Meter Haaki.News

Monday, May 22, 2023

121

ಮೀಟರ್ ಹಾಕಿ ಪ್ಲೀಸ್ ವೆಬ್ ಸೀರೀಸ್

      ಕನ್ನಡದಲ್ಲಿ ವೈಬ್ ಸೀರೀಸ್ ಹಾವಳಿ ಜೋರಾಗುತ್ತಿದೆ. ನಟ,ನಿರೂಪಕ ವಿನಾಯಕಜೋಷಿ ಪರಿಕಲ್ಪನೆಯ ‘ಮೀಟರ್ ಹಾಕಿ ಪ್ಲೀಸ್’ ಹೊಸ ವೆಬ್ ಸೀರೀಸ್‌ಗೆ ನಿರ್ದೇಶನ, ನಿರೂಪಣೆ ಜತೆಗೆ ನಿರ್ಮಾಣ ಮಾಡಿದ್ದಾರೆ. ಮೊನ್ನೆ ಟ್ರೇಲರ್ ಹಾಗೂ ಮೊದಲ ಸಂಚಿಕೆಯ ಪ್ರದರ್ಶನ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಾಲನಟನಾಗಿ ಚಿತ್ರರಂಗಕ್ಕೆ ಬಂದು ಮುಂದೆ ನಾಯಕನಾದೆ. ೮೫ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಕೆಲವು ವರ್ಷಗಳ ಹಿಂದೆ ‘ಜೋಶ್ ಲೆ’ ಎಂಬ ವೆಬ್ ಸೀರೀಸ್ ನಿರ್ಮಿಸಿದ್ದೆ. ಈಗ ‘ಮೀಟರ್ ಹಾಕಿ’ ಸಿದ್ದಪಡಿಸಿದ್ದೇನೆ. ಆಟೋ ಚಾಲಕರ ಜೀವನ ಹಾಗೂ ಅವರ ಸಾಧನೆಯನ್ನು ಪರಿಚಯಿಸಲಾಗಿದೆ. 

ಸುಮಾರು ಏಳು ಕಂತುಗಳಲ್ಲಿ ಯೂ ಟ್ಯೂಬ್ ಮತ್ತು ಸ್ಪಾಟಿಫಿಯಲ್ಲಿ ಪ್ರಸಾರವಾಗಲಿದೆ. ಇದಕ್ಕಾಗಿಯೇ ಕರ್ನಾಟಕದಾದ್ಯಂತ ಇರುವ ಹತ್ತಕ್ಕೂ ಹೆಚ್ಚು ಜನಪ್ರಿಯ ಆಟೋ ಚಾಲಕರನ್ನು ಸಂದರ್ಶಿಸಿ ಮಾಹಿತಿ ಕಲೆ ಹಾಕಲಾಗಿದೆ.

       ಪ್ರತಿ ಕಾರ್ಯಕ್ರಮವು ೪೦ ನಿಮಷಗಳು ಇರಲಿದೆ. ಸುಮಾರು ೨೫ ಜನರ ತಂಡ ಪರಿಶ್ರಮ ಸಿದ್ದಗೊಂಡಿದೆ. ಹಲವು ಪ್ರಾಯೋಜಕರ ಬೆಂಬಲವೂ ಸಿಕ್ಕಿದೆ ಎಂದರು. ‘ಗಂಧದ ಗುಡಿ’ ನಿರ್ದೇಶಕ ಅಮೋಘವರ್ಷ, ಧರ್ಮೇಂದ್ರಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಆಟೋ ಚಾಲಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

 

Copyright@2018 Chitralahari | All Rights Reserved. Photo Journalist K.S. Mokshendra,