Ragini Dwivedi.Bollywood.news

Wednesday, January 11, 2023

121

ಬಾಲಿವುಡ್ ಸಿನಿಮಾದಲ್ಲಿ ರಾಗಿಣಿ

      ಚಂದನವನದಲ್ಲಿ ತಮ್ಮದೆ ಛಾಪನ್ನು ಮೂಡಿಸಿಕೊಂಡು ತುಪ್ಪದ ರಾಣಿ ಎಂದೇ ಖ್ಯಾತರಾಗಿರುವ ರಾಗಿಣಿ ಮೊದಲ ಬಾರಿ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಈಗಾಗಲೇ  ಒಂದು ಹಂತದ ಚಿತ್ರೀಕರಣವು ಲಂಡನ್‌ದಲ್ಲಿ ಮುಗಿದಿದೆ. ಇದರನ್ವಯ ಮಾದ್ಯಮದವರನ್ನು ಭೇಟಿ ಮಾಡಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

      ಹದಿಮೂರು ವರ್ಷಗಳ ಚಿತ್ರರಂಗದ ಪಯಣ ಖುಷಿ ತಂದಿದೆ. ೨೦೨೨ರಲ್ಲಿ ಶೂಟಿಂಗ್‌ದಲ್ಲಿ ಬ್ಯುಸಿ ಆಗಿದ್ದೆ. ಈಗ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದು, ಹದನೈದು ದಿನಗಳ ಚಿತ್ರೀಕರಣ ಮುಗಿದಿದೆ. ಇದೊಂದು ಹಾರರ್ ಥ್ರಿಲ್ಲರ್ ಕಥೆ ಆಗಿದೆ. ಆಯುರ್‌ಶರ್ಮ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಹೆಸರು ‘ವಾಕ್ರೋ ಹೌಸ್’. ಸಂಪೂರ್ಣ ಮುಗಿದ ಮೇಲೆ ತಂಡದೊಂದಿಗೆ ಬರುತ್ತೇನೆ. ಇದರಲ್ಲಿ ಲಂಡನ್ ಮೂಲದ ಬುಕ್ ರೈಟರ್ ಪಾತ್ರ ಮಾಡುತ್ತಿದ್ದೇನೆ. ಹಿಂದಿ ಪ್ರಥಮ ಸಿನಿಮಾವೇ ಹಾರರ್ ಸಬ್ಜೆಕ್ಟ್ ಇರಲಿದೆ. ಒಳ್ಳೆಯ ನಿರೂಪಣೆ, ರೋಲ್ ಇರುವುದರಿಂದ ಸಹಜವಾಗಿ ಸಂತಸದಿಂದ ಇದ್ದೇನೆ. ಇದರ ಜತೆಗೆ ಮಲಯಾಳಂ, ತಮಿಳುದಲ್ಲಿ ಮೂರು, ತೆಲುಗುದಲ್ಲಿ ಒಂದು ಸಾಂಗ್ ಒಪ್ಪಿಕೊಂಡಿದ್ದೇನೆ. ಕನ್ನಡದಲ್ಲಿ ಎರಡರಲ್ಲಿ ಬ್ಯುಸಿ ಇದ್ದೇನೆ. ಒಟಿಟಿ ಬಂದು ನಮ್ಮಂತ ಕಲಾವಿದರಿಗೆ ದೊಡ್ಡ ವೇದಿಕೆಯಾಗಿದೆ ಎಂದರು.

 

Copyright@2018 Chitralahari | All Rights Reserved. Photo Journalist K.S. Mokshendra,