Star.Film News

Monday, May 22, 2023

122

ಸ್ಟಾರ್ ಹೆಸರಿನಲ್ಲೊಂದು ಸಿನಿಮಾ

       ಚಿತ್ರರಂಗಕ್ಕೆ ತಾವು ಸ್ಟಾರ್ ಕಲಾವಿದ ಆಗಬೇಕೆಂದು ಹಲವು ಹೊಸ ಪ್ರತಿಭೆಗಳು ಬರುತ್ತಾರೆ. ಈಗ ಹೊಸಬರ ತಂಡವೊಂದು ‘ಸ್ಟಾರ್’ ಹೆಸರಿನಲ್ಲಿ ಚಿತ್ರವೊಂದನ್ನು ಸಿದ್ದಪಡಿಸುತ್ತಿದ್ದಾರೆ. ಶರತ್ ನಟಿಸುತ್ತಿರುವುದರ ಜತೆಗೆ ಲಯನ್ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ದಂಪತಿಗಳಾದ ಅನು-ವಿಜಯಸೂರ್ಯ ನಿರ್ದೇಶನವಿದೆ. ಸಿನಿಮಾದ ಕುರಿತಂತೆ ಮಾತನಾಡಿರುವ ಶರತ್ ನಾನು ಇದುವರೆಗೂ ಪೋಷಕ ಕಲಾವಿದ, ಒಂದು ರಿಯಾಲಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದೆ. ಮೊದಲ ಬಾರಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದೇನೆ. ಇದೊಂದು ನೈಜ ಕಥೆಯನ್ನು ಹೊಂದಿದ್ದು, ಶೇಕಡ ೧೦೦ರಷ್ಟು ಮನರಂಜನೆ ಸಿಗುತ್ತದೆ. ಅಪ್ಪ ಪ್ರಕಾಶ್ ಫೈಟರ್ ಆಗಿದ್ದರು. ಅದರಂತೆ ಇದರಲ್ಲೂ ಸಾಹಸಗಳು ಇರುತ್ತದೆ. ಅವೆಲ್ಲವು ಸಹಜವಾಗಿರುತ್ತದೆ. ನಿರ್ದೇಶಕ ಗಿರಿರಾಜ್ ಅವರಿಂದ ತರಭೇತಿ ಪಡೆದುಕೊಂಡಿದ್ದೇನೆ ಎಂದರು.

      ಭೂಗತಲೋಕದ ಸನ್ನಿವೇಶಗಳು, ಲಾಂಗ್ ಮಹತ್ವದ ಪಾತ್ರ ವಹಿಸಲಿದೆ. ಇವತ್ತು ಏನು ನಡೆಯುತ್ತಿದೆ ಎನ್ನುವುದಕ್ಕಿಂತ, ಹಿಂದಿನ ಕಾಲದಲ್ಲಿ ಶುರುವಾಗಿ, ಈಗ ಹೇಗೆ ಮುಂದುವರೆಯುತ್ತಿದೆ ಎಂದು ಹೇಳಹೊರಟಲಿದೆಯಂತೆ. ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ನಾಯಕಿಯಾಗಿ ರಜತ್ ಇವರೊಂದಿಗೆ ಕಡ್ಡಿವಿಶ್ವ, ಕೋಟೆಪ್ರಭಾಕರ್, ಮುರಳಿಮೋಹನ್, ಪ್ರದೀಪ್‌ಪರಾಕ್ರಮ, ಪೂರ್ಣಿಮಾ ಮುಂತಾದವರು ಅಭಿನಯಿಸುತ್ತಿದ್ದಾರೆ. ವಿಕಾಸ್‌ವಸಿಸ್ಠ ಸಂಗೀತ, ಪ್ರವೀಣ್.ಎಂ.ಪ್ರಭು ಛಾಯಾಗ್ರಹಣ, ಶಶಿಧರ್‌ಪುಟ್ಟೇಗೌಡ ಛಾಯಾಗ್ರಹಣ ಇರಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,