Sthabdha.Film News

Sunday, May 21, 2023

149

ಭ್ರಮೆಯ ಸುತ್ತ ನಡೆಯುವ ಸ್ತಬ್ಧ

      ಭ್ರಮೆ ಮತ್ತು ರಿಯಾಲಿಟಿ ನಡುವೆ ನಡೆಯುವ ಹಾರರ್ ಹಿನ್ನಲೆ ಹೊಂದಿರುವ ‘ಸ್ತಬ್ಧ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಕಲಾವಿದರ ಸಂಘದಲ್ಲಿ ನಡೆಯಿತು. ಸಚಿವ ರಾಮಲಿಂಗರೆಡ್ಡಿ ಪುತ್ರ ಶ್ರೀರಾಜ್‌ರಾಮಲಿಂಗರೆಡ್ಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಾಯಿ ಸಾಗರ ಫಿಲಂ ಫ್ಯಾಕ್ಟರಿ ಮೂಲಕ ಡಾ.ಡಿ.ವಿ.ವಿದ್ಯಾಸಾಗರ್ ನಿರ್ಮಿಸಿದ್ದು, ಲಾಲಿರಾಘವ ಆಕ್ಷನ್ ಕಟ್ ಹೇಳಿದ್ದಾರೆ.

       ನಾಯಕಿ ಹರ್ಷಿಕಾಪೂರ್ಣಚ್ಚಾ ಮಾತನಾಡಿ ಇಂದುಮತಿಯಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಒಂದರಲ್ಲಿ ಮುದ್ದು ಹುಡುಗಿಯಾಗಿದ್ದರೆ, ಮತ್ತೋಂದರಲ್ಲಿ ಹಾರರ್ ಟಚ್ ಇರುತ್ತದೆ. ಸಿನಿಮಾ ಒಪ್ಪಿಕೊಳ್ಳಲು ಎರಡು ಕಾರಣಗಳಿವೆ. ಒಂದು ಕಥೆ, ಇನ್ನೊಂದು ರಾಘಣ್ಣ. ಈಗಾಗಲೇ ಶಿವಣ್ಣ, ಪುನೀತ್‌ರಾಜ್‌ಕುಮಾರ್ ಅವರೊಂದಿಗೆ ನಟಿಸಿದ್ದೇನೆ. 

ತಂದೆಯಾಗಿ ರಾಘಣ್ಣ ಇದ್ದಾರೆ. ಕುತೂಹಲ ಕೆರಳಿಸುತ್ತದೆ ಎಂದು ಹೇಳಿದರು.

        ನಾಯಕನಾಗಿ ಪ್ರತಾಪ್‌ಸಿಂಹ ಇವರೊಂದಿಗೆ ಭಜರಂಗಿಪ್ರಸನ್ನ ಇದ್ದಾರೆ. ಸಂಗೀತ ಆರವ್‌ರಿಶಿಕ್, ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ, ನೃತ್ಯ ಸೈರಾರಮೇಶ್ ಅವರದಾಗಿದೆ. ಬೆಂಗಳೂರು, ಮಂಗಳೂರು, ಉಡುಪಿಯಲ್ಲಿ ೪೫ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಜೂನ್ ೯ರಂದು ಜನರಿಗೆ ತೋರಿಸಲು ತಂಡವು ಸಿದ್ದತೆ ಮಾಡಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,