Naan Kadhar Nan Hudugi Super.News

Sunday, May 22, 2022

238

ನಾನ್ಖದರ್ ನನ್ ಹುಡ್ಗಿ ಸೂಪರ್ ಹಾಡುಗಳ ಸಮಯ

ಹಳ್ಳಿ ಜೀವನ ಸುಂದರಎಂದು ಸಾರುವ ‘ನಾನ್‌ಖದರ್ ನನ್ ಹುಡ್ಗಿ ಸೂಪರ್’ ಚಿತ್ರದಲ್ಲಿ ಹೆಣ್ಣು ಮಕ್ಕಳಿಗೆ ಅರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ. ‘ಪ್ರೀತಿ ಹೆವಿ ಡೆಂಜರ್’ ಎಂದುಅಡಿಬರಹದಲ್ಲಿ ಹೇಳಿಕೊಂಡಿದ್ದಾರೆ.ಹತ್ತು ವರ್ಷಗಳ ಕಾಲ ಕನಸು ಕಂಡಿದ್ದ ಮಂಡ್ಯಕೆಂಪ ಸಿನಿಮಾಕ್ಕೆಕಥೆ, ಸಾಹಿತ್ಯ, ನಿರ್ದೇಶನಜತೆಗೆಗೌತಮ್‌ಚೀರಾಗ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿರುವುದು ಹೊಸ ಅನುಭವ. ಈ ಹಿಂದೆ ‘ಜನುಮದಜಾತ್ರೆ’ಯಲ್ಲಿಎರಡನೇ ನಾಯಕನಾಗಿದ್ದು, ಇದರಲ್ಲಿ ಪೂರ್ಣ ಪ್ರಮಾಣದ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.ಇವರ ಶ್ರಮಕ್ಕೆ ಸೋದರಿ ರೂಪ್.ಹೆಚ್.ಸಿ ಸಹ ನಿರ್ಮಾಪಕಿಯಾಗಿ ಬಂಡವಾಳ ಹೂಡಿದ್ದಾರೆ.

ಪ್ರಸಕ್ತ ಹೆಣ್ಣುಮಕ್ಕಳು ಪಟ್ಟಣ ಸೇರಿಕೊಂಡು ನಮ್ಮ ಸಂಸ್ಕಾರವನ್ನು ಮರೆತುಇಲ್ಲಿಗೆ ಹೊಂದಿಕೊಂಡಿರುತ್ತಾರೆ.ಅದರಿಂದ ಮೈತುಂಬ ಬಟ್ಟೆತೊಡದೆ ಚಟಗಳಿಗೆ ದಾಸರಾಗಿರುತ್ತಾರೆ.ಅದೇರೀತಿ ಹುಡುಗರು ಸಿಟಿಗೆ ಬಂದುತಂದೆತಾಯಿಗೆಗೌರವಕೊಡದೆ, ಪ್ರೀತಿಗೆ ಮರುಳಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆರೈತರ ಬವಣೆಗಳು ಏನೆಂಬುದನ್ನು ಹೇಳಲಾಗಿದೆ.ಮುಂದೆ ಅವಳ ಗುಣವನ್ನು ಒಳ್ಳೆ ದಾರಿಗೆತಂದು, ಆಕೆಯನ್ನು ಮತ್ತೆ ಹಳ್ಳಿಗೆ ವಾಪಸ್ಸುಕರೆದುಕೊಂಡು ಹೋಗುವುದೇ ಸಿನಿಮಾ ಸಾರಾಂಶವಾಗಿದೆ.ತಲಕಾಡು, ಮಂಡ್ಯಾ, ಕೆ.ಎಂ.ದೊಡ್ಡಿ, ಹಲಗೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ನಾಯಕಿ ಸೌಮ್ಯಇವರೊಂದಿಗೆ ಹೊಸ ಪ್ರತಿಭೆಗಳಾದ ಐಶ್ವರ್ಯ, ನಂದನ್, ಗೀತಾ, ಮಂಜುನಾಥ್, ಸುನಿಲ್‌ರಾಥೋಡ್, ಪ್ರವೀಣ್‌ಚೆನ್ನಬಸಯ್ಯ, ದಿಯಾನ್‌ಶೆಟ್ಟಿ, ಅನು, ಪಾರ್ವತಿ, ರೋಜಿ, ಅಜಿತ್, ಸ್ನೇಹ, ಧನುಶ್ರೀ, ಇಂದ್ರಕುಮಾರ್, ಗಾಯಿತ್ರಿ, ಕುಮಾರ್ ಯಾಸಿನ್ ಅಭಿನಯಿಸಿದ್ದಾರೆ.ಐದು ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ಮುಂಜಾನೆಮಂಜು, ಸಂಕಲನ ಮಾದೇಶ್‌ರಾಜ್, ನೃತ್ಯಜೆಡಿ, ಸಾಹಸ ಅಲ್ಟಿಮೇಟ್‌ಶಿವು-ಸುಪ್ರೀಮ್ ಸುಬ್ಬು, ಹಿನ್ನಲೆ ಶಬ್ದ ಅಲೆಕ್ಸ್, ಸಹ ನಿರ್ದೇಶನ ಪ್ರಶಾಂತ್‌ಗುಗ್ರಿಅವರದಾಗಿದೆ. ಪ್ರಚಾರದ ಸಲುವಾಗಿ ಮಂಡ್ಯಾ ಭಾಗದ ಗಣ್ಯರುಗಳು ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಿತಂಡಕ್ಕೆ ಶುಭ ಹಾರೈಸಿದರು.ಇದಕ್ಕೂ ಮುನ್ನಚಿತ್ರದ ತುಣುಕುಗಳು ದೊಡ್ಡ ಪರದೆ ಮೇಲೆ ಬಿತ್ತರಗೊಂಡಿತು.

 

Copyright@2018 Chitralahari | All Rights Reserved. Photo Journalist K.S. Mokshendra,