Raghavendra Chitravani.News

Wednesday, January 25, 2023

36

                    

ಶ್ರೀ  ರಾಘವೇಂದ್ರ  ಚಿತ್ರವಾಣಿ  ಪ್ರಶಸ್ತಿ ಪ್ರಕಟ

       ಕನ್ನಡ ಚಿತ್ರರಂಗದ  ಮೊದಲ ಪ್ರಚಾರಕರ್ತರೆಂಬ ಬಿರುದಿಗೆ ಪಾತ್ರರಾಗಿದ್ದ ಡಿ.ವಿ.ಸುದೀಂದ್ರ ಹುಟ್ಟುಹಾಕಿದ್ದ  ಶ್ರೀ ರಾಘವೇಂದ್ರ  ಚಿತ್ರವಾಣಿ ಸಂಸ್ಥೆ  ೨೫ ವರ್ಷ ತುಂಬಿದ ಸಂದರ್ಭದಲ್ಲಿ, ತನಗೆ ಅನ್ನ ನೀಡಿದವರನ್ನು ಮರೆಯದೆ ಹಿರಿಯ ನಿರ್ಮಾಪಕರು ಹಾಗೂ ಅನುಭವಿ ಪತ್ರಕರ್ತರುಗಳಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದರು.  ಅದು ಮುಂದುವರೆದು ಪ್ರತಿ ವರ್ಷ ನಡೆಯುತ್ತಾ ಬಂದಿದೆ. ಸದ್ಯ ಸುದೀಂದ್ರವೆಂಕಟೇಶ್ ಅಧೀನದಲ್ಲಿ  ಸುನಿಲ್ ಹಾಗೂ ವಾಸು ಇದ್ದಾರೆ. 

         ಕಳೆದ ವರ್ಷ ಕೋವಿಡ್ ಕಾರಣದಿಂದ  ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗಿರಲಿಲ್ಲ. ಹಾಗಾಗಿ ಕಳೆದ ವರ್ಷದ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಯನ್ನು ಈ ಸಲ ನೀಡಲಾಗುತ್ತಿದೆ. ಸಂಸ್ಥೆಯ ಸ್ಥಾಪಕರಾದ ಡಿ.ವಿ.ಸುಧೀಂದ್ರ ಅವರ ಜನ್ಮದಿನ ಜನವರಿ ೨೫ರ ಪ್ರಯುಕ್ತ ಕಲಾವಿದರ ಸಂಘದಲ್ಲಿ ಸಂಜೆ ೫ಕ್ಕೆ ನಡೆಯಲಿದೆ. ಈ ಸಂದರ್ಭದಲ್ಲಿ ೪೭ನೇ ವಾರ್ಷಿಕೋತ್ಸವ ಹಾಗೂ ೨೧ ಮತ್ತು ೨೨ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್‌ಬಣಕಾರ್, ನಟಿಯರಾದ ರಾಗಿಣಿ, ಎ ಚಿತ್ರದ ನಾಯಕಿ ಚಾಂದಿನಿ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಪ್ರಮುಖರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

                                  

 

 

Copyright@2018 Chitralahari | All Rights Reserved. Photo Journalist K.S. Mokshendra,