Shubhamangala.Film News

Thursday, September 15, 2022

156

ಶುಭಮಂಗಳ ಟ್ರೇಲರ್ ಬಿಡುಗಡೆ

         ೭೦ರ ದಶಕದಲ್ಲಿ ತೆರೆಕಂಡ ಚಿತ್ರಬ್ರಹ್ಮ ಪುಟ್ಟಣ್ಣಕಣಗಾಲ್ ನಿರ್ದೇಶನದ ‘ಶುಭಮಂಗಳ’ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಹೊಸ ಕತೆಯೊಂದಿಗೆ ಚಿತ್ರವೊಂದು ಸಿದ್ದಗೊಂಡಿದೆ. ಪ್ರಚಾರದ ಸಲುವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.  ಸಿಲ್ಕ್‌ಬೋರ್ಡ್, ಮಹಾಸಂಪರ್ಕ ಸೇರಿದಂತೆ ೨೦ಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್‌ಗೋಪಾಲ್ ಕಥೆ ಬರೆದು ಸಂಕಲನ ಮಾಡಿ ಆಕ್ಷನ್ ಕಟ್ ಹೇಳಿದ್ದಾರೆ. ಜತೆಗೆ ಆವ್ಯಕ್ತ ಬ್ಯಾನರ್‌ನಡಿ ಸ್ನೇಹಿತರೊಂದಿಗೆ ಸೇರಿಕೊಂಡು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಮದುವೆ ಮನೆಯಲ್ಲಿ ನಡೆಯುವ ಹಾಸ್ಯ, ಪ್ರೀತಿ, ಭಾವನೆಗಳ ಘಟನೆಗಳನ್ನು ಬಳಸಿಕೊಂಡು ಚಿತ್ರಕಥೆಯನ್ನು ಏಣೆಯಲಾಗಿದೆ. 

ಮದುವೆ ಮನೆಗೆ ಹೋದರೆ ಅಲ್ಲಿ ಎಮೋಷನ್, ಡ್ರಾಮಾ, ಕಾಮಿಡಿಯಂಥ ತುಂಬಾ ಕಥೆಗಳು ನಡೆಯುತ್ತಲೆ ಇರುತ್ತದೆ. ಅಂತಹ ಕಥೆಗಳಲ್ಲಿ ಐದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತ ಸನ್ನಿವೇಶಗಳು ಇರುಲಿದೆ.

        ತಾರಗಣದಲ್ಲಿ ಸಿದ್ದಾರ್ಥ್‌ಮಾದ್ಯಮಿಕ, ಮೇಘನಾಗಾಂವ್ಕರ್, ಹಿತಾಚಂದ್ರಶೇಖರ್, ರಾಕೇಶ್‌ಮಯ್ಯ, ಅದಿತಿರಾಮ್, ದೀಪ್ತಿನಾಗೇಂದ್ರ, ಅರುಣ್‌ಬಾಲಾಜಿ, ರಾಕೇಶ್‌ಮಯ್ಯ ಸೇರಿದಂತೆ ದೊಡ್ಡ ತಾರಬಳಗವಿದೆ. ಐದು ಹಾಡುಗಳಿಗೆ ಜ್ಯೂಡಾಸ್ಯಾಂಡಿ ಸಂಗೀತ ಸಂಯೋಜಸಿದ್ದಾರೆ. ರಾಕೇಶ್.ಬಿ.ರಾಜ್ ಛಾಯಾಗ್ರಹಣವಿದೆ. ಮದುವೆ ಮನೆಗಳಿಗೆ ತೆರಳಿ ಚಿತ್ರತಂಡವು ವಿಭಿನ್ನವಾಗಿ ಪ್ರಮೋಷನ್ ನಡೆಸುತ್ತಿದೆ. ಅಂದಹಾಗೆ ಸಿನಿಮಾವು ಅಕ್ಟೋಬರ್ ೧೪ರಂದು ತೆರೆಕಾಣಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,