Siren.Film News

Tuesday, January 24, 2023

236

ಸದ್ದು ಮಾಡುತ್ತಿದೆ ಸೈರನ್ ಹಾಡುಗಳು

      ಗಾಯಕಿ ಮಂಗ್ಲಿ ಹಾಡಿರುವ ‘ಎಣ್ಣೆ ಹೊಡೆಯೋ ಟೈಮಲ್ಲಿ’ ಗೀತೆ ಬಿಡುಗಡೆಗೊಂಡು ಎಲ್ಲಡೆ ಸದ್ದು ಮಾಡುತ್ತಿದೆ. ಚಿನ್ಮಯ್ ಸಾಹಿತ್ಯದಲ್ಲಿ ಭಾರಧ್ವಜ್ ಸಂಗೀತ ಸಂಯೋಜಿಸಿದ್ದಾರೆ. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಲಹರಿ ವೇಲು ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ತನಿಖಾ ಜಾನರ್ ಕಥೆಯಲ್ಲಿ ಕೊಲೆಯ ಹಿನ್ನಲೆ ಬೇಧಿಸಿಕೊಂಡು ಹೊರಡುವ ಪೋಲೀಸ್ ಅಧಿಕಾರಿಯ ಸನ್ನಿವೇಶಗಳು ತುಂಬಾ ಕುತೂಹಲಕಾರಿಯಾಗಿ ಮೂಡಿಬಂದಿದೆ. ಪ್ರವೀರ್‌ಶೆಟ್ಟಿ ಪೋಲೀಸ್ ಅಧಿಕಾರಿಯಾಗಿ ನಾಯಕ, ಮಾಲಿವುಡ್‌ನ ಲಾಸ್ಯ ನಾಯಕಿಯಾಗಿ ಅವರೂ ಸಹ ಖಾಕಿಧಾರಣಿಯಾಗಿ  ಕಾಣಿಸಿಕೊಂಡಿದ್ದಾರೆ. 

. ಕಳೆದ ಮೂವತ್ತು ವರ್ಷಗಳಿಂದ ನಿರ್ದೇಶಕ ಮುರುಗದಾಸ್ ಸೇರಿದಂತೆ ಹಲವು ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿರುವ ರಾಜಾವೆಂಕಯ್ಯ ಸಿನಿಮಾ ಸಲುವಾಗಿ ಕನ್ನಡ ಕಲಿತು ಆಕ್ಷನ್ ಕಟ್ ಹೇಳಿದ್ದಾರೆ.

      ಡೆಕ್ಕನ್ ಕಿಂಗ್ ಬ್ಯಾನರ್‌ದಲ್ಲಿ ಬಿಜ್ಜುಶಿವಾನಂದ್ ನಿರ್ಮಾಣ ಮಾಡಿರುವುದು ಹೊಸ ಅನುಭವ. ನಾಗೇಶ್‌ಆಚಾರ್ ಛಾಯಾಗ್ರಹಣ, ಕಲೈ ನೃತ್ಯವಿದೆ. ಚಿತ್ರೀಕರಣ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿದೆ. ಫೆಬ್ರವರಿ ಮೂರನೇ ವಾರದಲ್ಲಿ ಕನ್ನಡ ಅಲ್ಲದೆ ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,