Vasanthi Nalidaga.Film News

Wednesday, September 14, 2022

148

ಹೊರಬಂತು ವಾಸಂತಿ ನಲಿದಾಗ ಟ್ರೇಲರ್

       ‘ವಾಸಂತಿ ನಲಿದಾಗ’ ಜನಪ್ರಿಯ ಹಾಡು ಈಗ ಚಿತ್ರದ ಶೀರ್ಷಿಕೆಯಾಗಿದೆ. ಈ ಹಿಂದೆ ‘ಪುಟಾಣಿ ಸಫಾರಿ’ ‘ವರ್ಣಮಯ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ರವೀಂದ್ರವೆಂಶಿ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ರೋಹಿತ್‌ಶ್ರೀಧರ್ ನಾಯಕ ಮತ್ತು ಭಾವನಾಶ್ರೀನಿವಾಸ್ ನಾಯಕಿ. ಇವರೊಂದಿಗೆ ಜೀವಿತವಸಿಷ್ಟ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜುಪಾವಗಡ, ಮಿಮಿಕ್ರಿಗೋಪಿ,ಧನಂಜಯ ಮುಂತಾದವರು ಬಣ್ಣ ಹಚ್ಚಿದ್ದಾರೆ. ಇನ್ನು ಉದ್ಯಮ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿಕುಮಾರ್ ಮೊದಲು ನಟಿಸಿದ್ದ ಸಿನಿಮಾದಲ್ಲಿ ಸುಧಾರಾಣಿ ಜೋಡಿಯಾಗಿದ್ದರು. ದೀರ್ಘಕಾಲದ ನಂತರ ಮತ್ತೆ ಈ ಚಿತ್ರದ ಮೂಲಕ ಒಟ್ಟಿಗೆ ಅಭಿನಯಿಸಿರುವುದು ವಿಶೇಷ.

      ಕಾಲೇಜಿನಲ್ಲಿ ನಡೆಯುವ ರೋಮ್ಯಾಂಟಿಕ್ ಕಥೆಯನ್ನು ಒಳಗೊಂಡಿದೆ.  ಜೇನುಗೂಡು ಸಿನಿಮಾ ಬ್ಯಾನರ್ ನಡಿ ಕೆ.ಎನ್.ಶ್ರೀಧರ್ ಮಗನನ್ನು ನಾಯಕ ಮಾಡುವ ಸಲುವಾಗಿ ನಿರ್ಮಾಣ ಮಾಡಿದ್ದಾರೆ. ಯೋಗರಾಜಭಟ್, ಡಾ.ವಿ.ನಾಗೇಂದ್ರಪ್ರಸಾದ್, ಗೌಸ್‌ಪೀರ್ ಸಾಹಿತ್ಯದ ಗೀತೆಗಳಿಗೆ ಶ್ರೀಗುರು ಸಂಗೀತ ಸಂಯೋಜಿಸಿದ್ದಾರೆ. ಪ್ರಮೋದ್‌ಭಾರತೀಯ ಛಾಯಾಗ್ರಹಣ, ಸಿ.ರವಿಚಂದ್ರನ್ ಸಂಕಲನ, ಸಾಹಸ ಜಾಗ್ವರ್‌ಸಣ್ಣ ಅವರದಾಗಿದೆ. ಸ್ಟಾರ್ ವಿತರಕ ಜಯಣ್ಣ-ಭೋಗೇಂದ್ರ ಅವರ ಮುಖಾಂತರ ಅಕ್ಟೋಬರ್ ೧೪ರಂದು ಚಿತ್ರವು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,