮುಂದುವರೆಸಿದೆ. ಮೂರು ವಾರದ ಹಿಂದಷ್ಟೇ ರಿಲೀಸ್ ಆಗಿದ್ದ ಸಖತ್ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ತಿತ್ತು. ಇದೀಗ ಸಖತ್ ಸಿನಿಮಾ 25ನೇ ದಿನದತ್ತ ದಾಪುಗಾಲಿಟ್ಟಿದೆ. ಮತ್ತೊಮ್ಮೆ ಗಣಿ-ಸುನಿ ಕಾಂಬೋ ವರ್ಕ್ ಆಗಿದೆ. ಇದೇ ಖುಷಿಯಲ್ಲಿ ಸಖತ್ ಬಳಗ ಸಕ್ಸಸ್ ಮೀಟ್ ಆಯೋಜಿಸಿ, ಒಂದಷ್ಟು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

 

ಸಖತ್ ಸಿನಿಮಾ ಬಗ್ಗೆ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಫ್ಯಾಮಿಲಿ ಆಡಿಯನ್ಸ್ ಸಿನಿಮಾ ಎಂಜಾಯ್ ಮಾಡ್ತಿದ್ದಾರೆ. ಕೋವಿಡ್ ಭಯದಿಂದ ನಮಗೆ ತುಸು ಹೊಡೆತ ಬಿದ್ದಿದ್ದು ನಿಜವಾದರೂ ಸಿನಿಮಾದ ಬಗ್ಗೆ ಬಂದ ಒಳ್ಳೆಯ ಬಾಯಿ ಪ್ರಚಾರದಿಂದಾಗಿ ಸಿನಿಮಾ ಮೂರು ವಾರಗಳಾದರೂ ಚೆನ್ನಾಗಿ ಓಡುತ್ತಿದೆ ಎಂದರು.

 

ನಿರ್ದೇಶಕ ಸಿಂಪಲ್ ಸುನಿ, ಕೊರೋನಾ ಹಾಗೂ ಬೇರೆ ಸಿನಿಮಾಗಳ ನಡುವೆಯೂ ಸಖತ್ ಸಿನಿಮಾ ಗೆದ್ದಿದೆ. 2ನೇ ವಾರಕ್ಕೆ ನಾವು ಹಾಕಿದ ಬಂಡವಾಳ ವಾಪಸ್ ಬಂದಿದ್ದು, 3 ವಾರ ಬರುವುದೆಲ್ಲವೂ ಲಾಭವಾಗಲಿದೆ ಎಂದರು.

 

ಹಾಗೇನೇ ಇನ್ನೊಂದು ಮುಖ್ಯ ವಿಷಯವೇನೆಂದರೆ ಸಖತ್ ಸಿನಿಮಾ ನೆಟ್ ಫ್ಲಿಕ್ಸ್ ಗೆ ಮಾರಾಟವಾಗಿದ್ದು,  OTT ಯಲ್ಲಿ ಪ್ರದರ್ಶನಗೊಳ್ಳಲಿದೆ. ಟಿವಿ ಪ್ರಸಾರದ ಹಕ್ಕನ್ನು ಉದಯ ಟಿವಿ ಖರೀದಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಿಸಿರುವ ಸಖತ್ ಸಿನಿಮಾ ಬಿಸಿನೆಸ್ ವಿಚಾರದಲ್ಲಿ ತಮಗೆ ತೃಪ್ತಿ ತಂದಿದೆ. ನಾವು ಖುಷಿಯಾಗಿದ್ದೇವೆ ಅಂತಾ ಕೆವಿಎನ್ ಸಂಸ್ಥೆಯ ಸುಪ್ರಿತ್ ಅಭಿಪ್ರಾಯ ವ್ಯಕ್ತಪಡಿಸಿದರು.

 

ಕೊರೋನಾ ಹಾಗೂ ಬೇರೆ ಸಿನಿಮಾಗಳ ನಡುವೆಯೂ ಸಖತ್ ಸಿನಿಮಾ ಸಕ್ಸಸ್ ಖುಷಿಯಲ್ಲಿದೆ. ಪರಭಾಷಾ ಸಿನಿಮಾಗಳಿಗೆ ಸೆಡ್ಡು ಹೊಡೆದು 25ನೇ ದಿನದತ್ತ ಮುನ್ನುಗುತ್ತಿರುವುದು ಇಡೀ ಸಖತ್ ಬಳಗಕ್ಕೆ ಖುಷಿಕೊಟ್ಟಿದೆ. ಗಣೇಶ್ ಅಭಿನಯದ ಸಖತ್ ಸಿನಿಮಾ ನವೆಂಬರ್ 26 ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಗಣಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದು, ಚಿತ್ರಕ್ಕೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದು, ನಿಶಾ ವೆಂಕಟ್ ಕೊಂಕಣಿ, ಸುಪ್ರಿತ್ ನಿರ್ಮಾಣ ಮಾಡಿದ್ದರು. ಉಳಿದಂತೆ ರಂಗಾಯಣ ರಘು, ರವಿಶಂಕರ್ ಗೌಡ, ಸಾಧು ಕೋಕಿಲ, ಧರ್ಮಣ್ಣ ಇನ್ನೂ ಹಲವರು ನಟಿಸಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,